ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಗಂಡನನ್ನು ಕೊಂದು, ಗ್ರೈಂಡರ್‌ನಲ್ಲಿ ರುಬ್ಬಿ..
ಉತ್ತರ ಪ್ರದೇಶದ ಶಂಭಲ್ ಜಿಲ್ಲೆಯಲ್ಲಿ ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ ಪತ್ನಿಯೇ ಹತ್ಯೆ ನಡೆಸಿದ ಘಟನೆ ಭಾರೀ ಸಂಚಲನ ಮೂಡಿಸಿದೆ. ಶವವನ್ನು ತುಂಡರಿಸಿ ಸಾಕ್ಷ್ಯ ಮರೆಮಾಚಲು ಯತ್ನ ನಡೆದಿದೆ.
- ಶಂಭಲ್‌ನಲ್ಲಿ ಪತಿ ಹತ್ಯೆ, ಅಕ್ರಮ ಸಂಬಂಧವೇ ಕಾರಣ
- ಗ್ರೈಂಡರ್‌ನಲ್ಲಿ ರುಬ್ಬಿ ಕಾಲುವೆಗೆ ಎಸೆದ ಆರೋಪ
- ಪತ್ನಿ ಮತ್ತು ಪ್ರಿಯಕರ ಪೊಲೀಸ್ ವಶಕ್ಕೆ, ತನಿಖೆ
ಶಂಭಲ್ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಂಭಲ್ ಜಿಲ್ಲೆಯಲ್ಲಿ ನಡೆದ ಅಮಾನುಷ ಹತ್ಯೆ ಪ್ರಕರಣವು ಬೆಚ್ಚಿಬೀಳಿಸಿದೆ. ಅಕ್ರಮ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾನೆ ಎಂಬ ಕಾರಣಕ್ಕೆ, ಪತ್ನಿಯೇ ತನ್ನ ಪ್ರಿಯಕರನ ಜೊತೆಗೂಡಿ ಪತಿಯನ್ನು ಕ್ರೂರವಾಗಿ ಹತ್ಯೆ ಮಾಡಿದ ಆರೋಪ ಬೆಳಕಿಗೆ ಬಂದಿದೆ.
ಪೊಲೀಸರ ತನಿಖೆಯ ಪ್ರಕಾರ, ರಾಹುಲ್ ಎಂಬ ವ್ಯಕ್ತಿಯನ್ನು ಅವನ ಪತ್ನಿ ರೂಬಿ ಮತ್ತು ಆಕೆಯ ಪ್ರಿಯಕರ ಗೌರವ್ ಸೇರಿ ನವೆಂಬರ್ 18ರಂದು ಕೊಲೆ ಮಾಡಿದ್ದಾರೆ. ಹತ್ಯೆಯ ಬಳಿಕ ಅಪರಾಧದ ಗುರುತುಗಳನ್ನು ಅಳಿಸಲು ಶವವನ್ನು ಗ್ರೈಂಡರ್‌ನಲ್ಲಿ ತುಂಡರಿಸಿ, ಅವಶೇಷಗಳನ್ನು ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಟ್ರ್ಯಾಕ್ ಮೇಲೆ ಉರುಳಿದ ಆಟೋ, ವಂದೇ ಭಾರತ್ ರೈಲಿಗೆ ಸ್ವಲ್ಪದರಲ್ಲೇ ತಪ್ಪಿದ ದುರಂತ
ಹತ್ಯೆಯ ಬಳಿಕ ನಾಟಕ
ಘಟನೆ ನಡೆದ ಬಳಿಕ ರೂಬಿ ಯಾವುದೇ ಅನುಮಾನ ಮೂಡದಂತೆ ವರ್ತಿಸಿದ್ದು, ತನ್ನ ಪತಿ ಕಾಣೆಯಾಗಿದ್ದಾರೆ ಎಂದು ಪೊಲೀಸರಿಗೆ ದೂರು ಕೂಡ ನೀಡಿದ್ದಾಳೆ. ಆದರೆ ತನಿಖೆಯ ವೇಳೆ ಸಂಗ್ರಹಿಸಿದ ಸಾಕ್ಷ್ಯಗಳು ಈ ನಾಟಕವನ್ನು ಬಯಲುಗೊಳಿಸಿವೆ.
ಮೃತ ರಾಹುಲ್‌ನ ಕೈಯಲ್ಲಿದ್ದ ವಿಶಿಷ್ಟ ಟ್ಯಾಟೂ ಪ್ರಕರಣ ಭೇದನೆಗೆ ಪ್ರಮುಖ ಸುಳಿವಾಗಿ ಪರಿಣಮಿಸಿದೆ. ಈ ಗುರುತು ಆಧರಿಸಿ ಪೊಲೀಸರು ತನಿಖೆ ಮುಂದುವರೆಸಿದಾಗ, ಹತ್ಯೆಯ ಸಂಪೂರ್ಣ ಸತ್ಯ ಬಹಿರಂಗವಾಗಿದೆ.
ಇದನ್ನೂ ಓದಿ: ಯುವತಿ ಕೊಂದು ಗೋಣಿಚೀಲದಲ್ಲಿ ಶವ ಪ್ಯಾಕ್ ಮಾಡಿದ ಆರೋಪಿ! ಭಯಾನಕ ಕೃತ್ಯ
ಆರೋಪಿಗಳು ಬಂಧನ
ಪ್ರಕರಣದ ಗಂಭೀರತೆಯನ್ನು ಗಮನಿಸಿ ಪೊಲೀಸರು ರೂಬಿ ಮತ್ತು ಗೌರವ್ ಇಬ್ಬರನ್ನೂ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯಲ್ಲಿ ಇನ್ನೂ ಹಲವು ಶಾಕಿಂಗ್ ಸಂಗತಿಗಳು ಹೊರಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಮತ್ತೆ ಸಮಾಜದಲ್ಲಿ ಅಕ್ರಮ ಸಂಬಂಧಗಳಿಂದ ಉಂಟಾಗುವ ಅಪಾಯಗಳ ಕುರಿತು ಚರ್ಚೆಗೆ ಕಾರಣವಾಗಿದೆ.







