ಸಮೋಸಾ ನಾಪತ್ತೆ ಘಟನೆ, ಸಮೋಸಾ ಮೇಲೆ ಸಿಐಡಿ ತನಿಖೆ ವಿರೋಧಿಸಿ ಪ್ರತಿಭಟನೆ

Story Highlights

ಹಿಮಾಚಲ ಪ್ರದೇಶದಲ್ಲಿ ಸಮೋಸಾ ಸುತ್ತ ರಾಜಕೀಯ ಸುತ್ತುತ್ತಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಸುಖ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಮೋಸಾ ನಾಪತ್ತೆಯಾದಾಗ ವಿವಾದ ಆರಂಭವಾಗಿದ್ದು ಇನ್ನೂ ತಣ್ಣಗಾಗಿಲ್ಲ

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಸಮೋಸಾ ರಾಜಕೀಯ (Samosa Politics) ನಡೆಯುತ್ತಿದೆ, ಸಮೋಸಾ ಸುತ್ತ ರಾಜಕೀಯ ಸುತ್ತುತ್ತಿದೆ. ಕಳೆದ ತಿಂಗಳು ಮುಖ್ಯಮಂತ್ರಿ ಸುಖ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಮೋಸಾಗಳು ನಾಪತ್ತೆಯಾದಾಗ ವಿವಾದ ಆರಂಭವಾಗಿದ್ದು, ಸಿಐಡಿ ತನಿಖೆ ನಡೆಸುತ್ತಿದೆ ಎಂಬ ಕಾರಣಕಕ್ಕೆ ಇನ್ನೂ ತಣ್ಣಗಾಗಿಲ್ಲ.

‘ಸಿಎಂ ತಿನ್ನಬೇಕಿದ್ದ ಸಮೋಸಾ ನಾಪತ್ತೆ ಆದ ಕಾರಣಕ್ಕೆ ಸಿಐಡಿ ವಿಚಾರಣೆಯೇ?’ ಎಂದು ಬಿಜೆಪಿ ಕೇಳುತ್ತಿದೆ. ಸಿಐಡಿ ತನಿಖೆಯನ್ನು ವಿರೋಧಿಸಿ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಶನಿವಾರ ವಿನೂತನ ಪ್ರತಿಭಟನೆ ನಡೆಸಿತು.

ರಾಜ್ಯದ ಹಲವೆಡೆ ಜನರಿಗೆ ಸಮೋಸಾ ವಿತರಿಸಲಾಯಿತು. ಇದೆ ವೇಳೆ ಆನ್‌ಲೈನ್‌ನಲ್ಲಿ 11 ಸಮೋಸಾ ಆರ್ಡರ್ ಮಾಡಿ ಸಿಎಂ ಮನೆಗೆ ಕಳುಹಿಸಲಾಗಿದೆ. ಒಟ್ಟಾರೆ ಕೆಲ ದಿನದಿಂದ ಸಮೋಸಾ ತಂದ ಪಜೀತಿ ಅಷ್ಟಿಷ್ಟಲ್ಲ.

ಏನಿದು ಘಟನೆ: ಸಿಎಂ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಸಿಎಂ ತಿನ್ನಲು ಇಟ್ಟಿದ್ದ ಸಮೋಸಾಗಳು ನಾಪತ್ತೆಯಾಗಿದ್ದವು, ಇದರಿಂದ ಅಧಿಕಾರಿಗಳು ಮುಜುಗರಕ್ಕೀಡಾದರು, ಸಿಐಡಿ ಕಚೇರಿಯಲ್ಲಿ ಈ ಘಟನೆ ನಡೆದಿದ್ದು, ಇದನ್ನು ಅಧಿಕಾರಿಗಳು ಆಂತರಿಕ ತನಿಖೆ ಮಾಡುತ್ತಿದ್ದರು. ಇದಕ್ಕೆ ಪ್ರತಿಪಕ್ಷಗಳು ಸಮೋಸಾಗೂ ತನಿಖೆ ಎಂದು ಟೀಕಿಸಲು ಶುರುವಾದರು

Protest After Cid Probe Into Missing Samosa Meant For Himachal Cm

Related Stories