ಚಪ್ಪಲಿ ಕೊಡಿಸಿಲ್ಲ ಅಂತ ಗಂಡನ ವಿರುದ್ಧ ಪೊಲೀಸ್ ದೂರು! ಮುಂದೇನಾಯ್ತು?
ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ಜಗಳ, ವಿಚಾರ ಕೋರ್ಟ್ (Court) ವರೆಗೆ, ಹೈ ಹೀಲ್ಸ್ (High Heels) ಕೊಡಿಸಲಿಲ್ಲ ಎನ್ನುವ ಕಾರಣಕ್ಕೆ ಪತ್ನಿ ವಿಚ್ಛೇದನಕ್ಕೆ ಅರ್ಜಿ
- ಪತ್ನಿಗೆ ಹೈ ಹೀಲ್ಸ್ ಕೊಡಿಸಲು ನಿರಾಕರಿಸಿದ ಗಂಡ
- ಚಪ್ಪಲಿ ವಿಚಾರ ವಿವಾದವಾಗಿ ವಿಚ್ಛೇದನ ಹಂತಕ್ಕೆ
- ಕುಟುಂಬ ಸಲಹಾ ಕೇಂದ್ರದ ಮಧ್ಯಸ್ಥಿಕೆ
ಮದುವೆಯ ಬಳಿಕ ಗಂಡ-ಹೆಂಡತಿಯ ಮಧ್ಯೆ ಸಣ್ಣ-ಪುಟ್ಟ ಮನಸ್ತಾಪಗಳು ಸಹಜ. ಆದರೆ ಉತ್ತರ ಪ್ರದೇಶದ (Uttar Pradesh) ಆಗ್ರಾದಲ್ಲಿ (Agra) ನಡೆದ ಈ ಘಟನೆ ಎಲ್ಲರಿಗೂ ಅಚ್ಚರಿ ಮೂಡಿಸುವಂತಹದ್ದಾಗಿದೆ.
ಪತ್ನಿಗೆ ಗಂಡ ಹೈ ಹೀಲ್ಸ್ (High Heels) ಕೊಡಿಸಲು ನಿರಾಕರಿಸಿದ ಕಾರಣ ಕೌಟುಂಬಿಕ ಕಲಹ ಉಂಟಾಗಿ ವಿಚಾರ ನೇರವಾಗಿ ಕೋರ್ಟ್‌ಗೆ ತಲುಪಿದೆ.
2024ರಲ್ಲಿ ವಿವಾಹವಾದ ಈ ದಂಪತಿ, ಮದುವೆಯ ನಂತರ ಶಾಪಿಂಗ್‌ಗೆ ಹೋಗಿದ್ದಾಗ ಪತ್ನಿ ಗಂಡನಿಗೆ ಹೊಸ ಚಪ್ಪಲಿ ಕೊಡಿಸುವಂತೆ ಕೇಳಿದ್ದಳು, ಗಂಡ ಸಹ ಖರೀದಿಸಿ ಕೊಟ್ಟನು. ಆದರೆ ಹೈ ಹೀಲ್ಸ್ ಧರಿಸಿ ನಡೆದಾಗ ಪತ್ನಿ ಬಿದ್ದು ಗಾಯಗೊಂಡಿದ್ದಳು. ಇದರಿಂದ ಗಂಡ ತೀವ್ರ ಕೋಪಗೊಂಡು, ಇನ್ನು ಮುಂದೆ ಹೀಗೆ ಧರಿಸಬೇಡ ಎಂದು ಸಲಹೆ ಕೊಟ್ಟನು.
ಆದರೆ ಪತ್ನಿ ಮತ್ತೆ ಹೈ ಹೀಲ್ಸ್ ಬೇಕೆಂದು ಕೇಳಿದಾಗ, ಗಂಡ ಅದನ್ನು ಕೊಡಿಸಲು ನಿರಾಕರಿಸಿದ್ದಾನೆ. ಈ ಕಾರಣಕ್ಕೆ ಇಬ್ಬರ ನಡುವೆ ವಾಕ್ಸಮರ ನಡೆದಿದ್ದು, ಕೌಟುಂಬಿಕ ಜಗಳ ಗಂಭೀರ ಸ್ಥಿತಿಗೆ ತಲುಪಿತು. ಕೊನೆಗೆ ಪತ್ನಿ ಪೊಲೀಸ್ (Police) ಠಾಣೆಯಲ್ಲಿ ದೂರು ನೀಡಿದಳು. ಆದರೆ ಪೊಲೀಸರು ದಂಪತಿಯನ್ನು ಸಮಾಧಾನ ಪಡಿಸಿ ಕಳುಹಿಸಿದರು.
ಕೋಪಗೊಂಡ ಪತ್ನಿ ತನ್ನ ತವರು ಮನೆಗೆ ಮರಳಿದ್ದು, ಕೆಲವು ದಿನಗಳ ಬಳಿಕ ಕೋರ್ಟ್‌ನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದ್ದಾಳೆ. ಆದರೆ, ಕೋರ್ಟ್ ಈ ಪ್ರಕರಣವನ್ನು ಕುಟುಂಬ ಸಲಹಾ ಕೇಂದ್ರಕ್ಕೆ ವರ್ಗಾಯಿಸಿತು. ಕುಟುಂಬ ಸಲಹಾ ಕೇಂದ್ರದಲ್ಲಿ ನಡೆಸಿದ ಸಮಾಲೋಚನೆಯ ಬಳಿಕ ದಂಪತಿ ಪರಸ್ಪರ ಮನವರಿಕೆ ಮಾಡಿಕೊಂಡು, ರಾಜಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರದ ಸಲಹೆಗಾರರು ತಿಳಿಸಿದ್ದಾರೆ.
Wife Seeks Divorce Over High Heels Dispute
Our Whatsapp Channel is Live Now 👇