ಕೇವಲ 8ನೇ ತರಗತಿ ಪಾಸ್ ಆಗಿದ್ರು ಸಿಗುತ್ತೆ ಸರ್ಕಾರಿ ಕೆಲಸ; ಈ ಕೂಡಲೇ ಅಪ್ಲೈ ಮಾಡಿ

ಭಾರತೀಯ ಅಂಚೆ ಇಲಾಖೆ (Indian Post department) ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ನೀವು ಅತಿ ಕಡಿಮೆ ಶಿಕ್ಷಣ ಪಡೆದಿದ್ದು ಕೈತುಂಬಾ ಸಂಬಳ ಕೊಡುವಂತಹ ಸರ್ಕಾರಿ ನೌಕರಿ (government salary) ಯನ್ನೇ ಹುಡುಕುತ್ತಿದ್ದರೆ ನಿಮಗೆ ಇದು ಸುವರ್ಣ ಅವಕಾಶ.

Indian post office ಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಅಂಚೆ ಇಲಾಖೆ (Indian Post department) ನೇಮಕಾತಿ ಅಧಿಸೂಚನೆ ಹೊರಡಿಸಿದ್ದು ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಭಾರತೀಯ ಅಂಚೆ ಕಚೇರಿ ನೇಮಕಾತಿ 2024 (Post office recruitment 2024)

ಭಾರತೀಯ ಅಂಚೆ ಕಚೇರಿ ನೇಮಕಾತಿ ಅಧಿಸೂಚನೆಯ ಪ್ರಕಾರ ಅಂಚೆ ಕಚೇರಿಯಲ್ಲಿ ಖಾಲಿ ಇರುವ ವೆಹಿಕಲ್ ಮೆಕಾನಿಕ್ (motor vehicle mechanic) ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಮತ್ತಿತರ ವಿವರಣೆಗಳನ್ನು ಈ ಲೇಖನದಲ್ಲಿ ಕೊಡಲಾಗಿದೆ ಮುಂದೆ ಓದಿ.

ಕೇವಲ 8ನೇ ತರಗತಿ ಪಾಸ್ ಆಗಿದ್ರು ಸಿಗುತ್ತೆ ಸರ್ಕಾರಿ ಕೆಲಸ; ಈ ಕೂಡಲೇ ಅಪ್ಲೈ ಮಾಡಿ - Kannada News

ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ ಹುದ್ದೆಗಳು! (Post office jobs)

ಮೋಟಾರ್ ವೆಹಿಕಲ್ ಮೆಕ್ಯಾನಿಕ್ ಹುದ್ದೆ – 1 ಪೋಸ್ಟ್ ಖಾಲಿ ಇದೆ.

ವಿದ್ಯಾರ್ಹತೆ (Education Qualification)

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆ ಪ್ರಕಾರ, ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಲ್ಲಿ ಕನಿಷ್ಠ 8ನೇ ತರಗತಿ ಪಾಸಾಗಿರುವ ಅಭ್ಯರ್ಥಿ ಅರ್ಜಿ ಸಲ್ಲಿಸಬಹುದು.

ವಯೋಮಿತಿ (Age limit)

ಜುಲೈ 1 2023ಕ್ಕೆ 18 ವರ್ಷ ತುಂಬಿದ ಹಾಗೂ 30 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಮೀಸಲಾತಿಗೆ ಅನುಗುಣವಾಗಿ ವಯೋಮಿತಿ ಸಡಿಲಿಕೆ ಇರುತ್ತದೆ ಎಂದು ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Post office recruitment 2024ವೇತನ (Salary)

ಭಾರತೀಯ ಅಂಚೆ ಇಲಾಖೆ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿರುವ ಪ್ರಕಾರ ಮೆಕಾನಿಕ್ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗೆ ಪ್ರತಿ ತಿಂಗಳು ರೂ. 19,900-63,200 ಅವರಿಗೆ ವೇತನ ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ ಮತ್ತು ಉದ್ಯೋಗ ಸ್ಥಳ (selection process and recruitment place)

ಅಭ್ಯರ್ಥಿಯನ್ನು ಕ್ವಾಲಿಫಿಕೇಶನ್,
ಡ್ರೈವಿಂಗ್ ಲೈಸೆನ್ಸ್ ಹಾಗೂ ಕಾಂಪಿಟೇಟಿವ್ ಟ್ರೇಡ್ ಟೆಸ್ಟ್ ಮಾಡಿ ಆಯ್ಕೆ ಮಾಡಲಾಗುವುದು ಆಯ್ಕೆಯಾದ ಅಭ್ಯರ್ಥಿ ಬಿಹಾರದ ಪಾಟ್ನಾ ದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30 ಜನವರಿ 2024. (Last date to apply January 30 2024)

ಅರ್ಜಿ ಸಲ್ಲಿಸುವುದು ಹೇಗೆ! (How to apply)

ಆಫ್ಲೈನ್ ನಲ್ಲಿ ಪೋಸ್ಟ್ ನಲ್ಲಿ ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ. ಭರ್ತಿ ಮಾಡಿದ ಅರ್ಜಿ ಫಾರಂ ಹಾಗೂ ಅಗತ್ಯ ದಾಖಲೆಗಳನ್ನು ಒಂದು ಲಕೋಟೆಯ ಒಳಗೆ ಹಾಕಿ ಈ ವಿಳಾಸಕ್ಕೆ ಪೋಸ್ಟ್ ಮಾಡಿ.

Address:
ವ್ಯವಸ್ಥಾಪಕರ ಕಚೇರಿ, ಮೇಲ್ ಮೋಟಾರ್ ಸೇವೆ, GPO ಕ್ಯಾಂಪಸ್
ಪಾಟ್ನಾ-800001

Only 8th class pass can get government job, Apply now

Follow us On

FaceBook Google News

Only 8th class pass can get government job, Apply now