India NewsCrime News

ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ

ಮಹಿಳಾ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಮೇಲೆಯೇ ಸಹೋದ್ಯೋಗಿ ಕಾನ್‌ಸ್ಟೆಬಲ್ ಅತ್ಯಾಚಾರ ಎಸಗಿದ ಘಟನೆ, ವಿಡಿಯೋ ತೋರಿಸಿ ನಿರಂತರ ಬೆದರಿಕೆ.

  • ಮಹಿಳಾ ಪೊಲೀಸ್ ಅಧಿಕಾರಿ ಮೇಲೆ ಅತ್ಯಾಚಾರ
  • ಪೊಲೀಸ್ ಕಾನ್‌ಸ್ಟೆಬಲ್ ವಿರುದ್ಧ ಗಂಭೀರ ಆರೋಪ
  • ಕೇಸ್ ದಾಖಲಿಸಿದ ಪೊಲೀಸ್ ಇಲಾಖೆ, ಕಠಿಣ ಕ್ರಮದ ಭರವಸೆ

ಉತ್ತರಾಖಂಡದ (Uttarakhand) ದೆಹ್ರಾಡೂನ್‌ನಲ್ಲಿ ದಾರುಣ ಘಟನೆ ಬೆಳಕಿಗೆ ಬಂದಿದೆ. ಮಹಿಳಾ ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಮೇಲೆಯೇ ಸಹೋದ್ಯೋಗಿ ಕಾನ್ಸ್ಟೇಬಲ್ ಅತ್ಯಾಚಾರ ಎಸಗಿದ ಘಟನೆ ಭಾರೀ ಸುದ್ದಿಯಾಗಿದೆ.

ಘಟನೆ ಕುರಿತು ಮಹಿಳಾ ಅಧಿಕಾರಿ ಪೊಲೀಸರಿಗೆ ದೂರು ನೀಡಿದಂತೆ, ಆರೋಪಿ ಅಸ್ಲಾಂ ವಿರುದ್ಧ ಕಠಿಣ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ಪ್ರಾರಂಭವಾಗಿದೆ.

ಮಹಿಳಾ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಮೇಲೆ ಕಾನ್‌ಸ್ಟೆಬಲ್ ಅತ್ಯಾಚಾರ

ಬಳಿಕ ಬಂದ ಮಾಹಿತಿ ಪ್ರಕಾರ, ಮಹಿಳಾ ಎಸ್‌ಐ ಸಮೀಪದ ಪಟೇಲ್ ನಗರ (Patel Nagar) ಠಾಣೆಗೆ ಇತ್ತೀಚೆಗೆ ವರ್ಗಾವಣೆಯಾಗಿ ಬಂದಿದ್ದರು. ಘಟನೆ ನಡೆದ ದಿನ ರಾತ್ರಿ, ಕೆಲಸದ ಕಾರಣದಿಂದ ಹೋಟೆಲ್‌ನಲ್ಲಿ ತಂಗುವ ನಿರ್ಧಾರ ಮಾಡಿದರು.

ಆರೋಪಿ ಹೋಟೆಲ್‌ (Hotel) ಕೋಣೆಗೆ ಪ್ರವೇಶಿಸಿ ಅಸಭ್ಯ ವರ್ತನೆ ತೋರಿ, ಅತ್ಯಾಚಾರ ಎಸಗಿದ ಎಂದು ಮಹಿಳಾ ಅಧಿಕಾರಿ ಆರೋಪಿಸಿದ್ದಾರೆ.

ಆರೋಪಿ ಕಾನ್ಸ್ಟೇಬಲ್ ಕೇವಲ ಅತ್ಯಾಚಾರ ಮಾಡಿದ್ದಷ್ಟೇ ಅಲ್ಲ, ಆಕೆಯನ್ನು (Victim) ಬೆದರಿಸಲು ಘಟನೆಯ ವಿಡಿಯೋ ಕೂಡ ಮಾಡಿಕೊಂಡಿದ್ದಾನೆ, ಅಲ್ಲದೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಘಟನೆಯಿಂದ ತೀವ್ರ ಜಿಗುಪ್ಸೆಯಿಂದ ಮಹಿಳಾ ಅಧಿಕಾರಿ ಕೆಲವು ದಿನಗಳ ಕಾಲ ಕೆಲಸದಿಂದ ರಜೆ ಪಡೆದು ಮನೆಯಲ್ಲೇ ಉಳಿಯಲು ನಿರ್ಧರಿಸಿದ್ದರು. ಆದರೆ ವಾಪಸ್ ಬಂದಾಗಲೂ ಆರೋಪಿ ಆ ವಿಡಿಯೋ ಕುರಿತು ನಿರಂತರವಾಗಿ ಬ್ಲಾಕ್‌ಮೇಲ್ ಮಾಡುತ್ತಿದ್ದ. ಹೀಗಾಗಿ ಕೊನೆಗೂ ಧೈರ್ಯ ಮಾಡಿ ಆಕೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಈ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ಆರೋಪಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ. ಈ ಪ್ರಕರಣವನ್ನು ರೂರಲ್ ಎಸ್ಪಿಗೆ (Rural SP) ವಹಿಸಿ, ಸೂಕ್ತ ತನಿಖೆ ನಡೆಸಲಾಗುವುದು ಎಂದು ಸೀನಿಯರ್ ಎಸ್‌ಪಿ ಅಜಯ್ ಸಿಂಗ್ ತಿಳಿಸಿದ್ದಾರೆ.

Police Constable Accused of Rape, Investigation Underway

English Summary

Our Whatsapp Channel is Live Now 👇

Whatsapp Channel

Related Stories