#Watch ಲೋನ್ ಮಂಜೂರು ಮಾಡದ ಬ್ಯಾಂಕ್ ಸಿಬ್ಬಂದಿ ಮೇಲೆ ಗ್ರಾಹಕನಿಂದ ಹಲ್ಲೆ; ವೈರಲ್ ವಿಡಿಯೋ
ಸಾಲ ನೀಡದಿದ್ದಕ್ಕೆ ಬ್ಯಾಂಕ್ ಆಫ್ ಇಂಡಿಯಾ ಉದ್ಯೋಗಿಯ ಮೇಲೆ ಗ್ರಾಹಕ ಹಲ್ಲೆ ನಡೆಸಿದ್ದಾನೆ, ಸದ್ಯ ಘಟನೆಗೆ ಸಂಬಂಧಿಸಿದ ವಿಡಿಯೋ ವೈರಲ್ ಆಗಿದೆ
ಅಹಮದಾಬಾದ್: ಬ್ಯಾಂಕ್‌ನಿಂದ ಸಾಲ (Bank Loan) ಪಡೆಯುವುದು ಅಷ್ಟು ಸುಲಭವಲ್ಲ. ನಾನಾ ದಾಖಲೆಗಳನ್ನು ಸಲ್ಲಿಸಿ ಸೂಕ್ತ ಭದ್ರತೆ ನೀಡಬೇಕು. ಅಗತ್ಯವಿದ್ದರೆ, ಸ್ಥಿರ ಆಸ್ತಿಯನ್ನು ಅಡಮಾನ ಇಡಬೇಕು. ಇಷ್ಟೆಲ್ಲ ಮಾಡಿದರೂ ನಮ್ಮ CIBIL Score ಚೆನ್ನಾಗಿಲ್ಲದಿದ್ದರೆ ಸಾಲ ಸಿಗುವುದು ಕಷ್ಟ. ನಮ್ಮ ಕ್ರೆಡಿಟ್ ಇತಿಹಾಸವನ್ನು ಪರಿಶೀಲಿಸಿದ ನಂತರ ನಮಗೆ ಸಾಲ ನೀಡಲು ಸಾಧ್ಯವಾಗದಿದ್ದರೆ ಬ್ಯಾಂಕ್‌ಗಳು ಏನನ್ನೂ ಮಾಡಲು ಸಾಧ್ಯವಿಲ್ಲ.
Live: ಕನ್ನಡ ಬ್ರೇಕಿಂಗ್ ನ್ಯೂಸ್ ಲೈವ್ ಸುದ್ದಿ ನವೀಕರಣಗಳು 05 02 2023
ಆದರೆ, ಗುಜರಾತ್‌ನ ಬ್ಯಾಂಕ್ ಆಫ್ ಇಂಡಿಯಾದ (Bank Of India) ಗ್ರಾಹಕರೊಬ್ಬರು ಸಾಲ ಮಂಜೂರು ಮಾಡದ ಕಾರಣ ತಾಳ್ಮೆ ಕಳೆದುಕೊಂಡರು. ಇದರಿಂದ ಕೋಪಗೊಂಡ ಆತ ಬ್ಯಾಂಕ್ ಉದ್ಯೋಗಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಈ ದಾಳಿಯ ದೃಶ್ಯಗಳು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿವೆ.
ಬ್ಯಾಂಕ್ ಆಫ್ ಇಂಡಿಯಾ ನಾಡಿಯಾಡ್ ಶಾಖೆಯಲ್ಲಿ ಇದೇ ತಿಂಗಳ 3ರಂದು ದಾಳಿ ನಡೆದಿದೆ. ಸಂತ್ರಸ್ತನ ದೂರಿನ ಆಧಾರದ ಮೇಲೆ ಪೊಲೀಸರು ಹಲ್ಲೆ ನಡೆಸಿದ ಗ್ರಾಹಕರ ವಿರುದ್ಧ ಎಸ್‌ಸಿಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Viral Video An Employee Of The Bank Of India Nadiad Branch Was Thrashed By A Customer Over The Issue Of A Bank Loan
#WATCH | An employee of the Bank of India, Nadiad branch was thrashed by a customer over the issue of a bank loan on 3rd February. Case registered under SC-ST (Prevention of Atrocities Act) in Nadiad Town Police Station#Gujarat pic.twitter.com/JJbMzA2cOO
— ANI (@ANI) February 5, 2023
Follow us On
Google News |
Advertisement