ಲಗ್ನ ಪತ್ರಿಕೆಯಲ್ಲಿ ಹುಡುಗಿಯ ಜನ್ಮದಿನಾಂಕ ಕಡ್ಡಾಯ! ಹೊಸ ನಿಯಮ
ರಾಜಸ್ಥಾನ ಸರ್ಕಾರ ಹೊಸ ಆದೇಶ ಹೊರಡಿಸಿದ್ದು, ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಜನ್ಮ ದಿನಾಂಕ ಕಡ್ಡಾಯ. ಬಾಲ್ಯ ವಿವಾಹ ತಡೆಯಲು ಸರ್ಕಾರ ಕಠಿಣ ಕ್ರಮ ಕೈಗೊಂಡಿದ್ದು, ಪ್ರಿಂಟಿಂಗ್ ಪ್ರೆಸ್‌ಗೂ ಹೊಸ ನಿಯಮ ಜಾರಿಗೆ!
- ಮದುವೆ ಆಮಂತ್ರಣ ಪತ್ರಿಕೆಯಲ್ಲಿ ಜನ್ಮ ದಿನಾಂಕ ಕಡ್ಡಾಯ
- ಬಾಲ್ಯ ವಿವಾಹ ತಡೆಗಟ್ಟಲು ಸರ್ಕಾರದ ಹೊಸ ನಿಯಮ
- ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಎದುರಿಸಬೇಕಾಗಬಹುದು
ರಾಜಸ್ಥಾನ ಸರ್ಕಾರ ಇತ್ತೀಚೆಗೆ ಮಹತ್ವದ ಆದೇಶ ಹೊರಡಿಸಿದೆ. ಮದುವೆ ಆಮಂತ್ರಣ ಪತ್ರಿಕೆಯಲ್ಲಿ (Wedding Invitation Card) ವಧು-ವರರ (Bride & Groom) ಜನ್ಮ ದಿನಾಂಕವನ್ನು ಕಡ್ಡಾಯವಾಗಿ ನಮೂದಿಸಬೇಕು ಎಂಬ ಹೊಸ ನಿಯಮ ಜಾರಿಗೆ ಬಂದಿದೆ.
ಈ ನಿಯಮವು ಮುಂಬರುವ ದಿನಗಳಲ್ಲಿ ಇತರ ರಾಜ್ಯಗಳಿಗೂ ವಿಸ್ತರಿಸಬಹುದು ಎಂಬ ನಿರೀಕ್ಷೆಯಿದೆ.
ಇದನ್ನೂ ಓದಿ: 15 ವರ್ಷ ಹಳೆಯ ವಾಹನಗಳಿಗೆ ಪೆಟ್ರೋಲ್, ಡೀಸೆಲ್ ನಿಷೇಧ! ಏಪ್ರಿಲ್ 1ರಿಂದ ಜಾರಿ
ಬಾಲ್ಯ ವಿವಾಹ ತಡೆಗಟ್ಟಲು ಕಠಿಣ ಕ್ರಮ:
ರಾಜಸ್ಥಾನದಲ್ಲಿ ಬಾಲ್ಯ ವಿವಾಹ (Child Marriage) ಪ್ರಕರಣಗಳು ಹೆಚ್ಚುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಪ್ರಕಾರ, ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಜನ್ಮ ದಿನಾಂಕ ಉಲ್ಲೇಖಿಸದಿದ್ದರೆ, ಪ್ರಿಂಟಿಂಗ್ ಪ್ರೆಸ್ ಗಳು ಕಾನೂನಿನ ಅಡಿಯಲ್ಲಿ ಹೊಣೆ ಹೊತ್ತಂತೆ.
ಆಮಂತ್ರಣ ಪತ್ರಿಕೆ ಮುದ್ರಿಸಲು ಹೊಸ ನಿಯಮ:
ಮದುವೆ ಆಮಂತ್ರಣ ಮುದ್ರಣ ಮಾಡಲು ಮೊದಲು ವಧು-ವರರ ಡೇಟ್ ಆಫ್ ಬರ್ತ್ (Date of Birth) ದಾಖಲಾತಿಗಳನ್ನು ಪರಿಶೀಲಿಸಬೇಕು. ಯಾವುದೇ ಮುದ್ರಣಾಲಯ (Printing Press) ಈ ನಿಯಮವನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ.
ನಿಯಮ ಪಾಲನೆ ಇಲ್ಲದಿದ್ದರೆ ಕ್ರಮ:
ಪ್ರೆಸ್‌ಗಳು ಈ ನಿಯಮವನ್ನು ಪಾಲಿಸದೇ ಇದ್ದರೆ, ಅಥವಾ ಬಾಲ್ಯ ವಿವಾಹ ಆಮಂತ್ರಣ ಪ್ರಿಂಟ್ ಮಾಡಿದರೆ, ಪೊಲೀಸರ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಉಲ್ಲಂಘನೆಯ ಪ್ರಕರಣಗಳು ಕಂಡು ಬಂದರೆ ತಕ್ಷಣ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ಆಧಾರ್ ಕಾರ್ಡ್ ಕುರಿತು ಮೋದಿ ಸರ್ಕಾರದಿಂದ ಪ್ರಮುಖ ಘೋಷಣೆ! ಬಿಗ್ ಅಪ್ಡೇಟ್
ಮದುವೆ ಆಮಂತ್ರಣ ಪತ್ರಿಕೆ ಈಗ ಲೀಗಲ್ ಡಾಕ್ಯುಮೆಂಟ್?:
ಈ ಹೊಸ ನಿಯಮದಿಂದ ಮದುವೆ ಆಮಂತ್ರಣ ಪತ್ರಿಕೆ ಕೇವಲ ಆಮಂತ್ರಣ ಪತ್ರವಲ್ಲ, ಮದುವೆಗೆ ಸಂಬಂಧಿಸಿದ ಕಾನೂನಿನ ಪ್ರಕ್ರಿಯೆಗೂ ಪ್ರಮುಖ ದಾಖಲೆ ಆಗಲಿದೆ. ಇದು ಬಾಲ್ಯ ವಿವಾಹ ತಡೆಯಲು ಒಂದು ಹಂತದ ಮುಂದಿನ ಕ್ರಮವೆಂಬಂತೆ ಸರ್ಕಾರ ಹೇಳಿದೆ.
Wedding Invitation Rule Change in Rajasthan
Our Whatsapp Channel is Live Now 👇