India News

ಉಪಚುನಾವಣೆ ಮತದಾನದ ನಂತರ ಹಿಂಸಾಚಾರ, ದಲಿತರ ಮನೆಗಳಿಗೆ ಬೆಂಕಿ

ಭೋಪಾಲ್: ಉಪಚುನಾವಣೆ ಮತದಾನದ ಬಳಿಕ ಹಿಂಸಾಚಾರ ನಡೆದಿದೆ. ಎರಡು ಸಮುದಾಯಗಳ ನಡುವಿನ ಘರ್ಷಣೆಯ ಹಿನ್ನೆಲೆಯಲ್ಲಿ ದಲಿತರ ಗ್ರಾಮದಲ್ಲಿನ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಭಯಭೀತರಾದ ದಲಿತರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ರಕ್ಷಣೆ ಪಡೆದರು. ಮಧ್ಯಪ್ರದೇಶದ ವಿಜಯಪುರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ವೇಳೆ ಈ ಘಟನೆ ನಡೆದಿದೆ.

ಉಪಚುನಾವಣೆ ಮತದಾನದ ನಂತರ ಹಿಂಸಾಚಾರ, ದಲಿತರ ಮನೆಗಳಿಗೆ ಬೆಂಕಿ

ಗೊಹಾಟ ಗ್ರಾಮದಲ್ಲಿ ಮತದಾನದ ಬಳಿಕ ಬೂತ್ ಒತ್ತುವರಿ ಹಾಗೂ ಮತದಾನ ಮಾಡದ ಆರೋಪದ ಮೇಲೆ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಹಿನ್ನೆಲೆಯಲ್ಲಿ ಕೆಲವರು ಅವಾಂತರ ಸೃಷ್ಟಿಸಿದ್ದಾರೆ. ದಲಿತರ ಮೇಲೆ ಕಲ್ಲು ತೂರಾಟ ನಡೆದಿದೆ. ಅವರ ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.

ಇದೇ ವೇಳೆ ಗಾಬರಿಗೊಂಡ ದಲಿತ ಗ್ರಾಮಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಪಡೆದರು. ರಾತ್ರಿಯೆಲ್ಲಾ ಅಲ್ಲೇ ತಂಗಿದ್ದರು.

ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಆದರೆ ಆಸ್ತಿ ನಾಶ ಮಾಡಿದವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ದಲಿತರು ಆರೋಪಿಸಿದ್ದಾರೆ.

Post Poll Violence In Madhya Pradesh, Dalit Village Set On Fire

Our Whatsapp Channel is Live Now 👇

Whatsapp Channel

Related Stories