ಇಂದು ಪಂಜಾಬ್ ಸಿಎಂ ಮದುವೆ

ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಗುರುವಾರ) ವಿವಾಹವಾಗಲಿದ್ದಾರೆ

ಚಂಡೀಗಢ : ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಗುರುವಾರ) ವಿವಾಹವಾಗಲಿದ್ದಾರೆ. ಇದನ್ನು ಪಕ್ಷದ ಮುಖಂಡರು ಖಚಿತಪಡಿಸಿದ್ದಾರೆ. ಗುರುವಾರ ಇಲ್ಲಿ ಖಾಸಗಿ ಸಮಾರಂಭದಲ್ಲಿ ಮದುವೆ ನಡೆಯಲಿದೆ. ಡಾ.ಗುರ್ ಪ್ರೀತ್ ಕೌರ್ ಅವರ ಜೊತೆಗೆ ವಿವಾಹ ಸಮಾರಂಭ ನಡೆಯಲಿದೆ. ಅವರು ಎಎಪಿಯ ಹಿರಿಯ ನಾಯಕಿ ಮತ್ತು ಪಕ್ಷದ ಪಂಜಾಬ್ ಶಾಖೆಯ ಮುಖ್ಯ ವಕ್ತಾರರು,’ ಎಂದು ಅವರು ಹೇಳಿದರು.

2015ರಲ್ಲಿ ಮೊದಲ ಪತ್ನಿಯಿಂದ ಬೇರ್ಪಟ್ಟ ನಂತರ ಮಾನ್ ಅವರ ಎರಡನೇ ವಿವಾಹ ಇದಾಗಿದೆ. ಅವರಿಗೆ ಮೊದಲ ಪತ್ನಿಯಿಂದ ಇಬ್ಬರು ಮಕ್ಕಳಿದ್ದಾರೆ.

Punjab CM wedding today

ಇಂದು ಪಂಜಾಬ್ ಸಿಎಂ ಮದುವೆ - Kannada News

Follow us On

FaceBook Google News