ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ
ಪ್ರಧಾನಿ ಮೋದಿ ಅವರು ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಇದರಿಂದ ಪ್ರಧಾನಿ ಮೋದಿ ದೆಹಲಿಗೆ ವಾಪಸಾಗುವುದು ವಿಳಂಬವಾಯಿತು
ನವದೆಹಲಿ: ಪ್ರಧಾನಿ ಮೋದಿ (PM Modi) ಪ್ರಯಾಣಿಸುತ್ತಿದ್ದ ವಿಮಾನದಲ್ಲಿ (Flight) ತಾಂತ್ರಿಕ ದೋಷ ಕಾಣಿಸಿಕೊಂಡಿದೆ. ವಿಧಾನಸಭೆ ಚುನಾವಣೆ ಪ್ರಚಾರಕ್ಕಾಗಿ ಪ್ರಧಾನಿ ಜಾರ್ಖಂಡ್‌ಗೆ ತೆರಳಿದ್ದರು.
ದೇವಗಢದಲ್ಲಿ ಅವರ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿತ್ತು. ತಾಂತ್ರಿಕ ಸಮಸ್ಯೆ ನಿವಾರಣೆಯಾಗುವವರೆಗೂ ವಿಮಾನ ಅಲ್ಲೇ ಇರಲಿದೆ ಎಂದು ಮಾಹಿತಿ ಸಿಕ್ಕಿತ್ತು. ಇದರಿಂದಾಗಿ ಪ್ರಧಾನಿ ದೆಹಲಿ ಭೇಟಿ (Delhi Visit) ವಿಳಂಬವಾಯಿತು.
ಇಂದು ಪ್ರಧಾನಿ ಮೋದಿ ಜಾರ್ಖಂಡ್‌ನ ಎರಡು ಸ್ಥಳಗಳಲ್ಲಿ ಬಹಿರಂಗ ಸಭೆಗಳಲ್ಲಿ ಭಾಗವಹಿಸಿದರು. ಬಿರ್ಸಾ ಮುಂಡಾ ಜಯಂತಿಯ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಜಾರ್ಖಂಡ್‌ನಲ್ಲಿ ಎರಡನೇ ಹಂತದ ಚುನಾವಣೆ ನವೆಂಬರ್ 20 ರಂದು ನಡೆಯಲಿದೆ.
ಆದರೆ ದೇವಗಢದಿಂದ 80 ಕಿಲೋಮೀಟರ್ ದೂರದಲ್ಲಿರುವ ಜಾರ್ಖಂಡ್‌ನ ಗೊಡ್ಡಾ ಎಂಬಲ್ಲಿ ರಾಹುಲ್ ಗಾಂಧಿ (Rahul Gandhi) ಅವರ ಹೆಲಿಕಾಪ್ಟರ್‌ಗೂ ಇಂದು ತಾಂತ್ರಿಕ ಸಮಸ್ಯೆ ಎದುರಾಗಿದೆ. ಅವರ ಹೆಲಿಕಾಪ್ಟರ್ 45 ನಿಮಿಷಗಳ ಕಾಲ ಹೊರಡುವುದು ತಡವಾಗಿತ್ತು.
ಸಂವಿಧಾನ ರಕ್ಷಣೆಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ: ರಾಹುಲ್ ಗಾಂಧಿ
ರಾಹುಲ್ ಏರ್ ಟ್ರಾಫಿಕ್ ಕಂಟ್ರೋಲ್ ನಿಂದ ಅನುಮತಿಗಾಗಿ ಕಾಯುತ್ತಿದ್ದರು. ಈ ನಡುವೆ ವಿಧಾನಸಭೆ ಪ್ರಚಾರ ನಿಲ್ಲಿಸಲು ರಾಹುಲ್ ಹೆಲಿಕಾಪ್ಟರ್ ಗೆ ತೊಂದರೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷ ಆರೋಪಿಸಿದೆ.
ಬಿಹಾರದ ಜಮುಯಿಯಲ್ಲಿ ಆದಿವಾಸಿಗಳಿಗಾಗಿ ಆಯೋಜಿಸಿದ್ದ ಹಲವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗವಹಿಸಿದ್ದರು. ಬಿರ್ಸಾ ಮುಂಡಾ ಅವರ 150 ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಕಾರ್ಯಕ್ರಮಗಳನ್ನು ನಡೆಸಲಾಯಿತು.
technical fault in the flight in which Prime Minister Modi was traveling