ಪ್ರಧಾನಿ ಮೋದಿ ಅವರ ಆಸ್ತಿ ಮೌಲ್ಯ 2.23 ಕೋಟಿ !
ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಮೌಲ್ಯ 2.23 ಕೋಟಿ. ಅದರಲ್ಲಿ ಹೆಚ್ಚಿನ ಮೊತ್ತ ಬ್ಯಾಂಕ್ ಠೇವಣಿ ರೂಪದಲ್ಲಿದೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ಮೌಲ್ಯ 2.23 ಕೋಟಿ. ಅದರಲ್ಲಿ ಹೆಚ್ಚಿನ ಮೊತ್ತ ಬ್ಯಾಂಕ್ ಠೇವಣಿ ರೂಪದಲ್ಲಿದೆ. ಆದರೆ ಅವರ ಹೆಸರಿನಲ್ಲಿ ಯಾವುದೇ ಸ್ಥಿರಾಸ್ತಿ ಇಲ್ಲ. ಅವರು ಗಾಂಧಿನಗರದ ಸ್ಥಳವನ್ನು ದಾನ ಮಾಡಿದರು. ಅವರು ಬಾಂಡ್, ಷೇರು, ಮ್ಯೂಚುವಲ್ ಫಂಡ್‌ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ. ಸ್ವಂತ ವಾಹನವಿಲ್ಲ. ಮೋದಿ ಬಳಿ ನಾಲ್ಕು ಚಿನ್ನದ ಉಂಗುರಗಳಿವೆ. ಅವುಗಳ ಮೌಲ್ಯ 1.73 ಲಕ್ಷ.
ಮಾರ್ಚ್ 31 ರಂದು ನೀಡಿದ ಘೋಷಣೆಯ ಆಧಾರದ ಮೇಲೆ ಈ ವಿವರಗಳು ಬಹಿರಂಗವಾಗಿದೆ. ವರ್ಷದ ಅವಧಿಯಲ್ಲಿ ಮೋದಿಯವರ ಆಸ್ತಿ 26.13 ಲಕ್ಷದಷ್ಟು ಹೆಚ್ಚಾಗಿದೆಯಂತೆ. ಗುಜರಾತಿನ ಸಿಎಂ ಆಗಿದ್ದ ಅವಧಿಯಲ್ಲಿ ಮೂರು ಜನ ಸೇರಿ ವಸತಿ ನಿವೇಶನ ಖರೀದಿಸಲಾಗಿತ್ತು. ಆದರೆ ಫ್ಲಾಟ್ ದೇಣಿಗೆ ಪಡೆದಂತೆ ಕಾಣುತ್ತದೆ.
ಘೋಷಣೆಯ ಪ್ರಕಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಆಸ್ತಿ 2.54 ಕೋಟಿ ಮತ್ತು ಸ್ಥಿರ ಆಸ್ತಿ 2.97 ಕೋಟಿ. ಸಂಪುಟದ 29 ಸಚಿವರಲ್ಲಿ ಧರ್ಮೇಂದ್ರ ಪ್ರಧಾನ್, ಜ್ಯೋತಿರಾದಿತ್ಯ ಸಿಂಥಿಯಾ, ಆರ್ ಕೆ ಸಿಂಗ್, ಹರ್ದೀಪ್ ಸಿಂಗ್ ಪುರಿ, ಪುರುಷೋತ್ತಮ್ ರೂಪಾಲಾ ಮತ್ತು ಜಿ ಕಿಶನ್ ರೆಡ್ಡಿ ತಮ್ಮ ಆಸ್ತಿ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
pm Modi total assets rise by Rs 26 lakh to Rs 2.23 crore
Follow us On
Google News |