ಉತ್ತರ ಪ್ರದೇಶ: ಶಾಲಾ ಬಸ್‌ಗೆ ಬೆಂಕಿ, ಬಸ್‌ನಲ್ಲಿದ್ದ 16 ಮಕ್ಕಳು ಸುರಕ್ಷಿತ

Story Highlights

ಗುರುವಾರ ಬೆಳಗ್ಗೆ ಭಾರಿ ಅನಾಹುತ ತಪ್ಪಿದೆ. ಬೆಳಗ್ಗೆ 7:30ರ ಸುಮಾರಿಗೆ ಶ್ರೀ ಶ್ರೀ ರೆಸಿಡೆನ್ಸಿಯ ಹಿಂದೆ ನಿಲ್ಲಿಸಿದ್ದ ಶಾಲಾ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು.

ಉತ್ತರ ಪ್ರದೇಶದ ಗಾಜಿಯಾಬಾದ್‌ನ ವೈಶಾಲಿ ಪ್ರದೇಶದಲ್ಲಿ ಗುರುವಾರ ಬೆಳಗ್ಗೆ ಭಾರಿ ಅನಾಹುತ ತಪ್ಪಿದೆ. ಬೆಳಗ್ಗೆ 7:30ರ ಸುಮಾರಿಗೆ ಶ್ರೀ ಶ್ರೀ ರೆಸಿಡೆನ್ಸಿಯ ಹಿಂದೆ ನಿಲ್ಲಿಸಿದ್ದ ಶಾಲಾ ಬಸ್‌ಗೆ ಬೆಂಕಿ ಹೊತ್ತಿಕೊಂಡಿತು.

ಘಟನೆಯ ಬಗ್ಗೆ ಮಾಹಿತಿ ಬಂದ ತಕ್ಷಣ ಅಗ್ನಿಶಾಮಕ ಠಾಣೆಯ ಮುಖ್ಯ ಅಗ್ನಿಶಾಮಕ ಅಧಿಕಾರಿ ವೈಶಾಲಿ ಮತ್ತು ಅವರ ತಂಡವು ಎರಡು ಅಗ್ನಿಶಾಮಕ ಟೆಂಡರ್‌ಗಳೊಂದಿಗೆ ತಕ್ಷಣ ಸ್ಥಳಕ್ಕೆ ತಲುಪಿತು.

ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ, ರಾಯ್‌ಪುರದಲ್ಲಿ ತುರ್ತು ಭೂಸ್ಪರ್ಶ

ಬಳಿಕ ಹೊತ್ತಿ ಉರಿದ ಬಸ್ ಅನ್ನು ನಿಯಂತ್ರಣಕ್ಕೆ ತರಲಾಯಿತು. ಪ್ರೀತ್ ವಿಹಾರ್ (ದೆಹಲಿ)ಯಲ್ಲಿರುವ ಮದರ್ಸ್ ಗ್ಲೋಬಲ್ ಸ್ಕೂಲ್‌ಗೆ ಸೇರಿದ ಎಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

ಬಸ್ ಸಂಖ್ಯೆ UP16CT9688 ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವೇಳೆ ಬಸ್‌ನಲ್ಲಿ 16 ಮಕ್ಕಳಿದ್ದರು. ಆದರೆ, ಯಾವುದೇ ಅನಾಹುತ ಸಂಭವಿಸದೆ ಮಕ್ಕಳನ್ನು ಸುರಕ್ಷಿತವಾಗಿ ಬಸ್‌ನಿಂದ ಹೊರಕ್ಕೆ ತರಲಾಯಿತು. ಕೂಡಲೇ ಅಗ್ನಿಶಾಮಕ ದಳದವರು ತಮ್ಮ ಕೌಶಲ್ಯದಿಂದ ಬೆಂಕಿ ನಂದಿಸಿ ಸ್ವಲ್ಪ ಸಮಯದಲ್ಲೇ ಬೆಂಕಿಯನ್ನು ಹತೋಟಿಗೆ ತಂದರು.

School Bus Caught Fire In Uttar Pradesh Ghaziabad

Related Stories