ಅಯ್ಯೋ ವಿಧಿಯೇ, 2ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು ಸಾವು
ಒಂದೂವರೆ ವರ್ಷದ ಮಗು ಸಹೋದರನಿಗೆ ಟಾಟಾ ಮಾಡಲು ಹೋಗಿ ಎರಡನೇ ಮಹಡಿಯಿಂದ ಬಿದ್ದು ಗಂಭೀರವಾಗಿ ಗಾಯಗೊಂಡು, ಆಸ್ಪತ್ರೆಯಲ್ಲಿ ಸಾವು
- 2ನೇ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಮಗು
- ಟ್ಯೂಷನ್‌ಗೆ ತೆರಳುತ್ತಿದ್ದ ಸಹೋದರನಿಗೆ ಟಾಟಾ ಮಾಡಲು ಹೋಗಿ ನಡೆದ ದುರಂತ
- ಗಂಭೀರ ಗಾಯಗಳಿಂದಾಗಿ ಆಸ್ಪತ್ರೆಯಲ್ಲಿ ಮಗು ಸಾವು
ಹೈದರಾಬಾದ್ (Hyderabad): ಒಂದೂವರೆ ವರ್ಷದ ಮಗು ತನ್ನ ಸಹೋದರ ಟ್ಯೂಷನ್‌ಗೆ ಹೋಗುವಾಗ ಟಾಟಾ ಮಾಡಲು ಹೋಗಿ ಆಕಸ್ಮಿಕವಾಗಿ 2ನೇ ಮಹಡಿಯಿಂದ ಬಿದ್ದಿದೆ (Toddler Falls from Balcony). ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಮಗು ಪ್ರಾಣ ಕಳೆದುಕೊಂಡಿದೆ.
ಪೆಟ್ ಬಶೀರಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರ ಪ್ರದೇಶದಲ್ಲಿ ಬಹುಮಹಡಿ ಕಟ್ಟಡದ ಎರಡನೇ ಮಹಡಿಯಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದ ದಂಪತಿಗಳಿಗೆ ಇಬ್ಬರು ಮಕ್ಕಳು. ಈ ತಿಂಗಳ 8ನೇ ತಾರೀಖಿನ ಸಂಜೆ ಹಿರಿಯ ಮಗ ಅದ್ನಾನ್ ಟ್ಯೂಷನ್‌ಗೆ ಹೋಗುತ್ತಿದ್ದ, ಈ ವೇಳೆ ಒಂದೂವರೆ ವರ್ಷದ ಸಿದ್ರಾ ಅನಮ್ ತನ್ನ ಸಹೋದರನಿಗೆ ಟಾಟಾ ಹೇಳಲು ಬಾಗಿಲಿನ ಮುಂದಿದ್ದ ಗ್ರಿಲ್‌ಗಳ ಬಳಿ ಬಂದಿದ್ದಾಳೆ.
ಡ್ಯಾನ್ಸ್ ಮಾಡ್ತಾ ಮಾಡ್ತಾ ಹೃದಯಾಘಾತ: 23 ವರ್ಷದ ಯುವತಿ ಸಾವು
ಸಹೋದರ ಕೆಳಗೆ ನಿಂತು ತನ್ನ ಸಹೋದರಿಗೆ ಟಾಟಾ ಹೇಳುತ್ತಿದ್ದ, ಈ ವೇಳೆ ಮಗು ಆಕಸ್ಮಿಕವಾಗಿ ಗ್ರಿಲ್‌ನಿಂದ ಕೆಳಗೆ ಬಿದ್ದಿದೆ. ಗಾಯಗೊಂಡ ಮಗುವನ್ನು ನಿಲೋಫರ್ ಆಸ್ಪತ್ರೆಗೆ ದಾಖಲಿಸಲಾಯಿತು.
ಚಿಕಿತ್ಸೆ ಪಡೆಯುತ್ತಿದ್ದ ಮಗು ಭಾನುವಾರ ಮುಂಜಾನೆ ಮೃತಪಟ್ಟಿದೆ. ಮಗುವಿನ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿತ್ತು. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Toddler Falls from Balcony While Waving Goodbye, Dies
Our Whatsapp Channel is Live Now 👇