ಭಾರೀ ಮಳೆ, ಭೂಕುಸಿತದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಾವು
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಭೂಕುಸಿತದಲ್ಲಿ ಒಂದೇ ಕುಟುಂಬದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.
ತಮಿಳುನಾಡಿನ ತಿರುವಣ್ಣಾಮಲೈನಲ್ಲಿ ದಾರುಣ ಘಟನೆಯೊಂದು ನಡೆದಿದೆ. ಭೂಕುಸಿತದಲ್ಲಿ ಒಂದೇ ಕುಟುಂಬದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಫೆಂಗಲ್ ಚಂಡಮಾರುತದ ಪರಿಣಾಮ ತಮಿಳುನಾಡಿನ (Tamil Nadu) ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ (Heavy Rain).
ಮಳೆಯಿಂದಾಗಿ ಈವರೆಗೆ 21 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕೃಷ್ಣಗಿರಿಯಲ್ಲಿ ಬಸ್‌ಗಳು ಕೊಚ್ಚಿ ಹೋಗಿವೆ. ವಿಜುಪುರಂ ಮತ್ತು ಕಡಲೂರಿನಲ್ಲಿ ಮಳೆ ಮುಂದುವರಿದಿದೆ. ತಿರುವಣ್ಣಾಮಲೈನಲ್ಲಿ ಭಾರೀ ಮಳೆಯಾಗಿದೆ. ಇದರಿಂದ ಅಣ್ಣಾಮಲಯಾರ್‌ನಲ್ಲಿ ಭೂಕುಸಿತ ಉಂಟಾಗಿ ಮೂರು ಮನೆಗಳು ಬಿದ್ದಿವೆ.
ಈ ಘಟನೆಯಲ್ಲಿ ಒಂದೇ ಕುಟುಂಬದ ಏಳು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1965ರಿಂದ ಇಲ್ಲಿಯವರೆಗೆ ಜಿಲ್ಲೆಯಲ್ಲಿ ಮೊದಲ ಭಾರಿ ಇಷ್ಟು ಮಳೆ ದಾಖಲಾಗಿದೆ ಎಂದು ಸಚಿವ ಇ.ವಿ.ವೇಲು ತಿಳಿಸಿದರು.
ಭೂಕುಸಿತದ ಭೀತಿಯಿಂದಾಗಿ 50ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದ್ದು, ಭಾರೀ ಅಪಾಯ ತಪ್ಪಿದೆ. ಕಳೆದ 24 ಗಂಟೆಗಳಲ್ಲಿ ಕೃಷ್ಣಗಿರಿಯಲ್ಲಿ 50 ಸೆಂ.ಮೀ.ಗೂ ಹೆಚ್ಚು ಮಳೆ ದಾಖಲಾಗಿದೆ.
Seven Same Family Killed By Landslide In Tamil Nadu