India NewsCrime News

ಹೆಂಡತಿ ಮೇಲೆ ಅನುಮಾನ, ಕಲ್ಲಿನಿಂದ ಹೊಡೆದು ಕೊಂದು ಗಂಡ ಪರಾರಿ

ಹೈದರಾಬಾದ್‌ನ ಕುಕಟಪಳ್ಳಿಯಲ್ಲಿ ಗಂಡನ ಅನುಮಾನವೇ ಹೆಂಡತಿ ಪ್ರಾಣ ತೆಗೆದಿದೆ. ಅನುಮಾನದಿಂದ ಪತಿ, ತಲೆಗೆ ಭಾರಿ ಕಲ್ಲಿನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ.

  • ಗಂಡನ ಅನುಮಾನವೇ ಹೆಂಡತಿ ಹತ್ಯೆಗೆ ಕಾರಣ
  • ಭಾರಿ ಕಲ್ಲಿನಿಂದ ಹೊಡೆದು ಪತ್ನಿಯನ್ನು ಕೊಂದು ಗಂಡ ಪರಾರಿ
  • ಪೊಲೀಸರಿಂದ ಪ್ರಕರಣ ದಾಖಲು, ತನಿಖೆ ಪ್ರಾರಂಭ

ಹೈದರಾಬಾದ್‌ನ (Hyderabad) ಕುಕಟಪಳ್ಳಿ ಪ್ರದೇಶದಲ್ಲಿ ಭಯಾನಕ ಘಟನೆ ಸಂಭವಿಸಿದ್ದು, ಪತಿ ತನ್ನ ಪತ್ನಿಯನ್ನು ಹತ್ಯೆ ಮಾಡಿದ ಘಟನೆ ನಡಿದಿದೆ. ಅನುಮಾನವೇ ಈ ಹತ್ಯೆಗೆ ಕಾರಣವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕುಕಟಪಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹಬೀಬ್ ನಗರದಲ್ಲಿ ವಾಸವಾಗಿದ್ದ ರಹೀಮ್ ಮತ್ತು 22 ವರ್ಷದ ನಸ್ರೀನ್ ಆರು ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ ಇಬ್ಬರು ಮಕ್ಕಳೂ ಇದ್ದರು. ಆದರೆ, ರಹೀಮ್ ತನ್ನ ಪತ್ನಿ ನಸ್ರೀನ್‌ಗೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಿಂದ ಆಗಾಗ ತಕರಾರು ಮಾಡುತ್ತಿದ್ದ.

ಹೆಂಡತಿ ಮೇಲೆ ಅನುಮಾನ, ಕಲ್ಲಿನಿಂದ ಹೊಡೆದು ಕೊಂದು ಗಂಡ ಪರಾರಿ

19 ವರ್ಷದ ಯುವತಿ ಮೇಲೆ ಸಂಬಂಧಿಕರಿಂದಲೇ ಸಾಮೂಹಿಕ ಅತ್ಯಾಚಾರ

ಮಂಗಳವಾರ ಅವರು ಹೊಸ ಮನೆಗೆ ಶಿಫ್ಟ್ ಆಗಿದ್ದರು. ಅದೇ ದಿನ ಮಧ್ಯಾಹ್ನ ಪತ್ನಿ ಜೊತೆ ನಡೆದ ಜಗಳ ರಹೀಮ್‌ನ ಮತ್ತಷ್ಟು ಕೆರಳಿಸಿತು. ಕುಪಿತನಾದ ಆತ, ಭಾರಿ ಕಲ್ಲಿನಿಂದ ಪತ್ನಿಯ ತಲೆಯ ಮೇಲೆ ಹೊಡೆದು ನಸ್ರೀನ್‌ನನ್ನು ಸ್ಥಳದಲ್ಲೇ ಕೊಂದುಹಾಕಿದ. ನಂತರ, ಸ್ಥಳದಿಂದ ಪರಾರಿಯಾದನು.

ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ, ನಸ್ರೀನ್ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಗಾಂಧಿ ಆಸ್ಪತ್ರೆಗೆ ರವಾನಿಸಿದರು. ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಪತಿ ರಹೀಮ್ ಗಾಗಿ ಶೋಧ ನಡೆಸುತ್ತಿದ್ದಾರೆ.

Suspicion Turns Deadly, Man Kills Wife in Hyderabad

English Summary

Our Whatsapp Channel is Live Now 👇

Whatsapp Channel

Related Stories