ಅಕ್ರಮ ಸಂಬಂಧಕ್ಕೆ ಅಡ್ಡಿ, ಪತಿಯನ್ನು ಕೊಲ್ಲಲು ಪತ್ನಿ ಮಾಸ್ಟರ್ ಪ್ಲಾನ್! ಕೊನೆಗೂ ಬಿತ್ತು ಹೆಣ
ಅಕ್ರಮ ಸಂಬಂಧಕ್ಕಾಗಿ ಪತಿಯನ್ನೇ ಕೊಂದ ಪತ್ನಿ, ಕ್ರೌರ್ಯದ ಘಟನೆಯು ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮವರಂ ತಾಲೂಕಿನ ಮಲ್ಕಾಪುರಂ ಗ್ರಾಮದಲ್ಲಿ ನಡೆದಿದೆ.
- ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪತ್ನಿ ಹತ್ಯೆ
- ಮದ್ಯ ಕುಡಿಸಿ, ತಲೆಗೆ ಬಾಟಲಿಯಿಂದ ಹೊಡೆದು ಕೊಲೆ
- ಪೊಲೀಸರ ತನಿಖೆಯಲ್ಲಿ ಪತ್ನಿ, ಪ್ರಿಯನನ್ನು ಪತ್ತೆಹಚ್ಚಿ ಬಂಧಿಸಿದ ಪ್ರಕರಣ
ಆಂಧ್ರ ಪ್ರದೇಶದ ಶ್ರೀ ಸತ್ಯಸಾಯಿ ಜಿಲ್ಲೆಯ ಧರ್ಮವರಂ ತಾಲೂಕಿನ ಮಲ್ಕಾಪುರಂ ಗ್ರಾಮದ ಕಾಶೀ ಮತ್ತು ಸೌಭಾಗ್ಯ ದಂಪತಿಗಳು ಅಂತರನಾಥಪುರಂ ಗ್ರಾಮದಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಕಾಶೀ ಸೀರೆ ವ್ಯಾಪಾರಕ್ಕಾಗಿ ಹೈದರಾಬಾದ್‌ಗೆ ತೆರಳಿದ ವೇಳೆ, ಸೌಭಾಗ್ಯ ತನ್ನ ಸಹಕೂಲಿ ಕಾರ್ಮಿಕನಾದ ನವಾಜ್ ಜೊತೆ ಅಕ್ರಮ ಸಂಬಂಧ ಬೆಳೆಸಿದಳು.
ಈ ವಿಷಯ ಪತಿ ಕಾಶೀಗೆ ತಿಳಿಯುತ್ತಿದ್ದಂತೆ, ಪತ್ನಿ ಮತ್ತು ಆಕೆಯ ಪ್ರಿಯನ ವಿರುದ್ಧ ಕೋಪಗೊಂಡು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡನು.
ಪತಿಯೊಂದಿಗೆ ಜೀವನ ನಡೆಸಲು ಮನಸ್ಸಿಲ್ಲದ ಪತ್ನಿ, ತನ್ನ ಪ್ರಿಯನೊಂದಿಗೆ ಸೇರಿ ಪತಿಯನ್ನು ಹತ್ಯೆ ಮಾಡಲು ಸ್ಕೆಚ್ ರೂಪಿಸಿದಳು. ಫೆಬ್ರವರಿ 2 ರಂದು, ಪತಿ ಕಾಶೀಗೆ ಮದ್ಯ ಕುಡಿಸಿ, ನವಾಜ್ ಅವನ ತಲೆಗೆ ಬಾಟಲಿಯಿಂದ ಹೊಡೆದು, ಕಲ್ಲಿನಿಂದ ಮುಖಕ್ಕೆ ಹೊಡೆದು ಭೀಕರವಾಗಿ ಕೊಂದರು. ಈ ಕೊಲೆ ಬಳಿಕ, ಪತ್ನಿ ಕೃತ್ಯ ಮುಚ್ಚಿಟ್ಟು, ಪತಿಯ ನಾಪತ್ತೆಯ ಕುರಿತು ಪೊಲೀಸರಿಗೆ ದೂರು ನೀಡಿದಳು.
ಪೊಲೀಸರ ತನಿಖೆಯಲ್ಲಿ ಪತ್ನಿ ಸೌಭಾಗ್ಯ, ಪ್ರಿಯನಾದ ನವಾಜ್ ಮತ್ತು ಸಹಾಯ ಮಾಡಿದ ಮತ್ತೊಬ್ಬ ಆರೋಪಿ ಗೌಸ್ ಬಂಧನಕ್ಕೊಳಗಾದರು. ಕ್ಷಣಿಕ ಆನಂದಕ್ಕಾಗಿ ಪ್ರಿಯನೊಂದಿಗೆ ಜೀವನ ಸಾಗಿಸಲು ಪತಿಯನ್ನೇ ಬಲಿ ಕೊಟ್ಟ ಪತ್ನಿ ಸೌಭಾಗ್ಯ, ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾಳೆ.
Wife Kills Husband with Lover for an Illicit Affair
Our Whatsapp Channel is Live Now 👇