Video; ಟೋಲ್ ಬೂತ್ ಗೆ ಲಾರಿ ಡಿಕ್ಕಿ… ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ

ಅಧಿಕ ಭಾರ ಹೊತ್ತ ಲಾರಿಯೊಂದು ನಿಯಂತ್ರಣ ತಪ್ಪಿ ಟೋಲ್ ಬೂತ್ ಗೆ ಗುದ್ದಿದೆ. ಅಲ್ಲಿದ್ದ ಮಹಿಳೆ ಕೂಡಲೇ ಎಚ್ಚೆತ್ತು ಟೋಲ್ ಬೂತ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ

ಡೆಹ್ರಾಡೂನ್: ಅಧಿಕ ಭಾರ ಹೊತ್ತ ಲಾರಿಯೊಂದು ನಿಯಂತ್ರಣ ತಪ್ಪಿ ಟೋಲ್ ಬೂತ್ ಗೆ ಗುದ್ದಿದೆ. ಅಲ್ಲಿದ್ದ ಮಹಿಳೆ ಕೂಡಲೇ ಎಚ್ಚೆತ್ತು ಟೋಲ್ ಬೂತ್ ಸಿಬ್ಬಂದಿಯನ್ನು ರಕ್ಷಿಸಿದ್ದಾರೆ. ಉತ್ತರಾಖಂಡದ ರಾಜಧಾನಿ ಡೆಹ್ರಾಡೂನ್‌ನಲ್ಲಿ ಶನಿವಾರ ಈ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಟೋಲ್‌ ಬೂತ್‌ನಲ್ಲಿದ್ದ ಕ್ಯಾಬಿನ್‌ಗೆ ಭಾರವಾದ ಲಾರಿಯೊಂದು ಗುದ್ದಿದೆ. ಬಳಿಕ ಅಲ್ಲಿಯೇ ಉರುಳಿ ಬಿದ್ದಿದೆ.

ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿರುವ ವಿಡಿಯೋ ತುಣುಕನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ಭಾನುವಾರ ತಮ್ಮ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ ನಾಲ್ಕು ಲಕ್ಷಕ್ಕೂ ಅಧಿಕ ಮಂದಿ ನೋಡಿದ್ದಾರೆ.

ಮತ್ತೊಂದೆಡೆ, ಟೋಲ್ ಬೂತ್ ಸಿಬ್ಬಂದಿಯನ್ನು ರಕ್ಷಿಸಲು ಹರಸಾಹಸ ಮಾಡಿದ ಮಹಿಳೆಯ ಉಪಕ್ರಮ ಮತ್ತು ಧೈರ್ಯವನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅಲ್ಲದೆ, ಟೋಲ್ ಬೂತ್ ಕ್ಯಾಬಿನ್ ಮುಂಭಾಗದಲ್ಲಿ ರಕ್ಷಣೆಗಾಗಿ ಕಬ್ಬಿಣದ ಸರಳುಗಳನ್ನು ಅಳವಡಿಸಿರುವ ಬಗ್ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರು.

Video; ಟೋಲ್ ಬೂತ್ ಗೆ ಲಾರಿ ಡಿಕ್ಕಿ... ಸಿಬ್ಬಂದಿಯನ್ನು ರಕ್ಷಿಸಿದ ಮಹಿಳೆ - Kannada News

woman saves worker as truck rams into toll booth in dehradun

Follow us On

FaceBook Google News