India News

ಈ ಹಳ್ಳಿಯಲ್ಲಿ ಯಾರೂ ಚಪ್ಪಲಿ ಹಾಕೋಲ್ಲ! ಸಿಎಂ ಬಂದ್ರೂ ಪಿಎಂ ಬಂದ್ರೂ ಅದೇ ರೂಲ್ಸ್

ಈ ಹಳ್ಳಿಯ ಜನರು ಎಂದಿಗೂ ಚಪ್ಪಲಿ ಅಥವಾ ಶೂ ಧರಿಸುವುದಿಲ್ಲ. ಈ ಪರಂಪರೆ ತಾತಮುತ್ತಾತರ ಕಾಲದಿಂದಲೂ ಮುಂದುವರಿದಿದೆ.

  • ಈ ಹಳ್ಳಿಯ ಜನರು ಚಪ್ಪಲಿ ಹಾಕದೆ ಬದುಕುತ್ತಾರೆ.
  • ಗ್ರಾಮ ಪ್ರವೇಶಿಸಲು ಹೊರಗಿನವರೂ ಚಪ್ಪಲಿ ಕಳಚಬೇಕು.
  • ದೇವಸ್ಥಾನದ ಭಕ್ತಿಯೇ ಈ ಪರಂಪರೆಯ ಹಿಂದಿನ ಪ್ರಮುಖ ಕಾರಣ.

ಆಂಧ್ರಪ್ರದೇಶದ ತಿರುಪತಿಗೆ 50 ಕಿಮೀ ದೂರದಲ್ಲಿರುವ ಚಿತ್ತೂರು ಜಿಲ್ಲೆಯ ಉಪ್ಪರಪಲ್ಲಿ ಪಂಚಾಯತಿಗೆ ಸೇರಿರುವ ಇಂಡ್ಲು ಗ್ರಾಮವು ತನ್ನ ವಿಶಿಷ್ಟ ಆಚರಣೆಗೆ ಹೆಸರುವಾಸಿಯಾಗಿದೆ. ಈ ಹಳ್ಳಿಯ ಜನರು ಎಂದಿಗೂ ಚಪ್ಪಲಿ ಅಥವಾ ಶೂ ಧರಿಸುವುದಿಲ್ಲ. ಈ ಪರಂಪರೆ ತಾತಮುತ್ತಾತರ ಕಾಲದಿಂದಲೂ ಮುಂದುವರಿದಿದೆ.

ಈ ಹಳ್ಳಿಯಲ್ಲಿ ಕೇವಲ 10-15 ಮನೆಗಳೇ ಇದ್ದರೂ, ಅವರ ಶ್ರದ್ಧಾ-ಭಕ್ತಿಗೆ ರಾಜ್ಯದ ಜನರು ಬೆರಗಾಗುತ್ತಾರೆ.

ಈ ಹಳ್ಳಿಯಲ್ಲಿ ಯಾರೂ ಚಪ್ಪಲಿ ಹಾಕೋಲ್ಲ! ಸಿಎಂ ಬಂದ್ರೂ ಪಿಎಂ ಬಂದ್ರೂ ಅದೇ ರೂಲ್ಸ್

ಹಕ್ಕಿ ಜ್ವರದ ಎಫೆಕ್ಟ್, ಜನರಲ್ಲಿ ಭೀತಿ! ಕೋಳಿ ಮಾಂಸದ ಬೆಲೆಯಲ್ಲಿ ಭಾರೀ ಇಳಿಕೆ

ಪರಂಪರೆಯ ಹಿಂದಿನ ಭಕ್ತಿ ಮತ್ತು ನಂಬಿಕೆ

ಈ ಗ್ರಾಮಸ್ಥರ ಆರಾಧ್ಯ ದೈವ ಶ್ರೀ ವೆಂಕಟೇಶ್ವರಸ್ವಾಮಿ. ಅವರ ಭಕ್ತಿಯ ಪ್ರತೀಕವಾಗಿ, ಹಳ್ಳಿಯೊಳಗೆ ಯಾರೂ ಚಪ್ಪಲಿ ಧರಿಸಬಾರದು ಎಂಬ ನಿಯಮವನ್ನು ಪಾಲಿಸುತ್ತಾರೆ. ಇಲ್ಲಿಯ ಜನರು ಹೊರಗಿನ ಆಹಾರ ಸೇವಿಸುವುದಿಲ್ಲ, ಶಾಲೆಯಲ್ಲಿ ಮಧ್ಯಾಹ್ನ ಭೋಜನವೂ ತಿನ್ನುವುದಿಲ್ಲ.

ಊರಿನೊಳಗೆ ಪ್ರವೇಶಿಸಲು ಬರುವವರು ಪಾಳ್ಯದೊಳಗೆ ಕಾಲಿಡುವ ಮೊದಲು ಚಪ್ಪಲಿ ಕಳಚಬೇಕು. ಇದನ್ನು ರಾಜ್ಯದ ಯಾವುದೇ ಅಧಿಕಾರಿಯೂ ಮೀರಿ ಹೋಗಲು ಸಾಧ್ಯವಿಲ್ಲ.

Unique Village in AP

ಅನೇಕ ಕಟ್ಟುಪಾಡುಗಳೊಳಗೆ ಬದುಕುತ್ತಿರುವ ಜನರು

ಈ ಹಳ್ಳಿಯಲ್ಲಿ ನಿರ್ದಿಷ್ಟ ಆಚರಣೆಗಳಿವೆ. ಮಹಿಳೆಯರು ಮಾಸಿಕ ಚಕ್ರದಲ್ಲಿ ಪ್ರತ್ಯೇಕ ವಾಸಸ್ಥಾನದಲ್ಲಿರಬೇಕು. ಊರಿನ ಗಡಿಯಲ್ಲಿ ಅವರಿಗಾಗಿ ಪ್ರತ್ಯೇಕ ಮನೆಗಳನ್ನು ನಿರ್ಮಿಸಲಾಗಿದೆ, ಅಲ್ಲಿ ಒಂದು ವಾರ ಕಾಲ ತಂಗಿ, ನಿರ್ದಿಷ್ಟ ನಿಯಮಗಳ ಪ್ರಕಾರ ಜೀವನ ಸಾಗಿಸುತ್ತಾರೆ. ಆರೋಗ್ಯ ಸಮಸ್ಯೆಗಳಿದ್ದರೂ ಸಹ, ಜನರು ಆಸ್ಪತ್ರೆಗೆ ಹೋಗುವುದನ್ನು ತಪ್ಪಿಸುತ್ತಾರೆ.

ಈ ಆಚರಣೆಗಳನ್ನು ಕೆಲವರು ಭಕ್ತಿಯ ಪರಂಪರೆ ಎಂದು ನಂಬಿದರೆ, ಕೆಲವರು ಮೂಢನಂಬಿಕೆ ಎಂದು ಖಂಡಿಸುತ್ತಾರೆ. ಕಾಲ ಬದಲಾದರೂ ಇಂತಹ ವಿಶಿಷ್ಟ ಸಂಪ್ರದಾಯಗಳು ಇಂದಿಗೂ ಜೀವಂತವಾಗಿವೆ. ಈ ಬಗ್ಗೆ ಅನಿಸಿಕೆಗಳು ನಿಮಗೆ ಬಿಟ್ಟಿದ್ದು…

Unique Village in AP, No One Wears Footwear Here

English Summary

Our Whatsapp Channel is Live Now 👇

Whatsapp Channel

Related Stories