ಮೆಟ್ರೋ ನಿಲ್ದಾಣದಲ್ಲಿ ಬರ್ತ್ ಡೇ ಪಾರ್ಟಿ, ಯೂಟ್ಯೂಬ್ ಸೆಲೆಬ್ರಿಟಿ ಬಂಧನ

ನೋಯ್ಡಾ : ಜನಪ್ರಿಯ ಯೂಟ್ಯೂಬರ್ ಗೌರವ್ ತನೇಜಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ತಮ್ಮ ಹುಟ್ಟುಹಬ್ಬದ ಆಚರಣೆಯನ್ನು ಉತ್ತರ ಪ್ರದೇಶ ಮೆಟ್ರೋ ರೈಲು ನಿಲ್ದಾಣದಲ್ಲಿ ನಡೆಸಲಾಗುವುದು ಎಂದು ಘೋಷಿಸಿದರು. ಇದರಲ್ಲಿ ಅವರ ಅಭಿಮಾನಿಗಳೂ ಭಾಗವಹಿಸಲಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ.
ಇದರ ಬೆನ್ನಲ್ಲೇ ಸಾವಿರಾರು ಅಭಿಮಾನಿಗಳು ಮೆಟ್ರೊ ರೈಲು ನಿಲ್ದಾಣದ ಸೆಕ್ಷನ್ 51ಕ್ಕೆ ಮುಗಿಬಿದ್ದರು. ಇದರಿಂದಾಗಿ ಜನಸಂದಣಿಯೂ ಉಂಟಾಯಿತು. ಒಬ್ಬರನ್ನೊಬ್ಬರು ಮುಂದಕ್ಕೆ ತಳ್ಳುವ ಪರಿಸ್ಥಿತಿ ಇತ್ತು.
ಇದರಿಂದ ರೈಲು ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೂ ತೊಂದರೆಯಾಯಿತು. ಅಭಿಮಾನಿಗಳ ನೂಕುನುಗ್ಗಲು ನಿಯಂತ್ರಿಸಲು ಸಾಧ್ಯವಾಗದೆ ಮೆಟ್ರೋ ರೈಲ್ವೇ ಆಡಳಿತ ಮಂಡಳಿಗೆ ತಲೆನೋವಾಗಿ ಪರಿಣಮಿಸಿತು. ಮೆಟ್ರೊ ರೈಲು ನಿಲ್ದಾಣದಲ್ಲಿ ಹುಟ್ಟುಹಬ್ಬದ ಆಚರಣೆಯಿಂದ ಗೊಂದಲ ಉಂಟಾಯಿತು.
ಇದರಿಂದ ಆ ಭಾಗದ ಸಂಚಾರಕ್ಕೂ ತೊಂದರೆಯಾಯಿತು. ಈ ವಿಷಯ ತಿಳಿದ ಪೊಲೀಸರು ರಸ್ತೆಯಲ್ಲಿ ಸಿಲುಕಿದ್ದ ವಾಹನಗಳನ್ನು ತೆರವುಗೊಳಿಸುವ ಕಾರ್ಯದಲ್ಲಿ ತೊಡಗಿದರು.
ಬಿಕ್ಕಟ್ಟಿನ ನಡುವೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ತಕ್ಷಣವೇ ನಿಷೇಧಾಜ್ಞೆ 144 ಅನ್ನು ಹೊರಡಿಸಲಾಯಿತು. ಇದಾದ ಬಳಿಕ ತಡೆಯಾಜ್ಞೆ ಉಲ್ಲಂಘಿಸಿದ್ದಕ್ಕಾಗಿ ಪೊಲೀಸರು ತನೇಜಾರನ್ನು ವಶಕ್ಕೆ ಪಡೆದಿದ್ದಾರೆ. ಎರಡು ಗಂಟೆಗಳ ಕಾಲ ಪೊಲೀಸ್ ಕಸ್ಟಡಿಯಲ್ಲಿದ್ದ ನಂತರ ಆತನನ್ನು ಬಿಡುಗಡೆಮಾಡಲಾಯಿತು.
YouTube celebrity arrested at birthday party
ನಾಳೆಯ ದಿನ ಭವಿಷ್ಯ: 12-11-2026, ಗುರುವಾರ
Read the story
ಹಾಸನಾಂಬೆ ಜಾತ್ರೆಗೆ ತೆರೆ; ಮತ್ತೆ ದೇವಿ ದರ್ಶನಕ್ಕೆ ಒಂದು ವರ್ಷ ಕಾಯಬೇಕು
Read the story
ನಮಗೂ 3,600 ದರ ನೀಡಿ; ಹಾವೇರಿ ಕಬ್ಬು ಬೆಳೆಗಾರರ ಪಟ್ಟು
Read the story
ತಾತನ ಆಸ್ತಿಯಲ್ಲಿ ಮೊಮ್ಮಗನಿಗೆ ಹಕ್ಕಿಲ್ಲ! ಹೈಕೋರ್ಟ್ ಮಹತ್ವದ ತೀರ್ಪು
Read the story
ಗುಡ್ ನ್ಯೂಸ್; ರೇಷನ್ ಕಾರ್ಡ್ ಇ-ಕೆವೈಸಿ ಗಡುವು ಮತ್ತೆ ವಿಸ್ತರಣೆ
Read the story



