ಬಂಪರ್ ಯೋಜನೆ! ಮೋದಿಜಿ ಸರ್ಕಾರದಿಂದ 3 ಲಕ್ಷ ಪಡೆಯಿರಿ, ಮಾಹಿತಿ ನೋಡಿ ಅರ್ಜಿ ಹಾಕಿ
ಕೇಂದ್ರ ಸರ್ಕಾರದ ವಿಶ್ವಕರ್ಮ ಯೋಜನೆಯ ಮೂಲಕ ಕೈವೃತ್ತಿ ಮತ್ತು ಕೌಶಲ್ಯ ಕಾರ್ಮಿಕರಿಗೆ ತರಬೇತಿ, ಉಪಕರಣಗಳು ಮತ್ತು ಕಡಿಮೆ ಬಡ್ಡಿಯ ಸಾಲ ಸೌಲಭ್ಯ ದೊರಕಿಸಿ ಸ್ವಾವಲಂಬನೆಯತ್ತ ಮುನ್ನಡೆಸಲಾಗುತ್ತಿದೆ.

- ವಿಶ್ವಕರ್ಮ ಯೋಜನೆ ಅಡಿಯಲ್ಲಿ ₹3 ಲಕ್ಷವರೆಗೆ ಸಾಲ
- ಕೈವೃತ್ತಿ ಕಾರ್ಮಿಕರಿಗೆ ತರಬೇತಿ, ಉಪಕರಣ ಸಹಾಯ
- ಕಡಿಮೆ ಬಡ್ಡಿ ದರದಲ್ಲಿ ಸ್ವಯಂ ಉದ್ಯೋಗಕ್ಕೆ ಉತ್ತೇಜನ
ಕೈವೃತ್ತಿ ಮತ್ತು ಕುಲವೃತ್ತಿಗಳಲ್ಲಿ ತೊಡಗಿರುವ ಕಾರ್ಮಿಕರು ಆರ್ಥಿಕ ತೊಂದರೆಗಳಿಂದ ಹಿಂದೆ ಬೀಳದಂತೆ ಮಾಡಲು ಕೇಂದ್ರ ಸರ್ಕಾರ ‘ಪ್ರಧಾನಮಂತ್ರಿ ವಿಶ್ವಕರ್ಮ’ ಯೋಜನೆಯನ್ನು ಜಾರಿಗೆ ತಂದಿದೆ. ಶತಮಾನಗಳಿಂದ ಬಂದಿರುವ ಕೌಶಲ್ಯಗಳಿಗೆ ಹೊಸ ಶಕ್ತಿ ನೀಡುವುದೇ ಇದರ ಗುರಿ.
ಯಾರು ಅರ್ಹರು?
ಸ್ವಂತ ಕೈಯಿಂದ ಕೆಲಸ ಮಾಡುವ, ಅಸಂಘಟಿತ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ (Own Business) ನಡೆಸುವವರು ಈ ಯೋಜನೆಗೆ ಅರ್ಹರು. ಅರ್ಜಿದಾರರು ಕನಿಷ್ಠ 18 ವರ್ಷ ವಯಸ್ಸು ಹೊಂದಿರಬೇಕು. ಕಳೆದ ಐದು ವರ್ಷಗಳಲ್ಲಿ ಯಾವುದೇ ಸರ್ಕಾರಿ ಸಾಲ ಯೋಜನೆಯ (Loan Scheme) ಲಾಭ ಪಡೆದಿರಬಾರದು. ಒಂದು ಕುಟುಂಬದಿಂದ ಒಬ್ಬರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.
3 ಲಕ್ಷದ ಸಾಲ ಹೇಗೆ ಸಿಗುತ್ತದೆ?
ವ್ಯಾಪಾರ ವಿಸ್ತರಣೆಗೆ (Business Extend) ಸರ್ಕಾರ ಜಾಮೀನಿಲ್ಲದೆ ₹3 ಲಕ್ಷದವರೆಗೆ ಸಾಲ ಒದಗಿಸುತ್ತದೆ. ಮೊದಲ ಹಂತದಲ್ಲಿ ₹1 ಲಕ್ಷ, ಅದನ್ನು ಸರಿಯಾಗಿ ಮರುಪಾವತಿ ಮಾಡಿದ ಬಳಿಕ ಎರಡನೇ ಹಂತದಲ್ಲಿ ₹2 ಲಕ್ಷ ಮಂಜೂರು ಮಾಡಲಾಗುತ್ತದೆ. ಇದರಿಂದ ಖಾಸಗಿ ಸಾಲಗಾರರ ಮೇಲೆ ಅವಲಂಬನೆ ಕಡಿಮೆಯಾಗುತ್ತದೆ.
ಬಡ್ಡಿ ದರದಲ್ಲಿ ದೊಡ್ಡ ರಿಯಾಯಿತಿ
ಈ ಸಾಲಕ್ಕೆ (Loan) ಲಾಭಾಂಶವೇ ದೊಡ್ಡ ಆಕರ್ಷಣೆ. ಸಾಲ ಪಡೆದವರು ಕೇವಲ 5% ಬಡ್ಡಿ ಮಾತ್ರ ಪಾವತಿಸಬೇಕು. ಉಳಿದ ಬಡ್ಡಿ ಮೊತ್ತವನ್ನು ಸರ್ಕಾರವೇ ಸಹಾಯಧನ ರೂಪದಲ್ಲಿ ಭರಿಸುತ್ತದೆ. ಇದರಿಂದ ಆರ್ಥಿಕ ಒತ್ತಡ ಕಡಿಮೆಯಾಗುತ್ತದೆ.
ಇದನ್ನೂ ಓದಿ: ಬಂಪರ್ ಸುದ್ದಿ! ಹೆಣ್ಣು ಮಕ್ಕಳಿಗೆ ರಾಜಶ್ರೀ ಯೋಜನೆ ಜಾರಿ, 50 ಸಾವಿರ ಸಹಾಯಧನ
ತರಬೇತಿ ಮತ್ತು ಉಪಕರಣಗಳ ಸಹಾಯ
ಯೋಜನೆಯ ಭಾಗವಾಗಿ ಕೈವೃತ್ತಿ ಕಾರ್ಮಿಕರಿಗೆ ಆಧುನಿಕ ತರಬೇತಿ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ದಿನಕ್ಕೆ ₹500 ಸ್ಟೈಪೆಂಡ್ ಸಿಗುತ್ತದೆ. ತರಬೇತಿ ನಂತರ ₹15,000 ಮೌಲ್ಯದ ಇ-ವೌಚರ್ ಮೂಲಕ ಹೊಸ ಉಪಕರಣಗಳನ್ನು ಖರೀದಿಸಬಹುದು.
ಡಿಜಿಟಲ್ ವ್ಯವಹಾರಕ್ಕೆ ಪ್ರೋತ್ಸಾಹ
ಡಿಜಿಟಲ್ ಪಾವತಿಗಳನ್ನು ಉತ್ತೇಜಿಸಲು ಪ್ರತಿ ವಹಿವಾಟಿಗೆ ಪ್ರೋತ್ಸಾಹಧನ ನೀಡಲಾಗುತ್ತದೆ. ತಿಂಗಳಿಗೆ ನಿರ್ದಿಷ್ಟ ಮಿತಿವರೆಗೆ ಈ ಸೌಲಭ್ಯ ಲಭ್ಯ. ಜೊತೆಗೆ ಲಾಭದಾರರಿಗೆ ಗುರುತಿನ ಚೀಟಿ ಮತ್ತು ಪ್ರಮಾಣಪತ್ರವೂ ನೀಡಲಾಗುತ್ತದೆ.
ಗ್ರಾಮೀಣ–ನಗರ ಎರಡಕ್ಕೂ ಲಾಭ
ಈ ಯೋಜನೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶಗಳ ಕೈವೃತ್ತಿ ಕಾರ್ಮಿಕರು ತಮ್ಮ ಕೌಶಲ್ಯವನ್ನು ಉದ್ಯಮ ಮಟ್ಟಕ್ಕೆ ಬೆಳೆಸಿಕೊಳ್ಳಲು ಸಾಧ್ಯ. ತರಬೇತಿ, ಹಣಕಾಸು ಮತ್ತು ಮಾರುಕಟ್ಟೆ ಬೆಂಬಲ ಒಂದೇ ವೇದಿಕೆಯಲ್ಲಿ ಸಿಗುತ್ತದೆ.



