ಚಿರತೆಗೆ ರಾಖಿ ಕಟ್ಟಿದ ಮಹಿಳೆ ಫೋಟೋ ವೈರಲ್
ಚಿರತೆಗೆ ರಾಖಿ ಕಟ್ಟಿದ ಮಹಿಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಸಾಮಾನ್ಯವಾಗಿ ರಕ್ಷಾ ಬಂಧನದ ವಿಶೇಷವಾಗಿಸಹೋದರಿಯರು ಸಹೋದರರಿಗೆ ರಾಖಿಗಳನ್ನು ಕಟ್ಟುತ್ತಾರೆ. ಆದರೆ ಮಹಿಳೆಯೊಬ್ಬರು ಪ್ರಾಣಿಗೆ ರಾಖಿ ಕಟ್ಟಿದ್ದಾರೆ. ಅದೂ ಸಾಮಾನ್ಯ ಪ್ರಾಣಿಯಲ್ಲ…. ಚಿರತೆ ಮಹಿಳೆ ರಾಖಿ ಕಟ್ಟಿದ್ದಾಳೆ.
ಅನಾರೋಗ್ಯದಿಂದ ಬಳಲುತ್ತಿರುವ ಚಿರತೆಗೆ ಮಹಿಳೆಯೊಬ್ಬರು ರಾಖಿ ಕಟ್ಟಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ರಾಜಸ್ಥಾನದ ಈ ವೈರಲ್ ಫೋಟೋ ನೆಟಿಜನ್‌ಗಳಿಂದ ಬಹಳಷ್ಟು ಕಮೆಂಟ್ ಪಡೆದಿದೆ. ಭಾರತೀಯ ಅರಣ್ಯ ಅಧಿಕಾರಿ ಸುಶಾಂತ ನಂದಾ ಈ ಫೋಟೋವನ್ನು ಹಂಚಿಕೊಂಡಿದ್ದಾರೆ.
ಸುದ್ದಿ ಸೇರಿದಂತೆ ಮನೋರಂಜನೆಯ ವಿಶುಯಲ್ ಸ್ಟೋರೀಸ್ ನೋಡಲು ಕ್ಲಿಕ್ಕಿಸಿ
ಈ ವೈರಲ್ ಚಿತ್ರದಲ್ಲಿ, ಗುಲಾಬಿ ಬಣ್ಣದ ಸೀರೆಯುಟ್ಟ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿರುವ ಚಿರತೆಗೆ ರಾಖಿ ಕಟ್ಟುತ್ತಿರುವುದು ಕಂಡುಬಂದಿದೆ. ಸುಶಾಂತ ನಂದಾ ಅವರು ರಾಜಸ್ಥಾನದ ಮಹಿಳೆಯೊಬ್ಬರು ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಮೊದಲು ಅಸ್ವಸ್ಥ ಚಿರತೆಗೆ ರಾಖಿ ಕಟ್ಟುವ ಮೂಲಕ ವನ್ಯಜೀವಿಗಳ ಮೇಲಿನ ಪ್ರೀತಿಯನ್ನು ತೋರಿಸುವ ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆಯೊಬ್ಬಳು ಕಾಡುಪ್ರಾಣಿಗಳ ಮೇಲೆ ತೋರುವ ಪ್ರೀತಿ ಮತ್ತು ವಾತ್ಸಲ್ಯವನ್ನು ಇಂಟರ್ನೆಟ್ ಸ್ವಾಗತಿಸುತ್ತದೆ ಎಂದು ನೆಟಿಜನ್ ಒಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರರು ಚಿರತೆಗೆ ರಾಖಿ ಕಟ್ಟುವುದು ಪ್ರೀತಿ ಮತ್ತು ವಾತ್ಸಲ್ಯದ ಸಂಕೇತವಾಗಿದೆ ಎಂದು ಹೊಗಳಿದ್ದಾರೆ. ದೇವರು ಅನೇಕ ಜೀವಿಗಳನ್ನು ಸೃಷ್ಟಿಸಿದ್ದಾನೆ ಮತ್ತು ಜಗತ್ತು ಮನುಷ್ಯರಿಗೆ ಮಾತ್ರವಲ್ಲ ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.
woman tied a rakhi to a leopard the photo went viral on social media
Follow us On
Google News |