Zakir Hussain: ಖ್ಯಾತ ತಬಲಾ ವಿದ್ವಾಂಸ ಉಸ್ತಾದ್ ಜಾಕಿರ್ ಹುಸೇನ್ ನಿಧನ
Zakir Hussain Passes Away : ಖ್ಯಾತ ತಬಲಾ ವಿದ್ವಾಂಸ ಉಸ್ತಾದ್ ಜಾಕಿರ್ ಹುಸೇನ್ (73) ನಿಧನರಾಗಿದ್ದಾರೆ. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಎರಡು ವಾರಗಳಿಂದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Zakir Hussain Passes Away (ಜಾಕಿರ್ ಹುಸೇನ್ ನಿಧನ): ವಿಶ್ವವಿಖ್ಯಾತ ತಬಲಾ ವಿದ್ವಾಂಸ ಉಸ್ತಾದ್ ಜಾಕಿರ್ ಹುಸೇನ್ (73) ನಿಧನ. ಹೃದಯ ಸಂಬಂಧಿ ಸಮಸ್ಯೆಯಿಂದಾಗಿ ಎರಡು ವಾರಗಳಿಂದ ಸ್ಯಾನ್ ಫ್ರಾನ್ಸಿಸ್ಕೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಭಾನುವಾರ ಅವರ ಸ್ಥಿತಿ ಹದಗೆಟ್ಟಿದ್ದು, ಐಸಿಯುಗೆ ದಾಖಲಾದ ನಂತರ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಸ್ನೇಹಿತ ಮತ್ತು ಕೊಳಲು ವಾದಕ ರಾಕೇಶ್ ಚೌರಾಸಿಯಾ ಹೇಳಿದ್ದಾರೆ. ಜಾಕಿರ್ ಹುಸೇನ್ ಅವರ ಹಿರಿಯ ಪುತ್ರ, ತಬಲಾ ಕಲಾವಿದ ಅಲ್ಲಾ ರಖಾ ಅವರ ಮರಣದ ಸಮಯದಲ್ಲಿ ಅವರ ತಂದೆಯೊಂದಿಗೆ ಇದ್ದರು.
ಹುಸೇನ್ ನಿಧನಕ್ಕೆ ಹಲವು ಸಂಗೀತಗಾರರು, ನಟರು, ರಾಜಕೀಯ ಮುಖಂಡರು ಸಂತಾಪ ಸೂಚಿಸಿದ್ದಾರೆ.
ತಬಲಾ ವಿದ್ವಾಂಸ ಉಸ್ತಾದ್ ಜಾಕಿರ್ ಹುಸೇನ್ ನಿಧನ
1951 ರಲ್ಲಿ ಮುಂಬೈನಲ್ಲಿ ಜನಿಸಿದ ಝಾಕಿರ್ ಅವರ ತಂದೆ ಉಸ್ತಾದ್ ಅಲ್ಲಾ ರಖಾ ಖಾನ್ ಕೂಡ ಹೆಸರಾಂತ ತಬಲಾ ವಾದಕರಾಗಿದ್ದರು. ಜಾಕಿರ್ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ.
ಅವರು ತಮ್ಮ ತಂದೆಯಿಂದ ಸಂಗೀತವನ್ನು ಕಲಿತರು ಮತ್ತು ಏಳನೇ ವಯಸ್ಸಿನಲ್ಲಿ ಅವರ ಕಛೇರಿಗಳಲ್ಲಿ ತಬಲಾ ನುಡಿಸಿದರು. ಮುಂಬೈನಿಂದ ಪದವಿ ಪಡೆದ ನಂತರ, ಝಾಕಿರ್ ವಾಷಿಂಗ್ಟನ್ ವಿಶ್ವವಿದ್ಯಾಲಯದಿಂದ ಸಂಗೀತದಲ್ಲಿ ಡಾಕ್ಟರೇಟ್ ಪದವಿಯನ್ನು ಪೂರ್ಣಗೊಳಿಸಿದರು.
Tabla Maestro Ustad Zakir Hussain Passes Away