ಸಿಎಂಗಾಗಿ ಇಟ್ಟಿದ್ದ ಸಮೋಸ ನಾಪತ್ತೆ, ಸಿಐಡಿ ತನಿಖೆ! ಪ್ರತಿಪಕ್ಷಗಳ ಆಕ್ರೋಶ
ಸಿಎಂಗಾಗಿ ಇಟ್ಟಿದ್ದ ಸಮೋಸ ನಾಪತ್ತೆಯಾಗಿದೆ, ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಕೈಗೆತ್ತಿಕೊಂಡಿದೆ. ಇದರಿಂದ ಪ್ರತಿಪಕ್ಷಗಳು ಈ ವಿಚಾರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಶಿಮ್ಲಾ (Shimla): ಸಿಎಂಗಾಗಿ ಇಟ್ಟಿದ್ದ ಸಮೋಸಗಳು (Samosa) ನಾಪತ್ತೆಯಾಗಿವೆ, ಈ ವಿಚಾರ ಈಗ ಬಾರೀ ಚರ್ಚೆಯಲ್ಲಿದೆ. ಹೌದು, ಸಮೋಸ ವಿಚಾರ ಅಷ್ಟೊಂದು ಚರ್ಚೆ ಏಕೆ ಅಂತೀರಾ, ಅದು ಸಿಎಂ ಗೆ ಇಟ್ಟಿದ್ದ ಸಮೋಸ ಕಣ್ರೀ . .
ಸಿಎಂ ಗೆ ಇಟ್ಟಿದ್ದ ಅವುಗಳನ್ನು ಸಿಎಂ ಭದ್ರತಾ ಸಿಬ್ಬಂದಿಗೆ ಬಡಿಸಲಾಗಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಕೈಗೆತ್ತಿಕೊಂಡಿದೆ. ಇದರಿಂದ ಪ್ರತಿಪಕ್ಷಗಳು ಈ ವಿಚಾರದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಘಟನೆ ನಡೆದಿರುವುದು ಕಾಂಗ್ರೆಸ್ ಆಡಳಿತವಿರುವ ಹಿಮಾಚಲ ಪ್ರದೇಶದಲ್ಲಿ. ಅಕ್ಟೋಬರ್ 21 ರಂದು ಸಿಐಡಿ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಸುಖ್ವಿಂದರ್ ಸಿಂಗ್ ಸುಖ್ (CM Sukhvinder Singh Sukhu) ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಿಐಡಿ ಅಧಿಕಾರಿಗಳೊಂದಿಗೆ ಚಹಾ ಸೇವಿಸಿದರು. ಆದರೆ, ಸಿಎಂ ಗೆ ಬಡಿಸಲು ವಿಶೇಷವಾಗಿ ಇರಿಸಲಾಗಿದ್ದ ಸಮೋಸಗಳ ಮೂರು ಬಾಕ್ಸ್‌ಗಳು ನಾಪತ್ತೆಯಾಗಿವೆ. ಇದರಿಂದ ಸಿಐಡಿ ಅಧಿಕಾರಿಗಳು ಗೊಂದಲಕ್ಕೀಡಾಗಿದ್ದರು.
ಮಹಿಳೆಯರ ಅಳತೆಗಳನ್ನು ಪುರುಷ ಟೈಲರ್ ತೆಗೆದುಕೊಳ್ಳಬಾರದು: ಯುಪಿ ಮಹಿಳಾ ಆಯೋಗ
ಇದೇ ವೇಳೆ ಸಿಐಡಿ ಕಚೇರಿಯಲ್ಲಿದ್ದ ಮಹಿಳಾ ಅಧಿಕಾರಿ ಆ ಸಮೋಸಾ ಬಾಕ್ಸ್ ಗಳನ್ನು ಸಿಎಂ ಭದ್ರತಾ ಸಿಬ್ಬಂದಿಗೆ ನೀಡಿದ್ದರು ಎಂದು ತಿಳಿದುಬಂದಿದೆ. ಇದರಿಂದ ಸಿಎಂಗಾಗಿ ಇಟ್ಟಿದ್ದ ಸಮೋಸ ತಿಂದಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಿಐಡಿ ಆಂತರಿಕ ತನಿಖೆ ನಡೆಸುತ್ತಿದೆ.
ಮತ್ತೊಂದೆಡೆ, ಹಿಮಾಚಲ ಪ್ರದೇಶದ (Himachal Pradesh) ಪ್ರತಿಪಕ್ಷ ಬಿಜೆಪಿ ಇದನ್ನು ಟೀಕಿಸಿದೆ. ಸಿಎಂ ಸುಖ್ವಿಂದರ್ ಸಿಂಗ್ ಸುಖ್ ಗಾಗಿ ಇರಿಸಲಾಗಿದ್ದ ಸಮೋಸಾ ನಾಪತ್ತೆಯಾಗಿರುವ ಬಗ್ಗೆ ಸಿಡಿಐ ತನಿಖೆ ನಡೆಸುತ್ತಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಲಾಗಿದೆ.
ಆದರೆ ಸಿಐಡಿ ಇದನ್ನು ನಿರಾಕರಿಸಿದೆ. ಕೇವಲ ಆಂತರಿಕ ವಿಚಾರಣೆ ನಡೆಸಲಾಗಿದೆ ಎಂದು ಸಿಐಡಿ ಡಿಜಿ ತಿಳಿಸಿದ್ದಾರೆ. ಪ್ರತಿಪಕ್ಷಗಳ ಆರೋಪವನ್ನು ಸಿಎಂಒ ಕಚೇರಿಯೂ ತಳ್ಳಿಹಾಕಿದೆ. ಮುಖ್ಯ ಮಾಧ್ಯಮ ಸಲಹೆಗಾರ ನರೇಶ್ ಚೌಹಾಣ್, ಬಿಜೆಪಿಗೆ ಯಾವುದೇ ಸಮಸ್ಯೆಗಳು ಕಾಣಿಸದ ಕಾರಣ ಈ ಬಗ್ಗೆ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಹೇಳಿದ್ದಾರೆ, ಒಟ್ಟಾರೆ ಈ ಸಮೋಸ ತಂದಿಟ್ಟ ಪಜೀತಿ, ಬಾರೀ ಚರ್ಚೆ ಆಗುತ್ತಿದೆ.
The samosa kept for the CM were Missing, Controversy over the CID investigation