ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ನಡೆದ ಜಗಳ, ಬಾಲಕನ ಸಾವಿನೊಂದಿಗೆ ಅಂತ್ಯ
ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ಜಗಳ ಮಾಡಿಕೊಂಡಿದ್ದ ಇಬ್ಬರು ಬಾಲಕರ ನಡುವಿನ ಸಾಮಾನ್ಯ ವಾಗ್ವಾದ ಓರ್ವ ಬಾಲಕನ ಸಾವಿನೊಂದಿಗೆ ಅಂತ್ಯಗೊಂಡಿದೆ.
- ಶಾಲಾ ಬಸ್ಸಿನಲ್ಲಿ ಸೀಟಿಗಾಗಿ ಜಗಳ, ಬಾಲಕನ ಸಾವು
- 14 ವರ್ಷದ ಬಾಲಕ ಗಂಭೀರ ಗಾಯದಿಂದ ಮೃತಪಟ್ಟ ಘಟನೆ
- ಪೊಲೀಸರಿಂದ ಆರೋಪಿ ಬಾಲಕನ ವಶಕ್ಕೆ
ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ನಡೆದ ಘಟನೆಯೊಂದರಲ್ಲಿ, ಶಾಲಾ ಬಸ್ಸಿನಲ್ಲಿ (School Bus) ಸೀಟಿಗಾಗಿ ಜಗಳ ಮಾಡಿಕೊಂಡಿದ್ದ ಇಬ್ಬರು ಬಾಲಕರ ನಡುವಿನ ಸಾಮಾನ್ಯ ವಾಗ್ವಾದ ಓರ್ವ ಬಾಲಕನ ಸಾವಿನೊಂದಿಗೆ ಅಂತ್ಯಗೊಂಡಿದೆ.
14 ವರ್ಷದ ವಿದ್ಯಾರ್ಥಿ ಕಂದಗುರು ಬಸ್‌ನಲ್ಲಿ ಸಹಪಾಠಿ ಸರವಣನ್‌ನೊಂದಿಗೆ ಸೀಟಿನ ವಿಷಯಕ್ಕೆ ಸಂಬಂಧಿಸಿದಂತೆ ಮಾತಿನ ಚಕಮಕಿ ನಡೆಸಿದ.
ಜಗಳ ತಾರಕಕ್ಕೇರಿದ ಸಂದರ್ಭದಲ್ಲಿ, ಕೋಪೋದ್ರಿಕ್ತನಾದ ಸರವಣನ್ ಕಂದಗುರುನನ್ನು ತಳ್ಳಿದ ಪರಿಣಾಮ, ಆತ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡಿದ್ದಾನೆ. ತಕ್ಷಣವೇ ಶಾಲಾ ಸಿಬ್ಬಂದಿ ಹಾಗೂ ಸಹಪಾಠಿಗಳು ಬಾಲಕನನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದರೂ, ಗಾಯದ ತೀವ್ರತೆಗೆ ಒಳಗಾಗಿ ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಿಗ್ಗೆ ಮೃತಪಟ್ಟಿದ್ದಾನೆ.
ಭೀಕರ ಅಪಘಾತ: ಮಿನಿ ಬಸ್ ಮತ್ತು ಲಾರಿ ನಡುವೆ ಡಿಕ್ಕಿ, 7 ಮಂದಿ ಸಾವು
ಈ ಘಟನೆ ಸಂಬಂಧ, ಸೇಲಂ ಪೊಲೀಸರು ಆರೋಪಿ ಬಾಲಕನನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಆರೋಪಿಯನ್ನು ಬಾಲನ್ಯಾಯ ಮಂಡಳಿಯ ಮುಂದೆ ಹಾಜರುಪಡಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೋಷಕರು ಮತ್ತು ಸ್ಥಳೀಯರು ಈ ದುರ್ಘಟನೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದು, ಶಾಲಾ ಬಸ್ಸುಗಳಲ್ಲಿ ವಿದ್ಯಾರ್ಥಿಗಳ ಮೇಲಿನ ಗಮನ ಹೆಚ್ಚಿಸಲು ಅನೇಕರು ಆಗ್ರಹಿಸಿದ್ದಾರೆ.
School Bus Seat Fight Turns Tragic, Boy Dies
Our Whatsapp Channel is Live Now 👇