ಜಮ್ಮುವಿನಲ್ಲಿ ಅನುಮಾನಾಸ್ಪದ ಸಿಲಿಂಡರ್ ಪತ್ತೆ
ಜಮ್ಮು ವಿಭಾಗದ ಅಖ್ನೂರ್ ಸೆಕ್ಟರ್‌ನಲ್ಲಿ ಅನುಮಾನಾಸ್ಪದ ಸಿಲಿಂಡರ್ ಅನ್ನು ಸೇನೆ ಗುರುತಿಸಿದೆ
ಶ್ರೀನಗರ: ಜಮ್ಮು ವಿಭಾಗದ ಅಖ್ನೂರ್ ಸೆಕ್ಟರ್‌ನಲ್ಲಿ ಅನುಮಾನಾಸ್ಪದ ಸಿಲಿಂಡರ್ ಅನ್ನು ಸೇನೆ ಗುರುತಿಸಿದೆ. ಇದಾದ ಬಳಿಕ ಜಾಗದಲ್ಲಿ ಬಾಂಬ್ ಸ್ಕ್ವಾಡ್ ನಿಯೋಜಿಸಿ, ನಂತರ ಸುರಕ್ಷಿತ ಪ್ರದೇಶಕ್ಕೆ ತೆರಳಿ ಧ್ವಂಸಗೊಳಿಸಲಾಯಿತು. ಈ ಸಿಲಿಂಡರ್ ಎಲ್ಲಿಂದ ಬಂತು ಎಂದು ಪಡೆಗಳು ಮತ್ತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಮಾಹಿತಿಯ ಪ್ರಕಾರ, ಗುರುವಾರ ಬೆಳಿಗ್ಗೆ ದೋಮನ ವಿಧಾನಸಭಾ ಕ್ಷೇತ್ರದ ಕಾನಾ ಚಕ್ ಪೊಲೀಸ್ ಠಾಣೆಯ ಪರಗ್ವಾಲ್ ರಸ್ತೆ ಬಳಿ ಈ ಸಿಲಿಂಡರ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಸಿಲಿಂಡರ್ ಇದ್ದ ಸ್ಥಳದಿಂದ ಕೇವಲ ನೂರು ಮೀಟರ್ ದೂರದಲ್ಲಿ ಸೇನಾ ತುಕಡಿ ಇತ್ತು. ಮಾಹಿತಿ ಪಡೆದ ಕೂಡಲೇ ಸೇನಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದರು. ಪೊಲೀಸರು ಮತ್ತು ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ದೌಡಾಯಿಸಿತು. ಭದ್ರತಾ ಪಡೆಗಳು ಕೆಲಕಾಲ ರಸ್ತೆಯನ್ನು ಬಂದ್ ಮಾಡಿದವು.
ಇದೇ ವೇಳೆ ವಾಹನ ಸಂಚಾರವೂ ಸ್ಥಗಿತಗೊಂಡಿತ್ತು. ಬಳಿಕ ಅದನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿ ಜೆಸಿಬಿ ಸಹಾಯದಿಂದ ಸಿಲಿಂಡರ್ ಒಡೆದು ಧ್ವಂಸಗೊಳಿಸಲಾಗಿದೆ. ಸಿಲಿಂಡರ್ ಈಗ ಇಲ್ಲಿಗೆ ಹೇಗೆ ಬಂತು? ಎಂಬ ವಿಷಯದ ಬಗ್ಗೆ ತನಿಖೆ ನಡೆದಿದೆ.
suspicious cylinder recovered at akhnoor sector in jk
Follow us On
Google News |