ಮಹಿಳಾ ಶಿಕ್ಷಕಿಯರ ಬಾತ್ ರೂಂನಲ್ಲಿ ಸ್ಪೈ ಕ್ಯಾಮೆರಾ ಇಟ್ಟಿದ್ದ ಆರೋಪಿ ಅರೆಸ್ಟ್
ಮಹಿಳಾ ಶಿಕ್ಷಕಿಯರು ಬಳಸುತ್ತಿದ್ದ ಬಾತ್ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಕಂಪ್ಯೂಟರ್ ಹಾಗೂ ಮೊಬೈಲ್ ನಲ್ಲಿ ನೋಡುತ್ತಿದ್ದ ಶಾಲಾ ನಿರ್ದೇಶಕ ನವನೀಶ್ ಎಂಬಾತನನ್ನು ಬಂಧಿಸಲಾಗಿದೆ
ಉತ್ತರ ಪ್ರದೇಶ ರಾಜ್ಯದಲ್ಲಿ ಶಾಲಾ ನಿರ್ದೇಶಕನೊಬ್ಬ ಅಶ್ಲೀಲ ಕೃತ್ಯಗಳಲ್ಲಿ ಭಾಗಿಯಾಗಿ ಪೋಲೀಸರ ಅಥಿತಿಯಾಗಿದ್ದಾನೆ. ಮಹಿಳಾ ಶಿಕ್ಷಕಿಯರು ಬಳಸುತ್ತಿದ್ದ ಬಾತ್ ರೂಂನಲ್ಲಿ ಸ್ಪೈ ಕ್ಯಾಮೆರಾ (Spy Camera) ಅಳವಡಿಸಿ ಕಂಪ್ಯೂಟರ್ (Computer) ಹಾಗೂ ಮೊಬೈಲ್ ನಲ್ಲಿ (Mobile) ನೋಡುತ್ತಿದ್ದ ಎನ್ನಲಾಗಿದೆ.
ಪೊಲೀಸರ ಪ್ರಕಾರ, ನವನೀಶ್ ಸಹಾಯ್ ಎಂಬ ವ್ಯಕ್ತಿ ನೋಯ್ಡಾದ ಸೆಕ್ಟರ್ 70 ನಲ್ಲಿರುವ ಪ್ಲೇ ಸ್ಕೂಲ್‌ನ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ತಿಂಗಳ 10 ರಂದು ಬಾತ್ ರೂಂ (Bathroom) ಬಲ್ಬ್ ಹೋಲ್ಡರ್‌ನಲ್ಲಿ ಸ್ಪೈ ಕ್ಯಾಮೆರಾವನ್ನು ಶಿಕ್ಷಕರೊಬ್ಬರು ಪತ್ತೆ ಮಾಡಿದ್ದಾರೆ. ಮಹಿಳಾ ಶಿಕ್ಷಕಿ ಈ ವಿಷಯವನ್ನು ನಿರ್ದೇಶಕ ನವನೀಶ್ ಗಮನಕ್ಕೆ ತಂದರೂ ಅವರು ಅದನ್ನು ತಳ್ಳಿಹಾಕಿದರು.
ಸಮಸ್ಯೆ ಪರಿಹಾರಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಶಿಕ್ಷಕರು ಆರೋಪಿಸಿದ್ದಾರೆ, ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ಮತ್ತು ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಶಾಲಾ ನಿರ್ದೇಶಕನೇ ಸ್ಪೈ ಕ್ಯಾಮೆರಾ ಅಳವಡಿಸಿರುವುದು ಪತ್ತೆಯಾಗಿದೆ.
ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿ ನವನೀಶ್ ಆನ್ ಲೈನ್ ನಲ್ಲಿ ರೂ.22 ಸಾವಿರಕ್ಕೆ ಕ್ಯಾಮೆರಾ ಖರೀದಿಸಿರುವುದಾಗಿ ಒಪ್ಪಿಕೊಂಡಿದ್ದಾನೆ.
UP School Director Caught Installing Spy Camera in Women’s Bathroom