Strong Earthquake: ನೇಪಾಳದಲ್ಲಿ ಪ್ರಬಲ ಭೂಕಂಪ, ದೆಹಲಿಯಲ್ಲೂ ಕಂಪನ

Strong Earthquake: ನೆರೆಯ ನೇಪಾಳದಲ್ಲಿ ಇಂದು ಮಧ್ಯಾಹ್ನ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4ರಷ್ಟಿತ್ತು. ಭೂಕಂಪದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಪ್ರಬಲ ಕಂಪನಗಳು ಸಂಭವಿಸಿವೆ.

Strong Earthquake (Kannada News): ನೆರೆಯ ನೇಪಾಳದಲ್ಲಿ (Nepal Earthquake) ಇಂದು ಮಧ್ಯಾಹ್ನ ಭೀಕರ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 5.4ರಷ್ಟಿತ್ತು. ಭೂಕಂಪದಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿ (Delhi Earthquake) ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿಯೂ ಪ್ರಬಲ ಕಂಪನಗಳು ಸಂಭವಿಸಿವೆ.

ಈ ಭೂಕಂಪದ ಪರಿಣಾಮ ಉತ್ತರಾಖಂಡದಲ್ಲೂ ಕಾಣಿಸಿಕೊಂಡಿದೆ. ನೇಪಾಳದಲ್ಲಿ ಇಂದು ಮಧ್ಯಾಹ್ನ 2.28ಕ್ಕೆ 5.4 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರವು ಬಹಿರಂಗಪಡಿಸಿದೆ.

ನೇಪಾಳ ಜೊತೆ ದೆಹಲಿ ಯಲ್ಲೂ ಭೂಕಂಪ ಅನುಭವ

ದಿಲ್ಲಿಯ ನಿವಾಸಿಗಳು ಹೇಳುವಂತೆ ಭೂಮಿ ಪ್ರಬಲವಾಗಿ ನಡುಗಿತು ಮತ್ತು ಜನರು ಭಯದಿಂದ ತಮ್ಮ ಮನೆಗಳಿಂದ ಹೊರಗೆ ಓಡಿದ್ದಾರೆ. ಭೂಕಂಪದ ಸಮಯದಲ್ಲಿ, ಮನೆ ಸಾಮಗ್ರಿಗಳು, ಫ್ಯಾನ್ಗಳು ಮತ್ತು ಇತರ ವಸ್ತುಗಳು ಅಲುಗಾಡುವ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಆದರೆ, ಈ ಭೂಕಂಪದಿಂದ ಆಸ್ತಿ-ಪಾಸ್ತಿ ಹಾನಿ ಹಾಗೂ ಪ್ರಾಣ ಹಾನಿಯ ವಿವರ ಇನ್ನಷ್ಟೇ ತಿಳಿದುಬರಬೇಕಿದೆ.

Strong Earthquake In Delhi Surrounding Areas As 5.8 Earthquake Hits Nepal

ಸತತ ಭೂಕಂಪ

ಏತನ್ಮಧ್ಯೆ, ಕಳೆದ ವರ್ಷ ನವೆಂಬರ್‌ನಲ್ಲಿ ದೆಹಲಿಯೊಂದಿಗೆ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳಲ್ಲಿ ತೀವ್ರ ಕಂಪನಗಳು ಸಂಭವಿಸಿದವು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.4ರಷ್ಟು ದಾಖಲಾಗಿದೆ. ಉತ್ತರದಲ್ಲಿ ನೇಪಾಳ ಮತ್ತು ಆಗ್ನೇಯ ಉತ್ತರಾಖಂಡದ ಜೋಶಿಮಠದಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಆದರೆ ಯಾವುದೇ ಪ್ರಾಣಹಾನಿ ಆಗದ ಕಾರಣ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

Strong Earthquake In Delhi Surrounding Areas As 5.8 Earthquake Hits Nepal

Related Stories