India NewsSandalwood News

ವಂಚನೆ ಆರೋಪ, ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್

ಪಂಜಾಬ್‌ನ ಲುಧಿಯಾನ ನ್ಯಾಯಾಲಯ ಬಾಲಿವುಡ್ ನಟ ಸೋನು ಸೂದ್ ವಿರುದ್ಧ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಅರೆಸ್ಟ್ ವಾರಂಟ್ ಹೊರಡಿಸಿದೆ. 10 ಲಕ್ಷ ರೂ ವಂಚನೆ ಆರೋಪದ ಕುರಿತು ಫೆಬ್ರವರಿ 10ರಂದು ಮುಂದಿನ ವಿಚಾರಣೆ ನಿಗದಿಯಾಗಿದೆ.

  • ವಂಚನೆ ಆರೋಪ, ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್
  • 10 ಲಕ್ಷ ರೂ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಆದೇಶ
  • ಫೆಬ್ರವರಿ 10ರಂದು ಮುಂದಿನ ವಿಚಾರಣೆ

ಬಾಲಿವುಡ್ ನಟ ಸೋನು ಸೂದ್ (Actor Sonu Sood) ವಿರುದ್ಧ ಲುಧಿಯಾನ ನ್ಯಾಯಾಲಯ ವಂಚನೆ ಪ್ರಕರಣದಲ್ಲಿ ಅರೆಸ್ಟ್ ವಾರಂಟ್ ಹೊರಡಿಸಿದೆ. 10 ಲಕ್ಷ ರೂಪಾಯಿ ವಂಚನೆ ಆರೋಪದ ಹಿನ್ನೆಲೆಯಲ್ಲಿ, ವಕೀಲ ರಾಜೇಶ್ ಖನ್ನಾ ಲುಧಿಯಾನ ನ್ಯಾಯಾಲಯದಲ್ಲಿ ಮೊಹಿತ್ ಶುಕ್ಲಾ ವಿರುದ್ಧ ಪ್ರಕರಣ ದಾಖಲಿಸಿದ್ದರು. ಹೂಡಿಕೆ ಆಮಿಷ ನೀಡಿದ ಆರೋಪದಡಿ ಈ ಪ್ರಕರಣ ದಾಖಲಾಗಿದೆ.

ಸಾಕ್ಷ್ಯ ನೀಡಲು ಸೋನು ಸೂದ್ ಅವರನ್ನು ನ್ಯಾಯಾಲಯಕ್ಕೆ ಸಮನ್ಸ್ ಜಾರಿ ಮಾಡಲಾಗಿತ್ತು. ಆದರೆ, ಅವರು ಹಾಜರಾಗಲು ವಿಫಲವಾದ ಕಾರಣ ನ್ಯಾಯಾಲಯ ಅರೆಸ್ಟ್ ವಾರಂಟ್ ನೀಡಿದೆ.

ವಂಚನೆ ಆರೋಪ, ನಟ ಸೋನು ಸೂದ್ ವಿರುದ್ಧ ಅರೆಸ್ಟ್ ವಾರಂಟ್

ಲುಧಿಯಾನ ನ್ಯಾಯಾಲಯದ ಆದೇಶದ ಮೇರೆಗೆ ಮುಂಬೈನ ಓಶಿವಾರಾ ಪೊಲೀಸ್ ಠಾಣೆಯ ಅಧಿಕಾರಿಗಳಿಗೆ ನಟನನ್ನು ಬಂಧಿಸುವಂತೆ ಸೂಚಿಸಲಾಗಿದೆ.

ಈ ವಂಚನೆ ಪ್ರಕರಣವು ಸೋನು ಸೂದ್ ಬ್ರ್ಯಾಂಡ್ ಅಂಬಾಸಿಡರ್ ಆಗಿರುವ ಕಂಪನಿಗೆ ಸಂಬಂಧಿಸಿದ್ದು, ನ್ಯಾಯಾಲಯ ಈ ಕುರಿತು ನೋಟಿಸ್ ಸಹ ನೀಡಿತ್ತು. ನಟನ ವಿರುದ್ಧ ಪ್ರಕರಣದ ಮುಂದಿನ ವಿಚಾರಣೆಯನ್ನು ಫೆಬ್ರವರಿ 10ರಂದು ನಡೆಸಲು ನಿಗದಿಯಾಗಿದೆ.

Punjab Court Issues Arrest Warrant Against Sonu Sood in Fraud Case

English Summary

Our Whatsapp Channel is Live Now 👇

Whatsapp Channel

Related Stories