ಈ ಯೋಜನೆಗೆ ಸೇರುವ ರೈತರಿಗೆ ಜೂನ್ ತಿಂಗಳಿಂದ ₹2000 ಸಿಗಲಿದೆ! ಮೇ 31 ಅಂತಿಮ ದಿನ
ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ 20ನೇ ಹಂತದ ಹಣವನ್ನು ಪಡೆಯಲು ರೈತರು ಮೇ 31ರೊಳಗೆ e-KYC, ಭೂಮಿಯ ದಾಖಲೆ ದೃಢೀಕರಣ ಹಾಗೂ ಬ್ಯಾಂಕ್ ಲಿಂಕ್ ಅಗತ್ಯವಿದೆ.

- e-KYC, ಆಧಾರ್ ಲಿಂಕ್ ಮೇ 31ರೊಳಗೆ ಮುಗಿಸಬೇಕು
- ರೈತರು ಹೊಸದಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬಹುದು
- ಪಿಎಂ ಕಿಸಾನ್ ಹಣಕ್ಕಾಗಿ ಗ್ರಾಮ ಮಟ್ಟದಲ್ಲಿ ಅಭಿಯಾನ
ಪಿಎಂ ಕಿಸಾನ್ ಯೋಜನೆಯ (PM Kisan Scheme) 20ನೇ ಹಂತದ ಹಣ, ಜೂನ್ ತಿಂಗಳಲ್ಲಿ ಲಭಿಸುವ ಸಾಧ್ಯತೆ ಇದೆ. ಆದರೆ, ಈ ಮೊದಲು ಕೆಲವು ಪ್ರಮುಖ ಪ್ರಕ್ರಿಯೆಗಳನ್ನು ರೈತರು ಪೂರ್ಣಗೊಳಿಸಬೇಕಿದೆ.
ಸರ್ಕಾರ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದು, ಮೇ 31ರೊಳಗೆ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಬೇಕು. ಇಲ್ಲವಾದರೆ, ಈ ಬಾರಿ ₹2000 ನೆರವು ಲಭಿಸುವುದಿಲ್ಲ.
ಈ ಬಾರಿ ರೈತರ ಹಣ ನೇರವಾಗಿ ಖಾತೆಗೆ ಜಮೆಯಾಗಬೇಕೆಂದರೆ e-KYC, ಆಧಾರ್ ಲಿಂಕ್ (Aadhaar link to bank account) ಮತ್ತು ಭೂಮಿಯ ದಾಖಲೆ ದೃಢೀಕರಣ ಅಗತ್ಯವಾಗಿದೆ.
ಈ ಎಲ್ಲ ಸೇವೆಗಳನ್ನು ನಿಮ್ಮ ಮೊಬೈಲ್ ಅಥವಾ ಪಬ್ಲಿಕ್ ಸರ್ವಿಸ್ ಸೆಂಟರ್‌ನಲ್ಲಿ ಪೂರ್ಣಗೊಳಿಸಬಹುದು. ಕೇವಲ 5 ನಿಮಿಷಗಳಲ್ಲಿ ಬ್ಯಾಂಕ್ ಲಿಂಕ್ ಮಾಡಬಹುದಾದಷ್ಟು ಸುಲಭವಾಗಿದೆ.
ಇದನ್ನೂ ಓದಿ: ಅಂಬಾನಿ ಮನೆಯಲ್ಲಿ ದಿನಕ್ಕೆ 4000 ರೊಟ್ಟಿ! ಅಡುಗೆಯವರ ಸಂಬಳ ಎಷ್ಟು ಗೊತ್ತಾ?
ವಿಶೇಷ ಅಭಿಯಾನ
ಕೇಂದ್ರ ಸರ್ಕಾರ ಪಿಎಂ ಕಿಸಾನ್ ಯೋಜನೆಯನ್ನು ಯಶಸ್ವಿಯಾಗಿ ತಲುಪಿಸಲು ದೇಶಾದ್ಯಂತ ವಿಶೇಷ ಡ್ರೈವ್ ಆರಂಭಿಸಿದೆ. ಮೇ 1ರಿಂದ ಆರಂಭವಾದ ಈ ಡ್ರೈವ್, ಮೇ 31ರ ತನಕ ನಡೆಯಲಿದೆ.
ಇದರಲ್ಲಿ ಈಗಾಗಲೇ ಹೆಸರು ನೋಂದಾಯಿಸದ ರೈತರು ಹೊಸದಾಗಿ ನೋಂದಾಯಿಸಿಕೊಳ್ಳಬಹುದಾಗಿದೆ. ಗ್ರಾಮೀಣ ಮಟ್ಟದಲ್ಲಿ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ರೈತರಿಗೆ ಸಹಾಯ ನೀಡಲಾಗುತ್ತಿದೆ.
ಇತ್ತೀಚೆಗೆ ಕೆಲವು ರೈತರು ರೈತರ ಗುರುತಿನ ಚೀಟಿ ಇಲ್ಲದೆಯೇ ₹2000 ಮೊತ್ತ ಪಡೆದಿದ್ದರು. ಆದರೆ ಈ ಬಾರಿ ಸರ್ಕಾರ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಂಡಿದ್ದು, ರೈತ ಐಡಿ ಇಲ್ಲದೆ ಹಣ ನೀಡಲಾಗುವುದಿಲ್ಲ. ಎಲ್ಲಾ ಪ್ರಕ್ರಿಯೆಗಳು ಆನ್‌ಲೈನ್ ಮೂಲಕವೂ (online process) ಮುಗಿಸಬಹುದಾಗಿದೆ. ಅದಕ್ಕಾಗಿ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಸಾಕು.
ಬಡವರಿಗೆ ಸಿಹಿ ಸುದ್ದಿ ನೀಡಿದ ಮೋದಿಜಿ ಸರ್ಕಾರ, ಈ ಯೋಜನೆಗೆ ಅರ್ಜಿ ಆಹ್ವಾನ
ಪಿಎಂ ಕಿಸಾನ್ ಯೋಜನೆಯ (PM-KISAN Benefits) 20ನೇ ಹಂತದಲ್ಲಿ ಯಾವುದೇ ವಿಳಂಬವಿಲ್ಲದೇ ಹಣ ನಿಮ್ಮ ಖಾತೆಗೆ ಲಭಿಸಲು, ಮೇ 31ರೊಳಗೆ ಎಲ್ಲ ದಾಖಲೆಗಳನ್ನು ತಪಾಸಣೆ ಮಾಡಿಸಿ, ದೃಢೀಕರಿಸಬೇಕು. ನಿಮ್ಮ ಗ್ರಾಮ ಪಂಚಾಯತ್, CSC ಕೇಂದ್ರ ಅಥವಾ ಅಧಿಕೃತ ವೆಬ್‌ಸೈಟ್ ಮೂಲಕ ನೀವು ಈ ಕಾರ್ಯವನ್ನು ನಿರ್ವಹಿಸಬಹುದು.
PM Kisan Scheme, Last Date Alert for Farmers




