ಎಟಿಎಂ ಮೂಲಕವೇ ಡ್ರಾ ಮಾಡಿಕೊಳ್ಳಬಹುದು PF ಹಣ! ಇಲ್ಲಿದೆ ಮಾಹಿತಿ
ಉದ್ಯೋಗಿಗಳಿಗೆ ತಮ್ಮ ಪಿ ಎಫ್ ಹಣವನ್ನು ಎಟಿಎಂ ಕೇಂದ್ರದಲ್ಲಿಯೇ ವಿಥ್ ಡ್ರಾ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತ ದಾವ್ರಾ ತಿಳಿಸಿದ್ದಾರೆ.
ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) 3.0 ಜಾರಿಗೆ ತರಲು ಮುಂದಾಗಿದೆ. ಇದೇ ವರ್ಷ ಅಂದರೆ 2025 ರಲ್ಲಿ ಉದ್ಯೋಗಿಗಳಿಗೆ ತಮ್ಮ ಪಿ ಎಫ್ ಹಣವನ್ನು ಎಟಿಎಂ ಕೇಂದ್ರದಲ್ಲಿಯೇ ವಿಥ್ ಡ್ರಾ ಮಾಡಲು ಅವಕಾಶ ಕಲ್ಪಿಸಿಕೊಡಲಾಗುತ್ತದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತ ದಾವ್ರಾ ತಿಳಿಸಿದ್ದಾರೆ.
ಹೌದು, ವರ್ಷದ ಆರಂಭದಲ್ಲಿ ಉದ್ಯೋಗಿಗಳಿಗೆ ಗುಡ್ ನ್ಯೂಸ್ ಒಂದನ್ನು ನೀಡಿದೆ ಕೇಂದ್ರ ಸರ್ಕಾರ. ನೌಕರರ ಭವಿಷ್ಯ ನಿಧಿ ಹಣವನ್ನು ಹಿಂಪಡೆಯಲು ಬ್ಯಾಂಕ್ ಗಳಿಗೆ ಅಲೆದಾಡುವ ಅಗತ್ಯವಿಲ್ಲ.
ತಮಗೆ ಅಗತ್ಯವಿದ್ದಾಗ ಎಟಿಎಂ ಕೇಂದ್ರಕ್ಕೆ ಹೋಗಿ ಹಣ ಹಿಂಪಡೆಯಬಹುದು ಎಂದು ತಿಳಿಸಲಾಗಿದೆ. ಕೇಂದ್ರ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಸುಮಿತಾ ದಾವ್ರಾ, EPFO 3.0 ಸದ್ಯದಲ್ಲಿಯೇ ಜಾರಿಗೆ ಬರಲಿದೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಸಿದ್ಧತೆಗಳು ನಡೆದಿದ್ದು ಎಟಿಎಂ ಮೂಲಕವೇ ಉದ್ಯೋಗಿಗಳು ತಮ್ಮ ಪಿಎಫ್ ಹಣವನ್ನು ಪಡೆದುಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಈ ರೈಲಿನಲ್ಲಿ ಎಲ್ಲಾ ಫ್ರೀ ಫ್ರೀ ಫ್ರೀ.. ಟಿಕೆಟ್ ತಗೊಳ್ಳೋದೇ ಬೇಡ! ಉಚಿತ ಪ್ರಯಾಣ
ಕನಿಷ್ಠ ಮಾನವ ಸಂಪನ್ಮೂಲ ಬಳಸುವ ಕಡೆಗೆ ಚಿಂತನೆ!
ಇನ್ನು ಈಗಾಗಲೇ ನೌಕರರಿಗೆ ಭವಿಷ್ಯ ನಿಧಿಯ ಅಗತ್ಯ ಇರುವ ಕಾರಣ, ಅವರು ಮಾಡಿದ ತಕ್ಷಣ ಪ್ರಕ್ರಿಯೆ ಮುಗಿಸಿ ಅವರ ಹಣವನ್ನು ಹಿಂತಿರುಗಿಸುವ ಕೆಲಸಗಳು ಈಗ ತ್ವರಿತವಾಗಿ ಆಗುತ್ತಿದೆ. ಇನ್ನು ಮುಂದೆ ಎಟಿಎಂ ಮೂಲಕ ಕ್ಲೇಮ್ ಮಾಡಿರುವ ಹಣವನ್ನು ಹಿಂಪಡೆಯುವ ವ್ಯವಸ್ಥೆ ಮಾಡಲಿದ್ದೇವೆ ಎಂದು ಕಾರ್ಯದರ್ಶಿ ಹೇಳಿದ್ದಾರೆ.
ಉದ್ಯೋಗಿಗಳಿಗೆ ಉತ್ತಮ ಸೇವೆಯನ್ನು ಒದಗಿಸುವ ಸಲುವಾಗಿ ಐಟಿ ವ್ಯವಸ್ಥೆಯನ್ನು ಚುರುಕುಗೊಳಿಸಿದ್ದೇವೆ ಎಂದಿದ್ದಾರೆ.
ಈಗಾಗಲೇ ಠೇವಣಿ ಮಾಡುತ್ತಿರುವ ಇಪಿಎಫ್ ಮೊತ್ತವನ್ನು 12% ಹೆಚ್ಚಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈಗಾಗಲೇ ಉದ್ಯೋಗಿಗಳು ಮೂಲ ವೇತನದ 12% ನಷ್ಟು ಇಪಿಎಫ್ಓ ಗೇ ನೀಡುತ್ತಿದ್ದಾರೆ. ಇದರಲ್ಲಿ 8.33% ಪಿಂಚಣಿಗೆ ಹಾಗೂ 3.67% ಇ ಪಿ ಎಫ್ ಓ ಗೆ ಸಲ್ಲಿಕೆ ಆಗುತ್ತಿದೆ.
ಇಪಿಎಫ್ಓ ನಿಯಮಗಳು!
ಯಾವುದೇ ಕಂಪನಿಯಲ್ಲಿ ಐದು ವರ್ಷ ಸರ್ವಿಸ್ ಮುಗಿಸಿ ನಂತರ ಕೆಲಸ ಬಿಟ್ಟು ಪಿ ಎಫ್ ಹಣವನ್ನು ಪಡೆದರೆ ಆ ವ್ಯಕ್ತಿ ತೆರಿಗೆ ಪಾವತಿಸುವ ಅಗತ್ಯ ಇರುವುದಿಲ್ಲ. ಇಲ್ಲಿ ಐದು ವರ್ಷ ಒಂದೇ ಕಂಪನಿಯಲ್ಲಿ ಮುಗಿಸಬೇಕಾದ ಅಗತ್ಯವಿಲ್ಲ ಬೇರೆ ಬೇರೆ ಕಂಪನಿಯಲ್ಲಿ ಸೇರಿ ಒಟ್ಟಾರೆಯಾಗಿ ಐದು ವರ್ಷ ಕಂಪ್ಲೀಟ್ ಆಗಿರಬೇಕು.
ಇನ್ನು ಪಿಎಫ್ ನಿಯಮದ ಪ್ರಕಾರ ಕೆಲಸ ಬಿಟ್ಟು ಒಂದು ತಿಂಗಳಿನಲ್ಲಿ ಖಾತೆಯಲ್ಲಿ ಇರುವ 75% ನಷ್ಟು ಪಿಎಫ್ ಹಣವನ್ನು ಹಿಂಪಡೆಯಬಹುದು. ಇನ್ನು ಉಳಿದ 25% ನಷ್ಟು ಪಿಎಫ್ ಹಣವನ್ನು ಕೆಲಸ ಬಿಟ್ಟ ಎರಡು ತಿಂಗಳ ನಂತರ ಪಡೆಯಬಹುದು.
ಉದ್ಯೋಗ ಇಲ್ಲದೆ ಇರುವ ಸಮಯದಲ್ಲಿ ಜನರಿಗೆ ಸಹಾಯಕವಾಗಲಿ ಎನ್ನುವ ಕಾರಣಕ್ಕೆ ಕೇವಲ ಒಂದು ತಿಂಗಳಿನಲ್ಲಿ ಪಿಎಫ್ ಹಣ ಹಿಂಪಡೆಯುವಂತೆ ಮಾಡಲಾಗಿದೆ. ಇದೀಗ ಸುಧಾರಿತ ಟೆಕ್ನಾಲಜಿ ಹಾಗೂ ವ್ಯವಸ್ಥೆಯೊಂದಿಗೆ ಎಟಿಎಂ ಮೂಲಕವೇ ಪಿಎಫ್ ವಿಥ್ ಡ್ರಾ ಮಾಡಲು ಅವಕಾಶ ಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
Withdraw your PF money directly from an ATM