LIVE Live News: ಉತ್ತರ ಪ್ರದೇಶದಲ್ಲಿ ಗೂಳಿ ದಾಳಿ, 15 ಮಂದಿಗೆ ಗಾಯ
Live Update: ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ದಾಳಿ ಮಾಡಿದೆ. ತನ್ನ ಕೊಂಬುಗಳಿಂದ ಅನೇಕರನ್ನು ಚುಚ್ಚಿದೆ. ಸಂಚಾರದ ಮಧ್ಯದಲ್ಲಿ ಆತಂಕ ಸೃಷ್ಟಿಸಿದೆ.
Real-time Live News Update: ಯುಪಿಯಲ್ಲಿ ಗೂಳಿಯೊಂದು ಅವಾಂತರ ಸೃಷ್ಟಿಸಿದೆ. ಜಲಾಲಾಬಾದ್‌ನ ಬೀದಿಗಳಲ್ಲಿ ಜನರ ಮೇಲೆ ದಾಳಿ ನಡೆಸಿದೆ. ಘಟನೆಯಲ್ಲಿ 15 ಮಂದಿ ಗಾಯಗೊಂಡಿದ್ದಾರೆ. 3 ಗಂಟೆಗಳ ಬೆನ್ನಟ್ಟಿದ ಬಳಿಕ ವಶಕ್ಕೆ ಪಡೆಯಲಾಗಿದೆ.
ರಸ್ತೆಯಲ್ಲಿ ಸಂಚರಿಸುತ್ತಿದ್ದ ಜನರ ಮೇಲೆ ದಾಳಿ ಮಾಡಿದೆ. ತನ್ನ ಕೊಂಬುಗಳಿಂದ ಅನೇಕರನ್ನು ಚುಚ್ಚಿದೆ. ಸಂಚಾರದ ಮಧ್ಯದಲ್ಲಿ ಆತಂಕ ಸೃಷ್ಟಿಸಿದೆ. ಒಬ್ಬ ವ್ಯಕ್ತಿಯನ್ನು ಹಲವು ಬಾರಿ ಕೆಳಗೆ ಬೀಳಿಸಿ ಕೊಂಬುಗಳಿಂದ ಇರಿದಿದ್ದು, ಆ ವ್ಯಕ್ತಿಯ ಕಣ್ಣಿಗೆ ಗಾಯವಾಗಿದೆ. ಆತ ಗಂಭೀರವಾಗಿ ಗಾಯಗೊಂಡಿದ್ದು, ಕಣ್ಣಿನಿಂದ ಧಾರಾಕಾರವಾಗಿ ರಕ್ತ ಸುರಿಯುತ್ತಿತ್ತು.
ಗೂಳಿ ಬೀದಿಗಳಲ್ಲಿ ಸಂಚರಿಸಿ ಮತ್ತೆ ಜನರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಕೆಲವೆಡೆ ಕಾಲ್ತುಳಿತ ಉಂಟಾಗಿದ್ದು, ಗೂಳಿ ದಾಳಿಯಲ್ಲಿ ಒಟ್ಟು 15 ಮಂದಿ ಗಾಯಗೊಂಡಿದ್ದಾರೆ. ನಗರಸಭೆ ಸಿಬ್ಬಂದಿ ಕನಿಷ್ಠ ಮೂರು ಗಂಟೆಗಳ ಕಾಲ ಅದನ್ನು ಬೆನ್ನಟ್ಟಿ ಕೊನೆಗೂ ಅದನ್ನು ಹಿಡಿದಿದ್ದಾರೆ.