ಭಯೋತ್ಪಾದಕರ ಸಂಚು ಭೇದ.. ದೆಹಲಿಯಲ್ಲಿ ಇಬ್ಬರ ಬಂಧನ..!

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದನಾ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ದೆಹಲಿ ಪೊಲೀಸರ ವಿಶೇಷ ಘಟಕವು ಗುರುವಾರ ಜಹಾಂಗೀರ್ ಪ್ರದೇಶದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿದೆ. 

Bengaluru, Karnataka, India
Edited By: Satish Raj Goravigere

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಯೋತ್ಪಾದನಾ ಸಂಚನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ದೆಹಲಿ ಪೊಲೀಸರ ವಿಶೇಷ ಘಟಕವು ಗುರುವಾರ ಜಹಾಂಗೀರ್ ಪ್ರದೇಶದಲ್ಲಿ ಇಬ್ಬರು ಶಂಕಿತರನ್ನು ಬಂಧಿಸಿದೆ. ಜನವರಿ 26 ರಂದು ನಡೆಯಲಿರುವ ಗಣರಾಜ್ಯೋತ್ಸವದ ಮುನ್ನ ರಾಷ್ಟ್ರ ರಾಜಧಾನಿಯಲ್ಲಿ ಇಬ್ಬರು ದೊಡ್ಡ ಸಂಚು ರೂಪಿಸಿದ್ದಾರೆ ಎನ್ನಲಾಗಿದೆ.

ಕನ್ನಡ ಆನ್‌ಲೈನ್‌ News ಕವರೇಜ್, ಬ್ರೇಕಿಂಗ್ ನ್ಯೂಸ್ Headlines 13 ಜನವರಿ 2023 06:33 am

Two Helpers Of Khalistani Terrorist Dalla Arrested

ಪೊಲೀಸರು ಬಂಧಿಸಿರುವ ಇಬ್ಬರಲ್ಲಿ ಒಬ್ಬ ಕೆನಡಾ ಮೂಲದ ಖಲಿಸ್ತಾನಿ ಭಯೋತ್ಪಾದಕ. ಎರಡು ಉದ್ದೇಶಿತ ದಾಳಿಗಳನ್ನು ಯೋಜಿಸಲಾಗಿತ್ತು ಎಂದು ವರದಿಯಾಗಿದೆ. ಆರೋಪಿಯ ಮೊಬೈಲ್‌ನಿಂದ ಉಗ್ರರ ಯೋಜನೆಯ ನೀಲನಕ್ಷೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸದ್ಯ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಅರ್ಷದೀಪ್ ದಲ್ಲಾ ಖಲಿಸ್ತಾನ್ ಟೈಗರ್ ಫೋರ್ಸ್‌ಗೆ ಸೇರಿದ ಭಯೋತ್ಪಾದಕ. ಏತನ್ಮಧ್ಯೆ, ಎರಡು ದಿನಗಳ ಹಿಂದೆ ಗೃಹ ಸಚಿವಾಲಯವು ಅರ್ಷದೀಪ್ ದಲ್ಲಾ ಅವರನ್ನು ಭಯೋತ್ಪಾದಕ ಎಂದು ಘೋಷಿಸಿದೆ ಎಂದು ತಿಳಿದಿದೆ.

Two Helpers Of Khalistani Terrorist Dalla Arrested