Protests In Delhi, ದೆಹಲಿ ಜಾಮಾ ಮಸೀದಿಯಲ್ಲಿ ಬೃಹತ್ ಪ್ರತಿಭಟನೆ.. ವಿಡಿಯೋ

ನವದೆಹಲಿ : ಪ್ರವಾದಿ ಕುರಿತ ನೂಪುರ್ ಶರ್ಮಾ ಹೇಳಿಕೆಯನ್ನು ವಿರೋಧಿಸಿ ದಿಲ್ಲಿಯ ಜಾಮಾ ಮಸೀದಿಯಲ್ಲಿ (Jama Masjid) ಇಂದು ಬೃಹತ್ ಪ್ರತಿಭಟನೆ (Protests In Delhi) ನಡೆಸಲಾಗಿದೆ. ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಮಸೀದಿಯಲ್ಲಿ ಪ್ರತಿಭಟನೆ ನಡೆಸಿದರು.

ದೆಹಲಿ ಹಾಗೂ ಉತ್ತರ ಪ್ರದೇಶದ ಶಹರಾನ್‌ಪುರದಲ್ಲಿ ಪ್ರತಿಭಟನೆಗಳು ನಡೆದಿವೆ. ಭಾರತದ ಅತಿದೊಡ್ಡ ಮಸೀದಿಯಾದ ಜಾಮಾ ಮಸೀದಿಯಲ್ಲಿ ಶುಕ್ರವಾರದ ಪ್ರಾರ್ಥನೆಯ ನಂತರ ಮುಸ್ಲಿಮರು ಘೋಷಣೆಗಳನ್ನು ಕೂಗಿದರು.

ವಿವಾದಾತ್ಮಕ ಹೇಳಿಕೆಗಳ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇಬ್ಬರನ್ನು ಇನ್ನೂ ಬಂಧಿಸಿಲ್ಲ.

ಮಸೀದಿ ಸಮಿತಿ ಪ್ರತಿಭಟನೆಗೆ ಕರೆ ನೀಡಿಲ್ಲ ಎಂದು ಜಾಮಾ ಮಸೀದಿ ಶಾಹಿ ಇಮಾಮ್ ಹೇಳಿದ್ದಾರೆ. ಮಸೀದಿ ಮುಂದೆ ಧರಣಿ ನಡೆಸಿದವರು ಯಾರೋ ಗೊತ್ತಿಲ್ಲ ಎಂದರು. ಕೆಲವರು ಶುಕ್ರವಾರ ಪ್ರತಿಭಟನೆ ನಡೆಸಲು ಯೋಜಿಸಿದ್ದರು, ಆದರೆ ಅವರು ಮಸೀದಿಯಿಂದ ಅನುಮತಿ ಪಡೆದಿಲ್ಲ ಎಂದು ಶಾಹಿ ಇಮಾಮ್ ಹೇಳಿದರು.

ಪ್ರತಿಭಟಿಸಿದವರು ಬಹುಶಃ ಎಂಐಎಂ ಪಕ್ಷ ಅಥವಾ ಒವೈಸಿ ಬೆಂಬಲಿಗರು ಎಂದು ಅವರು ಹೇಳಿದರು. ಪ್ರತಿಭಟನಾಕಾರರನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Protests In Delhi Erupted Outside The Jama Masjid Over Prophet Remarks

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ