ಯುಪಿಯಲ್ಲಿ ನೀರಿನ ಮೇಲೆ ತೇಲುತ್ತಿರುವ ಕಲ್ಲು
ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಇಸಾನ್ ನದಿಯಲ್ಲಿ ನೀರಿನ ಮೇಲೆ ದೊಡ್ಡ ಕಲ್ಲೊಂದು ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ
ಲಕ್ನೋ : ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯ ಇಸಾನ್ ನದಿಯಲ್ಲಿ ನೀರಿನ ಮೇಲೆ ದೊಡ್ಡ ಕಲ್ಲೊಂದು ತೇಲುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕಲ್ಲಿನ ಮೇಲೆ ಹಿಂದಿಯಲ್ಲಿ ರಾಮ ಎಂದು ಬರೆಯಲಾಗಿದೆ. ಜುಲೈ 30 ರಂದು ಮೀನುಗಾರಿಕೆಗೆ ತೆರಳಿದ್ದವರಿಗೆ ಈ ಕಲ್ಲು ಸಿಕ್ಕಿತ್ತು. ಕಲ್ಲು 5.7 ಕೆಜಿ ತೂಕವಿದ್ದರೂ ನೀರಿನಲ್ಲಿ ತೇಲುತ್ತಿರುವುದು ಎಲ್ಲರನ್ನೂ ಆಕರ್ಷಿಸುತ್ತಿದೆ.
ಮೈನ್‌ಪುರಿ ಜಿಲ್ಲೆಯ ತಾನಾ ಬೇವಾರ್ ಪ್ರದೇಶದ ಅಹಿಮಲ್‌ಪುರದಲ್ಲಿ ಈ ವಿಡಿಯೋವನ್ನು ತೆಗೆಯಲಾಗಿದೆ. ಶ್ರೀರಾಮನು ಲಂಕೆಯನ್ನು ತಲುಪಲು ನೀರಿನ ಮೇಲೆ ತೇಲುವ ಕಲ್ಲುಗಳಿಂದ ರಾಮಸೇತುವನ್ನು ನಿರ್ಮಿಸಿದನು ಎಂದು ಹಿಂದೂಗಳು ನಂಬುತ್ತಾರೆ. ಹೊಸದಾಗಿ ಪತ್ತೆಯಾದ ಕಲ್ಲು ರಾಮಸೇತುವಿನದ್ದೇ ಆಗಿರಬೇಕು ಎನ್ನುತ್ತಾರೆ ಗ್ರಾಮಸ್ಥರು.
stone floats on water video viral
Follow us On
Google News |
Advertisement