ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದ ಹಸು, ನೋಡಲು ನೆರೆದ ಜನಸಾಗರ, ವೈರಲ್ ವೀಡಿಯೋ

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಹಸುವೊಂದು ಸಿಂಹದಂತಿರುವ ಕರುವಿಗೆ ಜನ್ಮ ನೀಡಿದೆ. ಇದರಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಆದರೆ, ಕರು ಹುಟ್ಟಿದ 30 ನಿಮಿಷಗಳಲ್ಲಿ ಸಾವನ್ನಪ್ಪಿದೆ.

Bengaluru, Karnataka, India
Edited By: Satish Raj Goravigere

ಮಧ್ಯಪ್ರದೇಶದ ರೈಸನ್ ಜಿಲ್ಲೆಯಲ್ಲಿ ಹಸುವೊಂದು ಸಿಂಹದಂತಿರುವ ಕರುವಿಗೆ ಜನ್ಮ ನೀಡಿದೆ. ಇದರಿಂದ ಗ್ರಾಮಸ್ಥರು ಅಚ್ಚರಿಗೊಂಡಿದ್ದಾರೆ. ಆದರೆ, ಕರು ಹುಟ್ಟಿದ 30 ನಿಮಿಷಗಳಲ್ಲಿ ಸಾವನ್ನಪ್ಪಿದೆ.

ಹೌದು, ಸ್ನೇಹಿತರೆ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಸುವೊಂದು ಸಿಂಹವನ್ನು ಹೋಲುವ ಕರುವಿಗೆ ಜನ್ಮ ನೀಡಿದೆ. ಸಿಂಹದಂತಿರುವ ಈ ಕರು ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿದೆ. ಆದರೆ, ಕರು ಹುಟ್ಟಿದ 30 ನಿಮಿಷಗಳಲ್ಲಿ ಸಾವನ್ನಪ್ಪಿದೆ. ಆದರೆ ಸ್ಥಳಕ್ಕಾಗಮಿಸಿದ ಗುಂಪಿನಿಂದ ಯಾರೋ ಕರುವಿನ ವಿಡಿಯೋ ಮಾಡಿದ್ದಾರೆ. ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ. ಆದರೆ ಗರ್ಭಾಶಯದಲ್ಲಿನ ಸಮಸ್ಯೆಯೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಪಶುವೈದ್ಯರು.

Cow gave birth to lion like calf in Raisen Madhya Pradesh Goes Viral

6 ಹೆಂಡತಿಯರ ಜೊತೆ ಮಲಗಲು 81 ಲಕ್ಷ ಖರ್ಚು ಮಾಡಿ 20 ಅಡಿ ಹಾಸಿಗೆ ಮಾಡಿಸಿದ ಭೂಪ! ವೈರಲ್ ಸುದ್ದಿ

ರೈಸನ್ ಜಿಲ್ಲೆಯ ಬೇಗಂಗಂಜ್ ತೆಹಸಿಲ್ ನ ಗೂರ್ಖಾ ಗ್ರಾಮದಲ್ಲಿ ಈ ಘಟನೆ ಮುನ್ನೆಲೆಗೆ ಬಂದಿದೆ. ಹಸು ಸಿಂಹದಂತಿರುವ ಕರುವಿಗೆ ಜನ್ಮ ನೀಡಿದೆ ಎಂದು ತಿಳಿದ ತಕ್ಷಣ ಗ್ರಾಮದ ಎಲ್ಲಾ ಜನರು ನೆರೆದಿದ್ದರು. ಇದಾದ ನಂತರ ಈ ಮಾಹಿತಿ ಸುತ್ತಮುತ್ತಲಿನ ಪ್ರದೇಶಗಳಿಗೂ ಹರಡತೊಡಗಿತು.

ಪವಾಡದ ಕರುವನ್ನು ನೋಡಲು ಜನರು ಬೇಗಂಗಂಜ್ ತಹಸಿಲ್‌ನ ಗೂರ್ಖಾ ಗ್ರಾಮವನ್ನು ತಲುಪಲು ಪ್ರಾರಂಭಿಸಿದರು. ಆದರೆ, ಕರುವನ್ನು ಉಳಿಸಲಾಗಲಿಲ್ಲ. ಅದು ಹುಟ್ಟಿದ ಅರ್ಧ ಗಂಟೆಯ ನಂತರ ಮೃತಪಟ್ಟಿದೆ.

ರೈತ ನತ್ತುಲಾಲ್ ಶಿಲ್ಪಕರ್ ಅವರ ಮನೆಯ ಬಳಿ ಕರುವನ್ನು ನೋಡಲು ಗ್ರಾಮದಲ್ಲಿ ಜನಸಾಗರವೇ ನೆರೆದಿತ್ತು. ಮೂಢನಂಬಿಕೆಯಿಂದಾಗಿ ಕೆಲವರು ಇದನ್ನು ಪವಾಡ ಎಂದು ಪರಿಗಣಿಸಲು ಪ್ರಾರಂಭಿಸಿದರು.

ಅದೇ ವೇಳೆ ಗರ್ಭಾವಸ್ಥೆಯಲ್ಲಿನ ಸಮಸ್ಯೆಯಿಂದ ಇಂತಹ ಘಟನೆ ಮುನ್ನೆಲೆಗೆ ಬಂದಿದೆ ಎನ್ನುತ್ತಾರೆ ವೈದ್ಯರು. ಪಶುವೈದ್ಯ ಎನ್.ಕೆ.ತಿವಾರಿ ಮಾತನಾಡಿ, ಗರ್ಭಾವಸ್ಥೆಯಲ್ಲಿನ ದೋಷದಿಂದ ಹಸು ಈ ರೀತಿಯ ಕರುವಿಗೆ ಜನ್ಮ ನೀಡಿದೆ. ಸಿಂಹದಂತೆ ಕಾಣುತ್ತದೆ. ಇದು ಪ್ರಕೃತಿಯ ಪವಾಡವಲ್ಲ ಎಂದು ಹೇಳಿದರು. ಭ್ರೂಣವು ಸರಿಯಾಗಿ ಬೆಳವಣಿಗೆಯಾಗದ ಕಾರಣ ಇಂತಹ ಸಮಸ್ಯೆ ಬರುತ್ತದೆ ಎಂದು ವಿವರಿಸಿದರು.

ಬೇಗಂಗಂಜ್ ತಹಸಿಲ್ ನ ಗೂರ್ಖಾ ಗ್ರಾಮ ಪಂಚಾಯಿತಿಯಲ್ಲಿ ಮಂಗಳವಾರ ಬೆಳಗ್ಗೆ 6 ಗಂಟೆಗೆ ರೈತ ನತ್ತುಲಾಲ್ ಶಿಲ್ಪಕರ್ ಅವರ ಹಸು ಕರುವಿಗೆ ಜನ್ಮ ನೀಡಿದೆ. ಕರುವನ್ನು ಕಂಡ ಸಂಬಂಧಿಕರು ಬೆಚ್ಚಿಬಿದ್ದರು. ಕರುವಿನ ಬಾಯಿ ಮತ್ತು ದೇಹದ ಉಳಿದ ಭಾಗವು ಸಿಂಹದಂತೆ ಕಾಣುತ್ತಿತ್ತು.

Cow gave birth to lion like calf

ನಾಥುಲಾಲ್‌ಗೂ ತುಂಬಾ ಆಶ್ಚರ್ಯವಾಯಿತು. ಸ್ವಲ್ಪ ಸಮಯದಲ್ಲೇ ಈ ಸುದ್ದಿ ಬೆಂಕಿಯಂತೆ ಆ ಪ್ರದೇಶದಲ್ಲಿ ಹರಡಿತು. ಗ್ರಾಮದ ಕೆಲವರು ಇದನ್ನು ಪವಾಡವೆಂದು ಪರಿಗಣಿಸಿದ್ದಾರೆ. ಅದರ ಹಿಂದಿರುವ ಗರ್ಭಕೋಶದ ದೋಷವನ್ನು ಪಶುವೈದ್ಯರು ತಿಳಿಸಿದ್ದಾರೆ. ಬಳಿಕ ಮೃತ ಕರುವನ್ನು ಹೂಳಲಾಯಿತು.

Cow gave birth to lion like calf in Raisen Madhya Pradesh Goes Viral