ಜಾರ್ಖಂಡ್ ಚುನಾವಣಾ ಪ್ರಚಾರ, ಭ್ರಷ್ಟರನ್ನು ಬಿಜೆಪಿ ಬಿಡುವುದಿಲ್ಲ: ಪ್ರಧಾನಿ ಮೋದಿ
ರಾಂಚಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಅವರ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಆರೋಪಿಸಿದ್ದಾರೆ. ಜಾರ್ಖಂಡ್ ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿ ಸಿಎಂ ಹೇಮಂತ್ ಸೊರೇನ್ ಸರ್ಕಾರವನ್ನು ಪ್ರಧಾನಿ ಮೋದಿ ಟೀಕಿಸಿದರು.
ಜಾರ್ಖಂಡ್‌ನಲ್ಲಿ ಅಕ್ರಮ ಗಣಿಗಾರಿಕೆ ಹಗರಣದ ಹೆಸರಿನಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಜನರನ್ನು ಲೂಟಿ ಮಾಡಿದೆ. ರಾಜ್ಯದಲ್ಲಿ ದೊಡ್ಡ ಮೊತ್ತದ ಹಣ ವಸೂಲಿಯಾಗಿದೆ ಎಂದರು. ಜಾರ್ಖಂಡ್‌ನ ಬೊಕಾರೊದಲ್ಲಿ ಭಾನುವಾರ ಆಯೋಜಿಸಿದ್ದ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಭಾಗವಹಿಸಿ ಮಾತನಾಡಿದರು.
ಸರ್ಕಾರಿ ಕಾಲೇಜುಗಳಿಗೆ ಕೇಸರಿ ಬಣ್ಣ ಬಳಿಯಲು ರಾಜಸ್ಥಾನ ಸರ್ಕಾರ ಆದೇಶ
ಸಿಎಂ ಹೇಮಂತ್ ಸೊರೇನ್ ಸರ್ಕಾರ ಜಾರ್ಖಂಡ್ ಲೂಟಿ ಮಾಡಿದೆ. ನಾವು ಸರ್ಕಾರ ರಚಿಸಿದ ನಂತರ ಈ ಭ್ರಷ್ಟರನ್ನು ಶಿಕ್ಷಿಸಲು ನ್ಯಾಯಾಲಯದಲ್ಲಿ ಹೋರಾಡುತ್ತೇವೆ ಎಂದು ಭರವಸೆ ನೀಡುತ್ತೇವೆ. ನಿಮಗೆ (ಜನರಿಗೆ) ನ್ಯಾಯಯುತವಾಗಿ ಸೇರಿರುವ ಹಣವನ್ನು ನಿಮ್ಮ ಅನುಕೂಲಕ್ಕಾಗಿ, ಭವಿಷ್ಯಕ್ಕಾಗಿ ಬಳಸಲಾಗುತ್ತದೆ ಎಂದರು.
PM Modi Narendra Jharkhand election campaign
Our Whatsapp Channel is Live Now 👇