ಭಾವಿ ಪತಿಯ ಎದುರೇ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ವಿಡಿಯೋ ಚಿತ್ರೀಕರಣ!
ಭಾವಿ ಪತಿಯ ಎದುರೇ ಯುವತಿ ಮೇಲೆ ಕೆಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಭುವನೇಶ್ವರ: ಬಿಜೆಪಿ ಆಡಳಿತವಿರುವ ಒಡಿಶಾದ ಫತೇಘರ್‌ನಲ್ಲಿ ಕಳೆದ ಭಾನುವಾರ ದುಷ್ಕೃತ್ಯವೊಂದು ನಡೆದಿದೆ. ಭಾವಿ ಪತಿಯ ಎದುರೇ ಯುವತಿ ಮೇಲೆ ಕೆಲವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಪೊಲೀಸ್ ವರದಿ ಪ್ರಕಾರ, ಈ ತಿಂಗಳ 20 ರಂದು ಸಂಜೆ, ಸಂತ್ರಸ್ತರಿಬ್ಬರೂ ರಾಮಮಂದಿರದಿಂದ ಮನೆಗೆ ಹಿಂದಿರುಗುತ್ತಿದ್ದಾಗ ಮೂವರು ಯುವಕರು ಅವರನ್ನು ತಡೆದರು. ಇಬ್ಬರನ್ನೂ ಸಮೀಪದ ಕಾಡಿಗೆ ಕರೆದೊಯ್ದು ಯುವಕನಿಗೆ ಚಾಕುವಿನಿಂದ ಬೆದರಿಸಿ ಆತನ ಸಮ್ಮುಖದಲ್ಲೇ ಯುವತಿ (21) ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಈ ದುಷ್ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಲಾಗಿದೆ. ಸಂತ್ರಸ್ತರು ಶುಕ್ರವಾರ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೂವರು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
Young Woman Was Sexually Assaulted In Odisha