India News

ವೋಟರ್ ಐಡಿ-ಆಧಾರ್ ಲಿಂಕ್ ಕಡ್ಡಾಯ! ಇಲ್ಲಿದೆ ಮಹತ್ವದ ಅಪ್ಡೇಟ್

Voter ID-Aadhaar Link: ವೋಟರ್ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಕುರಿತಾಗಿ ಮಹತ್ವದ ಸಭೆ ನಡೆದಿದ್ದು, ಮುಂದಿನ ಹಂತಗಳು ನಿರ್ಧಾರವಾಗಲಿದೆ. ಈ ಪ್ರಕ್ರಿಯೆ ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯನ್ನು ಹೆಚ್ಚಿಸುವ ನಿರೀಕ್ಷೆಯಲ್ಲಿದೆ.

  • ವೋಟರ್ ಐಡಿ-ಆಧಾರ್ ಲಿಂಕ್ ಕುರಿತು ಮಹತ್ವದ ಸಭೆ
  • ಚುನಾವಣಾ ಆಯೋಗ, ಹೋಂ ಇಲಾಖೆ ಮತ್ತು UIDAI ಅಧಿಕಾರಿಗಳ ಚರ್ಚೆ
  • ನಕಲಿ ಮತದಾರರ ನಿಯಂತ್ರಣಕ್ಕೆ ಹೊಸ ಕ್ರಮಗಳ ನಿರೀಕ್ಷೆ

Voter ID-Aadhaar Link : ವೋಟರ್ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಬಗ್ಗೆ ಮಹತ್ವದ ಸಭೆ ನಡೆದಿದ್ದು, ಈ ಪ್ರಕ್ರಿಯೆ ಗಂಭೀರ ಹಂತ ತಲುಪಿದೆ. ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಡಾ. ಸುಖಬೀರ್ ಸಿಂಗ್ ಸಂಧು, ಡಾ. ವಿವೇಕ್ ಜೋಶಿ ಸೇರಿದಂತೆ ಕೇಂದ್ರ ಹೋಂ ಇಲಾಖೆಯ ಕಾರ್ಯದರ್ಶಿ, ಎಲೆಕ್ಟ್ರಾನಿಕ್ಸ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ, UIDAI ಸಿಇಒ, ಹಾಗೂ ಇತರ ತಂತ್ರಜ್ಞಾನ ತಜ್ಞರು ಭಾಗವಹಿಸಿದ್ದರು.

ರಾಜ್ಯಾಂಗದ ಆರ್ಟಿಕಲ್ 326 (Article 326) ನಿಯಮಾವಳಿಗಳ ಪ್ರಕಾರ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.

ವೋಟರ್ ಐಡಿ-ಆಧಾರ್ ಲಿಂಕ್ ಕಡ್ಡಾಯ! ಇಲ್ಲಿದೆ ಮಹತ್ವದ ಅಪ್ಡೇಟ್

ಇತ್ತೀಚಿನ ದಿನಗಳಲ್ಲಿ ನಕಲಿ ಮತದಾರರ ಕಾರ್ಡ್ ಸಂಬಂಧಿತ ಸಮಸ್ಯೆಗಳು ಹೆಚ್ಚು ಚರ್ಚೆಯಾಗುತ್ತಿದ್ದು, ಇದರಿಂದ ಚುನಾವಣಾ ಪ್ರಕ್ರಿಯೆಯ ನಂಬಿಕೆ ಕುಸಿಯುವ ಭೀತಿ ಉಂಟಾಗಿದೆ.

ಈ ಹಿನ್ನೆಲೆಯಲ್ಲಿ, ವೋಟರ್ ಐಡಿಯನ್ನು ಆಧಾರ್‌ಗೆ ಲಿಂಕ್ ಮಾಡುವ ಪ್ರಕ್ರಿಯೆ ತ್ವರಿತಗೊಳಿಸುವ ಕುರಿತು ಆಯೋಗ ಚರ್ಚೆ ನಡೆಸಿತು. ಮುಂದಿನ ಹಂತದಲ್ಲಿ ಈ ಕಾರ್ಯವನ್ನು ಹೇಗೆ ಅನುಷ್ಠಾನಗೊಳಿಸಬೇಕು ಎಂಬುದರ ಬಗ್ಗೆ ತಜ್ಞರು ಹೆಚ್ಚಿನ ಸಲಹೆಗಳನ್ನು ನೀಡಲಿದ್ದಾರೆ.

ನಕಲಿ ಮತದಾರರ ವಿರುದ್ಧ ಗಂಭೀರ ಕ್ರಮ

Voter id

ಈ ಹಿಂದೆ ಲೋಕಸಭೆ (Lok Sabha)ಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಈ ಕುರಿತು ಪ್ರಶ್ನೆ ಎತ್ತಿದ್ದರು. ಅಷ್ಟೇ ಅಲ್ಲದೆ, ಹಲವಾರು ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ನಿರ್ಧಾರಗಳ ಕುರಿತು ಅನುಮಾನ ವ್ಯಕ್ತಪಡಿಸಿವೆ.

ಕಳೆದ ವಾರದ ವೇಳೆಗೆ, ಚುನಾವಣಾ ಆಯೋಗವು ಹಳೆಯ ಡುಪ್ಲಿಕೇಟ್ ವೋಟರ್ ಐಡಿ ಸಂಖ್ಯೆಗಳ ಸಮಸ್ಯೆಯನ್ನು ಮುಂದಿನ ಮೂರು ತಿಂಗಳೊಳಗೆ ಪರಿಹರಿಸುವ ಭರವಸೆ ನೀಡಿತ್ತು.

ಇದೇ ಹಿನ್ನಲೆಯಲ್ಲಿ, ನಕಲಿ ಮತದಾರರನ್ನು ನಿಯಂತ್ರಿಸುವ ಡಿಜಿಟಲ್ ಪ್ರಕ್ರಿಯೆ (Digital Process) ಅನ್ನು ಇನ್ನಷ್ಟು ಗಟ್ಟಿಗೊಳಿಸಲು ಈ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

UIDAI ತಂತ್ರಜ್ಞರು ನೀಡಿದ ಮಾಹಿತಿಯ ಪ್ರಕಾರ, ವೋಟರ್ ಐಡಿ-ಆಧಾರ್ ಲಿಂಕ್ ಪ್ರಕ್ರಿಯೆಯ ತಾಂತ್ರಿಕ ಅಡಚಣೆಗಳ ಬಗ್ಗೆ ಮುಂದಿನ ದಿನಗಳಲ್ಲಿ ಇನ್ನಷ್ಟು ಚರ್ಚೆ ನಡೆಯಲಿದೆ. ಈ ಪ್ರಕ್ರಿಯೆ ಅಂತಿಮ ಹಂತಕ್ಕೆ ಸಾಗಿದ್ದು, ಶೀಘ್ರದಲ್ಲಿಯೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ.

Voter ID-Aadhaar Link Nears Final Stage

English Summary

Our Whatsapp Channel is Live Now 👇

Whatsapp Channel

Related Stories