ಹೆದ್ದಾರಿ ಬದಿಯಲ್ಲಿ ಇದ್ದ ಕೆಂಪು ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವ
ದೆಹಲಿ-ಲಖನೌ ಹೆದ್ದಾರಿಯ ಬದಿಯಲ್ಲಿ ಕೆಂಪು ಸೂಟ್‌ಕೇಸ್ ಅನ್ನು ಕೆಲವರು ಗಮನಿಸಿದ್ದಾರೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಮಹಿಳೆಯ ಮೃತದೇಹ ಕಂಡುಬಂದಿದೆ.
ಲಕ್ನೋ: ಹೆದ್ದಾರಿ ರಸ್ತೆ ಬದಿಯಲ್ಲಿ ಕೆಂಪು ಸೂಟ್‌ಕೇಸ್ ಪತ್ತೆಯಾಗಿದೆ. ಅದನ್ನು ತೆರೆದ ಕೆಲವರು ಒಳಗಿದ್ದ ಮಹಿಳೆಯ ಶವವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ನಂತರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶನಿವಾರ ಬೆಳಿಗ್ಗೆ ದೆಹಲಿ-ಲಖನೌ ಹೆದ್ದಾರಿಯ ಬದಿಯಲ್ಲಿ ಕೆಂಪು ಸೂಟ್‌ಕೇಸ್ ಅನ್ನು ಕೆಲವರು ಗಮನಿಸಿದ್ದಾರೆ. ಅದನ್ನು ತೆರೆದು ನೋಡಿದಾಗ ಅದರಲ್ಲಿ ಮಹಿಳೆಯ ಮೃತದೇಹ ಕಂಡುಬಂದಿದೆ.
ಈ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸೂಟ್‌ಕೇಸ್‌ನಿಂದ ಮಹಿಳೆಯ ಶವವನ್ನು ಹೊರತೆಗೆದು ಪರೀಕ್ಷಿಸಿದ್ದಾರೆ. ಆಕೆಯ ಮೈಮೇಲೆ ಗಾಯಗಳಾಗಿವೆ ಎಂಬ ಪ್ರಾಥಾಮಿಕ ಮಾಹಿತಿ ಸಿಕ್ಕಿದೆ.
ಮಹಿಳೆಯ ವಯಸ್ಸು 25 ರಿಂದ 30 ವರ್ಷ ಎಂದು ಪೊಲೀಸರು ತಿಳಿಸಿದ್ದಾರೆ. ಸಾಕ್ಷ್ಯ ಸಂಗ್ರಹಿಸಲು ವಿಧಿವಿಜ್ಞಾನ ತಂಡವನ್ನು ಕರೆಸಲಾಗಿತ್ತು. ಮಹಿಳೆಯ ಕೊಲೆ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ. ಸೂಟ್‌ಕೇಸ್ ಯಾರು ಬಿಟ್ಟು ಹೋಗಿದ್ದಾರೆ ಎಂಬುದನ್ನು ಪತ್ತೆ ಹಚ್ಚಲು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ.
Red Suitcase Stuffed With Woman Body Found On Delhi Lucknow Highway