ಮಹಾರಾಷ್ಟ್ರದಲ್ಲಿ ಕೆಮಿಕಲ್ ಡ್ರಮ್ ಸ್ಫೋಟಕ್ಕೆ ಇಬ್ಬರು ಬಲಿ

ಥಾಣೆಯ ಭಿವಂಡಿ ಪ್ರದೇಶದಲ್ಲಿ ರಾಸಾಯನಿಕವಿದ್ದ ಡ್ರಮ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ, ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಈ ದುರಂತ ನಡೆದಿದೆ. ಸ್ಕ್ರ್ಯಾಪ್ ಅಂಗಡಿಯಲ್ಲಿ ಖಾಲಿ ರಾಸಾಯನಿಕ ಡ್ರಮ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿದ್ದಾರೆ. ಥಾಣೆ ಜಿಲ್ಲೆಯ ಭಿವಂಡಿ ಪ್ರದೇಶದ ಸ್ಕ್ರ್ಯಾಪ್ ಅಂಗಡಿಯಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದೆ.
ಮೃತರಿಬ್ಬರೂ ಗುಜರಿ ಅಂಗಡಿಯ ವ್ಯವಸ್ಥಾಪಕರು ಎಂಬುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಬುಧವಾರ ಮಧ್ಯಾಹ್ನ ಇಬ್ಬರು ವ್ಯವಸ್ಥಾಪಕರು ಸ್ಕ್ರ್ಯಾಪ್ ಅಂಗಡಿಯಲ್ಲಿದ್ದಾಗ ವ್ಯಕ್ತಿಯೊಬ್ಬರು ಅವರನ್ನು ಸಂಪರ್ಕಿಸಿದರು. ಅವರು ಕೆಮಿಕಲ್ ಡ್ರಮ್‌ಗಳನ್ನು ಸ್ವಚ್ಛಗೊಳಿಸುತ್ತಿದ್ದಂತೆ, ಅವನು ಸ್ವಲ್ಪ ದೂರದಲ್ಲಿ ನಿಂತು ಸಿಗರೇಟನ್ನು ಹೊತ್ತಿಸಿದನು. ಏಕಾಏಕಿ ಕೆಮಿಕಲ್ ಡ್ರಮ್ ಭಾರೀ ಶಬ್ದದೊಂದಿಗೆ ಸ್ಫೋಟಗೊಂಡಿದೆ. ಈ ಘಟನೆಯಲ್ಲಿ ಅಲ್ಲಿದ್ದ ಅಂಗಡಿ ವ್ಯವಸ್ಥಾಪಕರಿಬ್ಬರೂ ಪ್ರಾಣ ಕಳೆದುಕೊಂಡಿದ್ದಾರೆ.
ಡ್ರಮ್‌ನಲ್ಲಿರುವ ಡಿ ಇಥೈಲ್ ಗ್ಲೈಕೋಲ್ ಎಂಬ ರಾಸಾಯನಿಕವು ಸ್ಫೋಟಕ ಗುಣವನ್ನು ಹೊಂದಿದೆ, ಆದ್ದರಿಂದಲೇ ಸಿಗರೇಟ್ ಹೊತ್ತಿಸಿದಾಗ ಡ್ರಮ್ ಸ್ಫೋಟಗೊಂಡಿದೆ ಎಂದು ಫೋರೆನ್ಸಿಕ್ ತಜ್ಞರು ಬಹಿರಂಗಪಡಿಸಿದ್ದಾರೆ. ಘಟನೆ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Two Persons Died After A Drum Containing A Chemical Exploded In The Bhiwandi Area Of Thane
Maharashtra | 2 persons died after a drum containing a chemical exploded in the Bhiwandi area of Thane. The deceased were scrap dealers and died after a man lit a cigarette near drums containing Diethylene Glycol: Thane Municipal Corporation pic.twitter.com/B7sgciTD3O
— ANI (@ANI) February 1, 2023
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



