10ನೇ ತರಗತಿ ಪಾಸ್ ಆಗಿದ್ರೆ ಸಾಕು, ಸಿಗುತ್ತೆ ಸರ್ಕಾರಿ ಉದ್ಯೋಗ; 63 ಸಾವಿರ ಸಂಬಳ! ಇಂದೇ ಅಪ್ಲೈ ಮಾಡಿ
ಭಾರತೀಯ ಅಂಚೆ ಕಚೇರಿಯಲ್ಲಿ (Post Office) ಖಾಲಿ ಇರುವ ಕೆಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ನೀವು 10ನೇ ತರಗತಿ ತೇರ್ಗಡೆ (SSLC) ಹೊಂದಿದ್ದೀರಾ? ನಿಮಗೂ ಸರ್ಕಾರಿ ನೌಕರಿ ಗಿಟ್ಟಿಸಿಕೊಳ್ಳಬೇಕು ಎನ್ನುವ ಆಸೆ ಇದೆಯಾ? ಹಾಗಾದ್ರೆ ಈ ಕೂಡಲೇ ಈ ಸರ್ಕಾರಿ ಕೆಲಸಕ್ಕೆ ಅಪ್ಲೈ ಮಾಡಿ. ಕೈತುಂಬ ಸಂಬಳ ಸಿಗುವುದು ಮಾತ್ರವಲ್ಲದೆ ಲೈಫ್ ಟೈಮ್ (Lifetime) ಭರವಸೆಯ ಉದ್ಯೋಗ ಪಡೆದುಕೊಳ್ಳಬಹುದು.
ಅಂಚೆ ಕಚೇರಿಯಲ್ಲಿ ಖಾಲಿ ಇದೆ ಈ ಹುದ್ದೆಗಳು: (post office job)
ಭಾರತೀಯ ಅಂಚೆ ಕಚೇರಿಯಲ್ಲಿ (Post Office) ಖಾಲಿ ಇರುವ ಕೆಲವು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ನಿಮಗೂ ಆಸಕ್ತಿ ಇದ್ದರೆ ಈ ಕೂಡಲೇ ಅಪ್ಲೈ ಮಾಡಿ.
ಖಾಲಿ ಇರುವ ಹುದ್ದೆಗಳು;
ಭಾರತೀಯ ಅಂಚೆ ಕಚೇರಿಯಲ್ಲಿ ಖಾಲಿ ಇರುವ 6 ಸ್ಟಾಫ್ ಡ್ರೈವರ್ (staff driver) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬೇಕಾಗಿರುವ ಅರ್ಹತೆಗಳು;
ಪ್ರಮಾಣ ಪತ್ರ ಹೊಂದಿರಬೇಕು. ಭಾರತೀಯ ಅಂಚೆ ಕಚೇರಿ ಅಧಿ ಸೂಚನೆಯ ಪ್ರಕಾರ, ಅಭ್ಯರ್ಥಿಯ ವಯಸ್ಸು ನವೆಂಬರ್ 30 2023 ಮೂರಕ್ಕೆ 56 ವರ್ಷ ಮೀರಿರಬಾರದು. ಡ್ರೈವಿಂಗ್ ಲೈಸೆನ್ಸ್ (driving licence) ಹಾಗೂ ಡ್ರೈವಿಂಗ್ ನಲ್ಲಿ ಅನುಭವ ಇರಬೇಕು.
ವೇತನ: (salary)
ಭಾರತೀಯ ಅಂಚೆ ಕಚೇರಿ ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅರ್ಹ ಅಭ್ಯರ್ಥಿಗಳಿಗೆ ರೂ.19, 900ದಿಂದ ರೂ. 63,200 ವರೆಗೆ ವೇತನ ಸಿಗುತ್ತದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 30 2023. ಇನ್ನೂ ಡ್ರೈವಿಂಗ್ ಟೆಸ್ಟ್ (Driving test) ಮೂಲಕ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು ನವದೆಹಲಿ (New Delhi) ಯಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.
ಅರ್ಜಿ ಸಲ್ಲಿಸುವುದು ಹೇಗೆ? (How to apply)
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು, ಡ್ರೈವಿಂಗ್ ಲೈಸೆನ್ಸ್ (Driving License), ಆಧಾರ್ ಕಾರ್ಡ್ (Aadhaar Card), ಬ್ಯಾಂಕ್ ವಿವರ (Bank Details), ಫೋನ್ ನಂಬರ್, ಫೋಟೋ, ಮೊದಲಾದ ವಿವರಗಳೊಂದಿಗೆ ಈ ವಿಳಾಸಕ್ಕೆ ಕಳುಹಿಸಿ.
ವಿಳಾಸ: O/o ಸೀನಿಯರ್ ಮ್ಯಾನೇಜರ್
ಮೇಲ್ ಮೋಟಾರ್ ಸೇವೆ
C-121
ನರೈನಾ ಇಂಡಸ್ಟ್ರಿಯಲ್ ಏರಿಯಾ ಹಂತ-I
ನರೈನಾ
ನವದೆಹಲಿ-110028
Passing class 10th is enough to get a government job, 63 thousand salary
Follow us On
Google News |