ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್, ಯುವಕ ಆತ್ಮಹತ್ಯೆ
ಡೆಹ್ರಾಡೂನ್: ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಿಜೆಪಿ ಆಡಳಿತವಿರುವ ಉತ್ತರಾಖಂಡದ ಪೌರಿ ಗರ್ವಾಲ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಸತ್ಪುಲಿ ಪ್ರದೇಶದ ಸುಮಿತ್ ಕುಮಾರ್ (23) ಬುಧವಾರ ಕೊತ್ವಾರ್‌ನಲ್ಲಿ ನಡೆದ ಸೇನಾ ನೇಮಕಾತಿ ಪರೀಕ್ಷೆಗೆ ಹಾಜರಾಗಿದ್ದರು. ನಂತರ ಸಂಜೆ ನೌಗಾಂವ್ ಕಮಂದ ಗ್ರಾಮದ ತನ್ನ ಮನೆಗೆ ಮರಳಿದರು.
ಆದರೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ನಾಲ್ಕು ವರ್ಷಗಳ ಗುತ್ತಿಗೆ ಪದ್ಧತಿಯ ‘ಅಗ್ನಿವೀರ’ ಪರೀಕ್ಷೆಯಲ್ಲಿ ಉತ್ತೀರ್ಣರಾಗದೇ ಅವರು ಅಸಮಾಧಾನಗೊಂಡಿದ್ದರು. ಗುರುವಾರ ಬೆಳಗ್ಗೆ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕುಟುಂಬಸ್ಥರಿಂದ ಮಾಹಿತಿ ಪಡೆದ ಪೊಲೀಸರು ಮನೆಗೆ ತೆರಳಿ ಸುಮಿತ್ ಮೃತದೇಹವನ್ನು ಪರಿಶೀಲಿಸಿದರು. ಕಳೆದ ನಾಲ್ಕು ವರ್ಷಗಳಿಂದ ಸೇನಾ ನೇಮಕಾತಿ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
23ನೇ ವರ್ಷಕ್ಕೆ ಕಾಲಿಟ್ಟಿರುವ ಆತನಿಗೆ ಇದೇ ಕೊನೆಯ ಅವಕಾಶವಾಗಿತ್ತು. ಈ ಹಿನ್ನೆಲೆಯಲ್ಲಿ ಅಗ್ನಿವೀರ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಲಿಲ್ಲ ಎಂಬ ಬೇಸರದಿಂದ ಸುಮಿತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ.
ಸುಮಿತ್ ಕುಮಾರ್ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಮೃತನ ಬಳಿ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
upset over failing agniveer exam 23 year old hangs self at home
ಇವುಗಳನ್ನೂ ಓದಿ….
NTR ಸಿನಿಮಾ ತಿರಸ್ಕರಿಸಿದ ಸಮಂತಾ, ಕೇಳಿದಷ್ಟು ಕೊಡಿ ಎಂದು ಪಟ್ಟು
ಅಭಿಷೇಕ್ ಅಂಬರೀಶ್ ಹೊಸ ಸಿನಿಮಾ ಪೋಸ್ಟರ್ ವೈರಲ್
ಯಶ್ ಬಾಲಿವುಡ್ ನಂಬರ್ 1 ಎಂದ ಹಿಂದಿ ಸ್ಟಾರ್ ನಟ
ನಟ ಹರೀಶ್ ರಾಯ್ ಆಸರೆಯಾದ ಸ್ಟಾರ್ ನಟ ಯಾರು
ಪತಿ ಹೆಸರು ಟ್ಯಾಟೂ ಹಾಕಿಸಿಕೊಂಡ ನಟಿ ಮೇಘನಾ ರಾಜ್
ನಟ ದರ್ಶನ್ ಖಡಕ್ ಮಾತಿಗೆ ಬೇರೆ ಚಿತ್ರರಂಗವೂ ಶಾಕ್
ಸಾಯಿ ಪಲ್ಲವಿ ಮಾಡಿದ ತಪ್ಪಿಗೆ ಪಶ್ಚಾತ್ತಾಪ, ಇನ್ಮುಂದೆ ಸಿನಿಮಾ ಮಾಡೋಲ್ಲ