ಆಧಾರ್ ಅಪ್ಡೇಟ್ಗೆ ಹೊಸ ಆಪ್ ಲಾಂಚ್! ಇನ್ಮುಂದೆ ಮೊಬೈಲ್ನಲ್ಲೇ ಎಲ್ಲಾ
ಆಧಾರ್ ಕಾರ್ಡ್ ನವೀಕರಣ ಇನ್ನು ಹೆಚ್ಚು ಸುಲಭವಾಗಲಿದೆ. ನವೆಂಬರ್ ಬಳಿಕ ಹೊಸ ಆಪ್ ಮೂಲಕ ನೀವು ಮೊಬೈಲ್ನಲ್ಲೇ ಹೆಸರು, ವಿಳಾಸ, DOB ಸೇರಿ ಎಲ್ಲವನ್ನೂ ತಿದ್ದಬಹುದಾಗಿದೆ.

- ನವೆಂಬರ್ನಲ್ಲಿ ಹೊಸ ಆಪ್ ಲಾಂಚ್ ಆಗಲಿದೆ
- ಮೊಬೈಲ್ ಮೂಲಕ ಆಧಾರ್ ನವೀಕರಣ ಸಾಧ್ಯ
- ಕೇವಲ ಬಯೋಮೆಟ್ರಿಕ್ಗಾಗಿ ಸೇವಾ ಕೇಂದ್ರಕ್ಕೆ ಭೇಟಿ
ಇನ್ನು ಮುಂದೆ ಆಧಾರ್ (Aadhaar Update) ನವೀಕರಣಕ್ಕೆ ಸರ್ಕಾರಿ ಕಚೇರಿಗಳ ಸುತ್ತಮುತ್ತ ಓಡಾಡಬೇಕಾಗಿಲ್ಲ. ಹೊಸತಾಗಿ ಅಭಿವೃದ್ಧಿ ಮಾಡುತ್ತಿರುವ ಆಪ್ ಮೂಲಕ, ನಿಮ್ಮ ಹೆಸರಿನಿಂದ ವಿಳಾಸದವರೆಗೆ ಎಲ್ಲ ಮಾಹಿತಿಯನ್ನು ನೀವು ಮೊಬೈಲ್ ನಲ್ಲೇ ಸುಲಭವಾಗಿ ಬದಲಾಯಿಸಬಹುದು. ಈ ಆಪ್ನ ಲಾಂಚ್ ನವೆಂಬರ್ 2025ಕ್ಕೆ ನಿಗದಿಯಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಈ ಹೊಸ ಆಪ್ನಲ್ಲಿರುವ ಪ್ರಮುಖ ವೈಶಿಷ್ಟ್ಯವೆಂದರೆ, ನಿಮ್ಮ ನೋಂದಾಯಿತ ಮೊಬೈಲ್ ನಂಬರಿಗೆ OTP ಬರುವ ಮೂಲಕ (verification) ಭದ್ರತಾ ದೃಷ್ಟಿಯಿಂದ ನವೀಕರಣ ಮಾಡಲು ಸಾಧ್ಯವಾಗುವುದು. ಇದರಿಂದ ಆಧಾರ್ ಅಪ್ಡೇಟ್ ಮಾಡುವ ಪ್ರಕ್ರಿಯೆ ಸರಳವಾಗಲಿದೆ ಮತ್ತು ಎಲ್ಲರಿಗೂ ಲಭ್ಯವಾಗುವ ರೀತಿಯಲ್ಲಿ ವ್ಯವಸ್ಥೆ ರೂಪಿಸಲಾಗಿದೆ.
ಇದನ್ನೂ ಓದಿ: ರೈತರಿಗೆ ಸಬ್ಸಿಡಿ, ಕೃಷಿ ಉಪಕರಣಗಳ ಖರೀದಿಗೆ ₹3 ಲಕ್ಷದವರೆಗೆ ಸಾಲ ಸೌಲಭ್ಯ
ಆಧಾರ್ ಸೇವಾ ಕೇಂದ್ರಕ್ಕೆ ಹೋಗಬೇಕಾಗಿರುವುದು ಕೇವಲ ಬಯೋಮೆಟ್ರಿಕ್ (biometric) ಅಥವಾ ಕಣ್ಣು ಗುರುತು (IRIS) ನವೀಕರಣಕ್ಕಷ್ಟೇ. ಉಳಿದ ಎಲ್ಲಾ ಮಾಹಿತಿಗಳನ್ನು, ಹಾಗೆ ಮಕ್ಕಳ ಆಧಾರ್ ನವೀಕರಣವೂ ಈ ಆಪ್ ಮೂಲಕ ಮಾಡಬಹುದಾಗಿದೆ. 5 ಮತ್ತು 15 ವರ್ಷದ ಮರುನವೀಕರಣ ಸಹ ಇದರಿಂದ ಸಾಧ್ಯ.
ಈ ಆಪ್ನಲ್ಲಿ ಹೆಸರು (Name), ವಿಳಾಸ (Address), ಹುಟ್ಟಿದ ದಿನಾಂಕ (DOB), ಲಿಂಗ (Gender) ಇತ್ಯಾದಿ ಮಾಹಿತಿಯನ್ನು ತಿದ್ದಬಹುದಾಗಿದ್ದು, ಇಮೇಲ್, ಫೋಟೋ, ಅಥವಾ ಫಿಂಗರ್ಪ್ರಿಂಟ್ ಬದಲಾವಣೆಗೆ ಮಾತ್ರ ₹50 ಫೀಸ್ ಸಹಿತ ಸೇವಾ ಕೇಂದ್ರಕ್ಕೆ ಭೇಟಿ ಅಗತ್ಯವಿದೆ.
ಇದನ್ನೂ ಓದಿ: ಇನ್ಮುಂದೆ ನೀವು ಕೊಟ್ಟ ಚೆಕ್ ಬೌನ್ಸ್ ಆದ್ರೆ ಮುಗೀತು ಕತೆ! ಕಠಿಣ ರೂಲ್ಸ್ ಜಾರಿ
ಈ ಅಪ್ಲಿಕೇಶನ್ನ ಪೂರಕವಾಗಿ ಪ್ರಸ್ತುತ 2 ಸಾವಿರ ಯಂತ್ರಗಳನ್ನು UIDAI ಡೇಟಾಬೇಸ್ಗೆ ಲಿಂಕ್ ಮಾಡಲಾಗಿದೆ ಮತ್ತು ಇನ್ನೂ 98 ಸಾವಿರ ಲಿಂಕ್ ಮಾಡುವ ಕೆಲಸ ಪ್ರಗತಿಯಲ್ಲಿದೆ. ಈ ಕಾರ್ಯ ನವೆಂಬರ್ ಒಳಗೆ ಮುಕ್ತಾಯವಾಗಲಿದೆ.
ಈ ಆಪ್ ಆಧಾರ್ ಅನ್ನು ಇನ್ನಷ್ಟು ಜನಸ್ನೇಹಿಯಾಗಿ, ಸುರಕ್ಷಿತವಾಗಿ ಮತ್ತು ಡಿಜಿಟಲ್ ಪ್ಲಾಟ್ಫಾರ್ಮ್ (digital platform) ಮೂಲಕ ಸುವ್ಯವಸ್ಥಿತವಾಗಿ ಬಳಕೆ ಮಾಡಲು ಸಹಾಯ ಮಾಡಲಿದೆ.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಅಪ್ಡೇಟ್! ತತ್ಕಾಲ್ ಟಿಕೆಟ್ ಬುಕಿಂಗ್ಗೆ ಇನ್ಮುಂದೆ ಹೊಸ ನಿಯಮ
ಭವಿಷ್ಯದಲ್ಲಿ ಆಧಾರ್ ಜೊತೆ ಎಲ್ಲ ದಾಖಲೆಗಳನ್ನು ಹೊಂದಿಸಲು ಸಹ ಇದು ಉಪಯುಕ್ತವಾಗಲಿದೆ – ಜನನ ಪ್ರಮಾಣಪತ್ರದಿಂದ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ನಂಬರ್ (mobile number) ಎಲ್ಲವನ್ನೂ ಲಿಂಕ್ ಮಾಡಬಹುದಾಗಿದೆ.
Update Aadhaar From Your Mobile, New App Launching Soon




