Patna High Court, ಐಎಎಸ್ ಅಧಿಕಾರಿ ವಿರುದ್ಧ ಸಿಟ್ಟಿಗೆದ್ದ ನ್ಯಾಯಾಧೀಶರು

Patna High Court, ಬಿಹಾರದ ಐಎಎಸ್ ಅಧಿಕಾರಿಯನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Patna High Court – ಪಾಟ್ನಾ: ಇದು ಸಿನಿಮಾ ಹಾಲ್ ಅಂದುಕೊಂಡಿದ್ದೀರಾ? ಬಿಹಾರದ ಐಎಎಸ್ ಅಧಿಕಾರಿಯನ್ನು ನ್ಯಾಯಾಧೀಶರು ತರಾಟೆಗೆ ತೆಗೆದುಕೊಂಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಪಾಟ್ನಾ ಹೈಕೋರ್ಟ್ ನ್ಯಾಯಾಧೀಶರು ಮತ್ತು ನಗರಾಭಿವೃದ್ಧಿ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಆನಂದ್ ಕಿಶೋರ್ ನಡುವಿನ ಸಂಭಾಷಣೆಯ ವಿಡಿಯೋ ತುಣುಕು ಹರಿದಾಡುತ್ತಿದೆ.

ವಿಚಾರಣೆ ವೇಳೆ ಆನಂದ್ ಕಿಶೋರ್ ಬಿಳಿ ಶರ್ಟ್ ಧರಿಸಿ ತೆರೆದ ಕಾಲರ್ ನಲ್ಲಿ ಕಾಣಿಸಿಕೊಂಡಿದ್ದರು. ಇದರಿಂದ ಸಿಟ್ಟಿಗೆದ್ದ ನ್ಯಾಯಾಧೀಶರು, ‘ಇದು ಸಿನಿಮಾ ಹಾಲ್ ಅಂತ ಅಂದುಕೊಂಡಿದ್ದೀರಾ? ನ್ಯಾಯಾಲಯಕ್ಕೆ ಹಾಜರಾಗುವುದು ಹೇಗೆ ಎಂದು ಗೊತ್ತಿಲ್ಲವೇ? IAS ತರಬೇತಿಯಲ್ಲಿ ಕಲಿತಿಲ್ಲವೇ? ಎಂದು ಛೀಮಾರಿ ಹಾಕಿದರು.

Patna High Court, ಐಎಎಸ್ ಅಧಿಕಾರಿ ವಿರುದ್ಧ ಸಿಟ್ಟಿಗೆದ್ದ ನ್ಯಾಯಾಧೀಶರು - Kannada News

Patna High Court Judge Dismisses Bihar IAS

Follow us On

FaceBook Google News

Read More News Today