ರಾಜ್ಯ ಸರ್ಕಾರ (State government) ಹಾಗೂ ಕೇಂದ್ರ ಸರ್ಕಾರ (Central government) ಗಳು ದೇಶದ ಬೆನ್ನೆಲುಬಾಗಿರುವ ರೈತರ ಶ್ರೇಯೋಭಿವೃದ್ಧಿಗಾಗಿ ಒಂದಲ್ಲ ಒಂದು ರೀತಿಯ ಯೋಜನೆಗಳನ್ನು ಪರಿಚಯಿಸುತ್ತದೆ. ಅದರಲ್ಲಿ ಮುಖ್ಯವಾಗಿ ರೈತರು (farmers ) ಬೆಳೆ ಬೆಳೆಯುವುದಕ್ಕಾಗಿ ಮಾಡಿದ ಸಾಲವನ್ನು ಮನ್ನಾ (Loan waiver) ಮಾಡುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ.
ಆದರೆ ಕೆಲವು ರಾಜ್ಯಗಳಲ್ಲಿ ಈ ಸವಾಲುಗಳನ್ನು ಕೂಡ ಸರ್ಕಾರ ಎದುರಿಸುತ್ತಿದೆ ಎನ್ನುವುದು ಖುಷಿಯ ವಿಚಾರ. ಯಾಕೆಂದರೆ ಯಾವುದೇ ರಾಜ್ಯ ಇರಲಿ ರಾಜ್ಯದ ರೈತರ ಕಲ್ಯಾಣದ ಬಗ್ಗೆ ಯೋಚನೆ ಮಾಡಿದರೆ ರಾಜ್ಯದ ಆರ್ಥಿಕ ಪರಿಸ್ಥಿತಿಯೂ (financial) ಕೂಡ ಅಭಿವೃದ್ಧಿ ಆಗುತ್ತದೆ ಎನ್ನಬಹುದು.
ಈ ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲು ನಿರ್ಧಾರ!
ಈ ವಿಚಾರದಲ್ಲಿ ಸದ್ಯ ತೆಲಂಗಾಣ (Telangana ) ಸರ್ಕಾರ ಹೆಚ್ಚು ಸುದ್ದಿಯಲ್ಲಿ ಇದೆ ಎನ್ನಬಹುದು, ಇತ್ತೀಚಿಗಷ್ಟೇ ನಡೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ರೇವಂತ್ ರೆಡ್ಡಿ (Revanth Reddy) ಮಹಿಳೆಯರ ಸಬಲೀಕರಣದಿಂದ ಹಿಡಿದು ರೈತರ ಶ್ರೇಯೋಭಿವೃದ್ಧಿ ವರೆಗೆ ಸಾಕಷ್ಟು ಬೇರೆಬೇರೆ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.
ಕಾಂಗ್ರೆಸ್, (Congress ) ಕರ್ನಾಟಕ ರಾಜ್ಯದಲ್ಲಿ ಹೇಗೆ ಗ್ಯಾರಂಟಿ ಯೋಜನೆಗಳ ಮೂಲಕ ಜಯಭೇರಿ ಸಾಧಿಸಿದೆಯೋ ಅದೇ ರೀತಿ ತೆಲಂಗಾಣ ರಾಜ್ಯದಲ್ಲಿಯೂ ಕೂಡ ಗ್ಯಾರಂಟಿ ಯೋಜನೆಗಳು ರೇವಂತ್ ರೆಡ್ಡಿ ಅವರಿಗೆ ಗೆಲುವನ್ನು ತಂದುಕೊಟ್ಟಿದೆ ಎನ್ನಬಹುದು.
ಕರ್ನಾಟಕ ರಾಜ್ಯ ಸರ್ಕಾರದಲ್ಲಿ ಗೃಹಲಕ್ಷ್ಮಿ ಯೋಜನೆ (Gruha lakshmi scheme) ಅತ್ಯಂತ ಫೇಮಸ್ ಆಗಿರುವ ಹಾಗೂ ಹೆಚ್ಚು ಮಹಿಳೆಯರಿಗೆ ಆರ್ಥಿಕ ಸಬಲೀಕರಣ ನೀಡಿದ ಯೋಜನೆ ಆಗಿದೆ.
ಇದೇ ಮಾದರಿಯಲ್ಲಿ, ತೆಲಂಗಾಣ ರಾಜ್ಯದಲ್ಲಿ ಮಹಾಲಕ್ಷ್ಮಿ ಯೋಜನೆ (Mahalaxmi scheme) ಯ ಮೂಲಕ ಮಹಿಳೆಯರಿಗೆ ಉಚಿತ ಹಣ ನೀಡುವುದರ ಜೊತೆಗೆ ಉಚಿತ ಬಸ್ ಸೇವೆ ಕೂಡ ಒದಗಿಸಲಾಗಿದೆ. ಇದೀಗ ತೆಲಂಗಾಣ ರಾಜ್ಯ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದ್ದು, ರೈತರ ಸಾಲ ಮನ್ನಾ ಬಗ್ಗೆ ಮಹತ್ವದ ಮಾಹಿತಿ ನೀಡಿದೆ.
ರೈತರ ಸಾಲ ಮನ್ನಾ ಸರ್ಕಾರ ನಿರ್ಧಾರ!
ತೆಲಂಗಾಣ ರಾಜ್ಯದಲ್ಲಿ ವಾಸಿಸುವ ಸುಮಾರು 30,000 ರೈತರ ಬೆಳೆ ಸಾಲ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಇದಕ್ಕಾಗಿ ಸುಮಾರು 32 ಸಾವಿರ ಕೋಟಿ ರೂಪಾಯಿಗಳು ಬೇಕಾಗಬಹುದು.
ತೆಲಂಗಾಣ ಸರ್ಕಾರ, ಈಗಾಗಲೇ ಸಾಲ ಮನ್ನಾ ಮಾಡುವ ವಿಚಾರವಾಗಿ ಬ್ಯಾಂಕರ್ (banker) ಬಳಿ ಚರ್ಚೆ ನಡೆಸಿದೆ ಎನ್ನಲಾಗಿದೆ. ರೈತರ ಸಾಲವನ್ನು (Loan) ಒಂದೇ ಸಮಯಕ್ಕೆ ಅಥವಾ ಒಂದೇ ಬಾರಿ ಮನ್ನಾ ಮಾಡಲು ಬ್ಯಾಂಕುಗಳಿಗೆ ತಿಳಿಸಲಾಗಿದೆ.
ಬ್ಯಾಂಕ್ ಗಳು ರೈತರ ಸಾಲ (Loan) ಮನ್ನಾ ಮಾಡಿದ್ರೆ ಬ್ಯಾಂಕ್ ಗಳಿಗೆ EMI ಮಾದರಿಯಲ್ಲಿ ಪಾವತಿ ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಆದರೆ ಸರ್ಕಾರ ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಒದಗಿಸಿಲ್ಲ. ಸದ್ಯದಲ್ಲಿಯೇ ರೈತರ ಸಾಲ ಮನ್ನಾ ಬಗ್ಗೆ ಸರ್ಕಾರದಿಂದ ಮಹತ್ವ ನಿರ್ಧಾರ ಹೊರಬೀಳಲಿದೆ.
The government has decided to waive the loans of such farmers
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.