ಕುಡುಕ ಗಂಡನಿಂದ ಬೇಸತ್ತು ಸಾಲ ವಸೂಲಾತಿ ಏಜೆಂಟ್ ಜೊತೆ ಮಹಿಳೆ ಪರಾರಿ
ಬಿಹಾರದಲ್ಲಿ ಮದ್ಯವ್ಯಸನಿ ಗಂಡನಿಂದ ಬೇಸತ್ತು ಸಾಲ ವಸೂಲಾತಿ ಏಜೆಂಟ್ ಜೊತೆ ಓಡಿಹೋಗಿ ಮದುವೆಯಾಗುತ್ತಿರುವ ಮಹಿಳೆಯ ವಿಡಿಯೋ ವೈರಲ್ ಆಗಿದೆ.
- ಪತಿಯ ಹಿಂಸೆಯಿಂದ ಕಂಗೆಟ್ಟ ಪತ್ನಿ ಸಾಲ ವಸೂಲಾತಿ ಏಜೆಂಟ್‌ನೊಂದಿಗೆ ಪರಾರಿ
- ಹಲವು ತಿಂಗಳ ಪರಿಚಯದ ಬಳಿಕ ಪರಸ್ಪರ ಒಪ್ಪಿಗೆ, ದೇವಸ್ಥಾನದಲ್ಲಿ ಮದುವೆ
- ಮದುವೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್
ಬಿಹಾರದ ಜಮುಯ್ ಜಿಲ್ಲೆಯಲ್ಲಿ ಪತಿ ನೀಡುತ್ತಿದ್ದ ಹಿಂಸೆಯಿಂದ ಬೇಸತ್ತ ಮಹಿಳೆ ಸಾಲ ವಸೂಲಾತಿ ಏಜೆಂಟ್‌ನೊಂದಿಗೆ (Loan Recovery Agent) ಪರಾರಿಯಾದ ಘಟನೆ ನಡೆದಿದೆ. ಕರ್ಮ ಟಾಂಡ್ ಗ್ರಾಮದ ನಿವಾಸಿಯಾದ ಈ ಮಹಿಳೆ, ತನ್ನ ಪತಿ ಮದ್ಯಪಾನಕ್ಕೆ ಬಲಿಯಾಗಿದ್ದಾನೆ ಹಾಗೂ ಆಕೆಯ ಮೇಲೆ ದೌರ್ಜನ್ಯ ಮಾಡುತ್ತಿದ್ದ ಎಂದು ಹೇಳಿದ್ದಾಳೆ.
ಸಾಲ ವಸೂಲಾತಿ ಏಜೆಂಟ್ ಪವನ್ ಕುಮಾರ್ ಈ ಗ್ರಾಮದ ರೈತರ ಸಾಲಗಳ ಸಂಗ್ರಹಕ್ಕಾಗಿ ಆಗಾಗ್ಗೆ ಭೇಟಿ ನೀಡುತ್ತಿದ್ದ. ಈ ಸಂದರ್ಭದಲ್ಲಿ ಮಹಿಳೆಯೊಂದಿಗೆ ಅವನಿಗೆ ಪರಿಚಯವಾಗಿ, ಮೊದಲು ಫೋನ್ ಮೂಲಕ ಪ್ರಾರಂಭವಾದ ಸಂಬಂಧ, ನಂತರ ಗಾಢವಾಗಿ ಪರಸ್ಪರ ಪ್ರೀತಿಗೆ ಕಾರಣವಾಯಿತು.
ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ರೈತರಿಗೆ 5 ಲಕ್ಷವರೆಗೆ ಸಾಲ! ಅತೀ ಕಡಿಮೆ ಬಡ್ಡಿ
ಪ್ರೇಮದಿಂದ ವಿವಾಹದ ತನಕ:
ನಾಲ್ಕು ತಿಂಗಳುಗಳ ನಿರಂತರ ಸಂಪರ್ಕದ ಬಳಿಕ, ಮಹಿಳೆ ತನ್ನ ಪತಿಯ ಕಿರುಕುಳವನ್ನು ಸಹಿಸಲಾಗದೆ, ಫೆಬ್ರವರಿ 11ರಂದು ಪವನ್ ಕುಮಾರ್‌ನೊಂದಿಗೆ ಪರಾರಿಯಾಗಿ ತ್ರಿಪುರಾರಿ ಘಾಟ್ ಬಳಿಯಲ್ಲಿರುವ ದೇವಸ್ಥಾನದಲ್ಲಿ ವಿವಾಹವಾದಳು.
ಸ್ಥಳೀಯರು ಈ ವಿಷಯವನ್ನು ಕಂಡು ಬೆಚ್ಚಿಬಿದ್ದಿದ್ದು, ಅವರ ವಿವಾಹದ ದೃಶ್ಯಗಳನ್ನು ವಿಡಿಯೋ ಮಾಡಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಚರ್ಚೆಗೆ ಗ್ರಾಸವಾಗಿದೆ.
जमुई -शराबी पति से परेशान महिला को लोन देने वाले बैंक कर्मी से हो गया प्यार। जिसके बाद वो पति को छोड़कर प्रेमी के साथ फरार हो गयी। मंदिर में जाकर दोनों ने रचा ली शादी.#Bihar #BiharNews #Jamui pic.twitter.com/HauQ2dRdLF
— FirstBiharJharkhand (@firstbiharnews) February 12, 2025
ಮಹಿಳೆಯ ಪ್ರತಿಕ್ರಿಯೆ:
“ನಾನು ನನ್ನ ಪತಿಯೊಂದಿಗೆ ವರ್ಷಗಳಿಂದ ಜೀವನ ಕಷ್ಟಪಟ್ಟು ಸಾಗಿಸುತ್ತಿದ್ದೆ. ಆತ ಯಾವಾಗಲೂ ಮದ್ಯಪಾನ ಮಾಡುತ್ತಿದ್ದ. ಹಿಂಸೆ ನೀಡುತ್ತಿದ್ದ. ಹೀಗಾಗಿ ನನಗೆ ಆಶ್ರಯ ನೀಡಿದ ಪವನ್ ಕುಮಾರ್‌ನೊಂದಿಗೆ ನಾನು ಹೊಸ ಜೀವನ ಆರಂಭಿಸಿದ್ದೇನೆ,” ಎಂದು ಮಹಿಳೆ ಹೇಳಿದ್ದಾರೆ.
ಕೇಂದ್ರದ ಮಹತ್ವದ ಯೋಜನೆ, ಇಂತಹ ಮಹಿಳೆಯರಿಗೆ ₹11,000 ಆರ್ಥಿಕ ನೆರವು!
ಸಮಾಜಿಕ ಪ್ರತಿಕ್ರಿಯೆ:
ಇದರ ಕುರಿತು ಸ್ಥಳೀಯರು ಮಿಶ್ರ ಪ್ರತಿಕ್ರಿಯೆ ನೀಡಿದ್ದು, ಕೆಲವರು ಮಹಿಳೆಯ ನಿರ್ಧಾರವನ್ನು ಖಂಡಿಸಿದರೆ, ಇನ್ನು ಕೆಲವರು ಆಕೆಯ ನಿಲುವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ.
Woman Elopes with Loan Recovery Agent
Our Whatsapp Channel is Live Now 👇