ಶಾಲೆಯ ತರಗತಿಯಲ್ಲೇ ಅಶ್ಲೀಲ ಚಿತ್ರ ವೀಕ್ಷಿಸುತ್ತಿದ್ದ ಶಿಕ್ಷಕ, ಮುಂದೇನಾಯ್ತು ಗೊತ್ತಾ?
ಕುಲದೀಪ್ ಯಾದವ್ ಎಂಬ ಶಿಕ್ಷಕ ತರಗತಿಯಲ್ಲಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುವುದನ್ನು ಕಂಡು ವಿದ್ಯಾರ್ಥಿಗಳು ಅವರನ್ನು ನೋಡಿ ನಕ್ಕಿದ್ದಾರೆ. ಇದರಿಂದ ಕುಪಿತಗೊಂಡ ಆತ ಬಾಲಕನಿಗೆ ಹೊಡೆದಿದ್ದಾನೆ.
ಉತ್ತರಪ್ರದೇಶ: ಉತ್ತರ ಪ್ರದೇಶದ ಝಾನ್ಸಿಯಲ್ಲಿ ಶಿಕ್ಷಕನೊಬ್ಬ ವಿದ್ಯಾರ್ಥಿಯನ್ನು ತಳಿಸಿದ್ದಾನೆ. ತರಗತಿಯಲ್ಲೆ ಪೋರ್ನ್ ವೀಡಿಯೋಗಳನ್ನು ನೋಡುತ್ತಿದ್ದ ವಿದ್ಯಾರ್ಥಿಯನ್ನು ನೋಡುತ್ತಿದ್ದ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ತೀವ್ರವಾಗಿ ಥಳಿಸಿದ್ದಾನೆ.
ಹಲ್ಲೆ ಕುರಿತು ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ. ಕುಲದೀಪ್ ಯಾದವ್ ಎಂಬ ಶಿಕ್ಷಕ ತರಗತಿಯಲ್ಲಿ ಅಶ್ಲೀಲ ವೀಡಿಯೊಗಳನ್ನು ವೀಕ್ಷಿಸುವುದನ್ನು ಕಂಡು ವಿದ್ಯಾರ್ಥಿಗಳು ಅವರನ್ನು ನೋಡಿ ನಕ್ಕಿದ್ದಾರೆ. ಇದರಿಂದ ಕುಪಿತಗೊಂಡ ಆತ ಬಾಲಕನಿಗೆ ಹೊಡೆದಿದ್ದಾನೆ.
“ಶಿಕ್ಷಕರು ನನ್ನ ಮಗನ ಮತ್ತು ಇತರರನ್ನು ಹಿಡಿದು ಹೊಡೆದಿದ್ದಾರೆ. ಪರಿಣಾಮವಾಗಿ, ಕಿವಿ ಗಾಯಗೊಂಡಿದೆ. ಅಲ್ಲದೆ ಶಿಕ್ಷಕ ಅವಾಚ್ಯ ಶಬ್ದಗಳಿಂದ ನಿಂದಿಸಿ ಕೋಲಿನಿಂದ ಥಳಿಸಿದ್ದಾರೆ ಎಂದು ಮಕ್ಕಳ ಪೋಷಕರು ದೂರಿದ್ದಾರೆ, ಘಟನೆ ಕುರಿತು ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಬಾಲಕನ ತಂದೆ ಜೈ ಪ್ರಕಾಶ್ ಹೇಳಿದ್ದಾರೆ.
ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಶಿಕ್ಷಕನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಬಾಲಕನ ತಂದೆ ನೀಡಿದ ದೂರಿನ ಮೇರೆಗೆ ಶಿಕ್ಷಕನನ್ನು ಬಂಧಿಸಲಾಗಿದೆ. ತರಗತಿಯಲ್ಲಿ ಪೋರ್ನ್ ವೀಡಿಯೊ ನೋಡುತ್ತಿದ್ದ ಶಿಕ್ಷಕ, ಮಕ್ಕಳು ನೋಡಿದರು ಎಂಬ ಕಾರಣಕ್ಕೆ ಥಳಿಸಿದ್ದಾರೆ ಎನ್ನಲಾಗಿದೆ. ತಂದೆಯ ದೂರಿನ ಮೇರೆಗೆ ಶಿಕ್ಷಕನನ್ನು ಬಂಧಿಸಲಾಗಿದೆ.
UP Teacher Allegedly Caught Viewing Inappropriate Content in Classroom