ಚಂಡೀಗಢ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಮರ ಬಿದ್ದು ವಿದ್ಯಾರ್ಥಿ ಸಾವು

ಚಂಡೀಗಢದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಮರ ಬಿದ್ದು ಒಬ್ಬ ವಿದ್ಯಾರ್ಥಿ ಸಾವನ್ನಪ್ಪಿದ್ದು, 14 ಮಂದಿ ಗಾಯಗೊಂಡಿದ್ದಾರೆ

ಶಾಲಾ ಆವರಣದಲ್ಲಿ ಆಟವಾಡುತ್ತಿದ್ದ ವೇಳೆ ಮರ ಬಿದ್ದು ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಇನ್ನೂ 14 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಶುಕ್ರವಾರ ಬೆಳಗ್ಗೆ ಚಂಡೀಗಢದ ಸೆಕ್ಟರ್ 9 ರ ಅಡಿಯಲ್ಲಿ ಕಾರ್ಮೆಲ್ ಗುಲ್ಸ್ ಕಾನ್ವೆಂಟ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ಶಾಲೆಯ ಆವರಣದಲ್ಲಿ ಬಹಳ ಹಳೆಯದಾದ ಮರವಿತ್ತು. ಇದು 250 ವರ್ಷ ಹಳೆಯ ಮರ ಎನ್ನಲಾಗಿದೆ. ಸುಮಾರು 70 ಅಡಿ ಎತ್ತರ ಇದ್ದ ಈ ಮರ ಬಿದ್ದು ಓರ್ವ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ.

ಈ ಮರವನ್ನು ಚಂಡೀಗಢ ಆಡಳಿತವು ಪಾರಂಪರಿಕ ಮರವೆಂದು ಗುರುತಿಸಿತ್ತು. ಬೆಳಿಗ್ಗೆ ಕೆಲವು ವಿದ್ಯಾರ್ಥಿಗಳು ಶಾಲೆಯ ಆವರಣದಲ್ಲಿ ಆಟವಾಡುತ್ತಿದ್ದರು… ಈ ವೇಳೆ ಕೆಲವು ವಿದ್ಯಾರ್ಥಿಗಳು ಮರದ ಕೆಳಗೆ ಆಟವಾಡುತ್ತಿದ್ದಾಗ ಮರದ ಒಂದು ಭಾಗ ಕುಸಿದು ಬಿದ್ದಿದೆ.

ಬೃಹತ್ ಮರ ಬಿದ್ದು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇತರ 14 ಮಂದಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಪೊಲೀಸರು ಶಾಲಾ ಆವರಣವನ್ನು ಸಂಪೂರ್ಣ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಚಂಡೀಗಢ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಮರ ಬಿದ್ದು ವಿದ್ಯಾರ್ಥಿ ಸಾವು - Kannada News

One Student Dead 14 Injured As Tree Falls On Them In Carmel Convent School Chandigarh

Follow us On

FaceBook Google News