ಖ್ಯಾತ ಗಾಯಕಿ ವಾಣಿ ಜಯರಾಮ್ ಸಾವಿನ ಬಗ್ಗೆ ಅನುಮಾನ?
ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಂ (Singer Vani Jayaram) ಸಾವಿನ ಪ್ರಕರಣದಲ್ಲಿ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ಆಕೆಯ ಮುಖದ ಮೇಲೆ ಯಾರೋ ಹೊಡೆದಂತೆ ತೀವ್ರ ಗಾಯಗಳಾಗಿದ್ದು ಅನುಮಾನಗಳಿಗೆ ಪುಷ್ಠಿ ನೀಡಿವೆ
ಚೆನ್ನೈ (Chennai): ಖ್ಯಾತ ಹಿನ್ನೆಲೆ ಗಾಯಕಿ ವಾಣಿ ಜಯರಾಮ್ (Singer Vani Jayaram) ಅವರ ಸಾವಿನ ಪ್ರಕರಣದಲ್ಲಿ ಹಲವು ಅನುಮಾನಗಳು ಮೂಡುತ್ತಿವೆ. ಅವರ ನಿಧನ ಸುದ್ದಿ ಕೇಳಿ (Vani Jayaram Death) ಚಿತ್ರರಂಗ ಕಂಬನಿ ಮಿಡಿದಿದೆ, ಈ ನಡುವೆ ಆಕೆಯ ಮುಖದ ಮೇಲೆ ಯಾರೋ ಹೊಡೆದಂತೆ ತೀವ್ರ ಗಾಯಗಳಾಗಿದ್ದು, ಆಕೆಯದ್ದು ಸಹಜ ಸಾವೇ ಅಥವಾ ಅಲ್ಲವೇ ಎಂಬ ಅನುಮಾನಗಳನ್ನು ಹಲವರು ವ್ಯಕ್ತಪಡಿಸುತ್ತಿದ್ದಾರೆ. ವಾಣಿ ಜಯರಾಮ್ ಅವರ ಮನೆಗೆ ಕೆಲಸಕ್ಕೆ ಬಂದಿದ್ದ ಮಹಿಳೆಯೊಬ್ಬರು ಫ್ಲಾಟ್‌ನ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಐದು ಬಾರಿ ಕಾಲಿಂಗ್ ಬೆಲ್ ಮಾಡಿದರೂ ಬಾಗಿಲು ತೆಗೆಯಲಿಲ್ಲ.
ಕೆಲಸದಾಕೆಯ ಪತಿ ತನ್ನ ಫೋನ್‌ನಿಂದ ವಾಣಿ ಜಯರಾಮ್ ಅವರ ಫೋನ್‌ಗೆ ಕರೆ ಮಾಡಿದರು. ಆದರೆ ಆಕೆ ಫೋನ್ ಎತ್ತಲಿಲ್ಲ. ಇದರಿಂದ ಅನುಮಾನಗೊಂಡ ಕೆಲಸದಾಕೆ ಪೊಲೀಸರಿಗೆ (Police) ಕರೆ ಮಾಡಿ ಸ್ಥಳೀಯರ ಸಹಾಯದಿಂದ ಕೊಠಡಿಯ ಬಾಗಿಲು ಒಡೆದಿದ್ದಾರೆ. ಒಳಗೆ ಹೋದಾಗ ವಾಣಿ ಜಯರಾಮ್ ಆಗಲೇ ಪ್ರಜ್ಞೆ ತಪ್ಪಿದ್ದರು. ಆಕೆಯ ಮುಖದ ಮೇಲೆ ಯಾರೋ ಹೊಡೆದಂತೆ ತೀವ್ರ ಗಾಯಗಳಾಗಿತ್ತು.
ಕೂಡಲೇ ಸಹಾಯಕಿ ಹಾಗೂ ಸ್ಥಳೀಯರು ಆಕೆಯನ್ನು ಆಸ್ಪತ್ರೆಗೆ (Hospital) ಕರೆದೊಯ್ದರೂ ವೈದ್ಯರು ಪರೀಕ್ಷಿಸಿ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ನೌಕರಿಯರು ಮತ್ತು ಸ್ಥಳೀಯರಿಂದ ವಿವರಗಳನ್ನು ಸಂಗ್ರಹಿಸಿದ ನಂತರ ಪೊಲೀಸರು ಘಟನೆಯ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದರು. ಆಕೆಯ ಫ್ಲ್ಯಾಟ್ ಅನ್ನು ತಮ್ಮ ವಶಕ್ಕೆ ತೆಗೆದುಕೊಂಡು ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸುತ್ತಿದ್ದಾರೆ. ಫ್ಲಾಟ್‌ನ ಸಿಸಿಟಿವಿ ದೃಶ್ಯಾವಳಿಗಳನ್ನು (CCTV Footage) ಕೂಲಂಕುಷವಾಗಿ ಪರಿಶೀಲಿಸಲಾಗುತ್ತಿದೆ.
Severe Injuries Appears On Vani Jayaram Fore Head Is It Normal Death Or
Follow us On
Google News |