ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ, ಹುಷಾರ್

dont do these and do not fall to Shani's vision

ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ, ಹುಷಾರ್

ಕನ್ನಡ ಕಾರ್ನರ್ : ಹೌದು ಶನಿದೇವನಿಗೆ ಹಿಡಿಸದ ಕೆಲವು ಕಾರ್ಯಗಳಿವೆ , ಅವುಗಳನ್ನು ಮಾಡಿದರೆ ಶನಿದೇವನಿಗೆ ಇಷ್ಟವಾಗುವುದಿಲ್ಲ , ಹಾಗೂ ಅವನ ವಕ್ರ ದೃಷ್ಟಿಗೆ ನಾವು ಬಲಿಯಾಗಬೇಕಾದೀತು. ಆ ಬಗ್ಗೆ ನಿಮಗೆ ನಾನಿಲ್ಲಿ ತಿಳಿಸುತ್ತೇನೆ.

ಶನಿದೇವನು ಹಿಂದೂ ಧರ್ಮದ ಮುಖ್ಯ ದೇವತೆಗಳಲ್ಲಿ ಒಬ್ಬನು. ಶನಿದೇವನನ್ನು ಪ್ರಪಂಚದಾದ್ಯಂತ ಲಕ್ಷಾಂತರ ಹಿಂದೂಗಳು ಪೂಜಿಸುತ್ತಾರೆ.

ಒಬ್ಬರ ಜಾತಕದಲ್ಲಿ ಶನಿಯು ಸ್ಥಾನವನ್ನು ಅವಲಂಬಿಸಿ, ಒಬ್ಬ ವ್ಯಕ್ತಿಯು ಅವನ ಅಥವಾ ಅವಳ ಜೀವನದಲ್ಲಿ ಹಲವಾರು ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳನ್ನು ಅನುಭವಿಸುತ್ತಾನೆ. ಶನಿಯ ಋಣಾತ್ಮಕ ಸ್ಥಾನ ಶನಿದೋಷಕ್ಕೆ ಕಾರಣವಾಗಬಹುದು.

ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ, ಹುಷಾರ್ - Kannada News

ಆದರೆ ಶನಿಯ ಸ್ಥಾನವು ಸಕಾರಾತ್ಮಕವಾಗಿದ್ದರೆ, ಒಬ್ಬ ವ್ಯಕ್ತಿಯು ತಮ್ಮ ಜೀವನದಲ್ಲಿ ಹಲವಾರು ಉತ್ತಮ ಪ್ರಯೋಜನಗಳನ್ನು ಅನುಭವಿಸಬಹುದು.

ಶನಿಯ ಋಣಾತ್ಮಕತೆಯನ್ನು ನಾವು ಧನಾತ್ಮಕವಾಗಿ ತೆಗೆದುಕೊಳ್ಳಬೇಕಾಗಿದೆ. ಭಕ್ತರಿಂದ ಶನಿದೇವ ಏನು ಬೇಕು ಎಂದು ಯಾರಿಗೂ ಕೇಳುವುದಿಲ್ಲ. ಅಲ್ಲದೆ, ಶನಿದೇವ ನಮ್ಮ ಶತ್ರು ಅಲ್ಲ, ಆದರೆ ಸವಾಲುಗಳನ್ನು ಒಡ್ಡುವ ಶಿಕ್ಷಕ. ಆದರೆ ನೀವು ನಿಮ್ಮ ಭಾಗದಲ್ಲಿ ಪ್ರಯತ್ನ ಮಾಡಿದರೆ ಅವುಗಳನ್ನು ಜಯಿಸಲು ಸಾಧ್ಯವಾಗುತ್ತದೆ.

ಶನಿವಾರದಂದು ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ

ಕೆಲವು ಮುಖ್ಯ ಸಲಹೆಗಳನ್ನು ನೀಡಲಾಗಿದೆ ,ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ.

 1. ನಿಮಗೆ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದೇ ಇದ್ದರೆ , ಶನಿಯನ್ನು ನೆನೆಯುವುದನ್ನು ಮರೆಯಬೇಡಿ. ಮುಖ್ಯವಾಗಿ ಶನಿವಾರ.
 2. ಶನಿವಾರದಂದು ಮಾಂಸಾಹಾರ ಮತ್ತು ಮಧ್ಯಪಾನ ಮಾಡಲೇಬೇಡಿ.
 3. ಹನುಮಂತನನ್ನು ಹೆಚ್ಚಿಗೆ ಪೂಜಿಸಿ.
 4. ಸಾಧ್ಯವಾದರೆ ಶನಿವಾರ ಕಡು ನೀಲಿ ಅಥವಾ ಕಪ್ಪು ಬಟ್ಟೆ ಧರಿಸಿ. ( ಶನಿಯ ಪ್ರೀತಿಯ ಬಣ್ಣ )
 5. ತಿಂಗಳಿಗೆ ಒಮ್ಮೆಯಾದರೂ ಕಾಗೆಗಳಿಗೆ ಊಟ ಹೊದಗಿಸಿ.
 6. ಈ ದಿನ ಕಬ್ಬಿಣ , ಅಥವಾ ಕಬ್ಬಿಣದಿಂದ ಮಾಡಿದ ಯಾವುದೇ ವಸ್ತುವನ್ನು ತರಬೇಡಿ.
 7. ಈ ದಿನದಂದು ಉಪ್ಪನ್ನು ಕೊಂಡುಕೊಳ್ಳಬಾರದು ಎಂದು ಕೆಲವು ವಿದ್ವಾಂಸರು ಹೇಳುತ್ತಾರೆ, ಅದು ಬಡತನಕ್ಕೆ ಕಾರಣವಾಗುತ್ತದೆ.
 8. ಈ ದಿನವು ಎಳ್ಳೆಣ್ಣೆಯನ್ನು ಧಾನ ಮಾಡಿದರೆ ಒಳ್ಳೆಯದು , ಆದರೆ ಎಣ್ಣೆಯನ್ನು ಖರೀದಿಸಬಾರದು.
 9. ಕಪ್ಪು ಚಪ್ಪಲಿ , ಕಪ್ಪು ಶೂ , ಧರಿಸಬಾರದು, ಹಾಗೂ ಖರೀದಿಸಬಾರದು.
 10. ಅಧ್ಯಯನ ಮಾಡಲು ಸಂಬಂಧಿಸಿದ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಿ. ( ಕಾಗದ , ಇಂಕ್ , ಮುಂತಾದವುಗಳು )
 11. ಶಿಸ್ತು ಮತ್ತು  ಸ್ವಚ್ಚವಾಗಿರಿ. ( ಸ್ವಚ್ಚತೆ ಶನಿಗೆ ಪ್ರಿಯ )
 12. ದೇವಸ್ಥಾನಕ್ಕೆ ಹೋದ ಮೇಲೆ ಎಳ್ಳೆಣ್ಣೆ ದೀಪ ಹಚ್ಚುವುದನ್ನು ಎಂದಿಗೂ ಮರೆಯಬೇಡಿ.

ಭಕ್ತರಿಂದ ಶನಿದೇವ ಬಯಸುವುದು ಇವನ್ನೇ – ನಿಮ್ಮ ಜೀವನದಲ್ಲಿ ಶನಿಯ ದೃಷ್ಟಿದೋಷವನ್ನು ತಪ್ಪಿಸಲು ಈ ಸಲಹೆಗಳನ್ನು ಅನುಸರಿಸಿ. ಈ ಪರಿಹಾರಗಳನ್ನು ಅನುಸರಿಸಲು ನೀವು ಬಯಸದಿದ್ದರೂ ಸಹ, ಶನಿಯ ಉತ್ತಮ ಮತ್ತು ಕೆಟ್ಟ ಪರಿಣಾಮಗಳನ್ನು ನೆನಪಿಸಿಕೊಳ್ಳಿ ಮತ್ತು ಶನಿದೇವನಿಗೆ ನೀವು ಬಯಸಿದ ದೈನಂದಿನ ಸರಳ ಕೆಲಸಗಳನ್ನು ಮಾಡಿ.

ವಿರುದ್ದವಾಗಿ ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ. ಶನಿದೇವನನ್ನು, ಬೇರೆ ದೇವರುಗಳಂತೆ ಪೂಜಿಸಲು ಸಾಧ್ಯವಿಲ್ಲ. ಋಣಾತ್ಮಕತೆ ಶುದ್ಧೀಕರಿಸುವ ಮೂಲಕ ಶನಿದೇವನನ್ನು ಪೂಜಿಸಬೇಕು.ಅದು ಅದ್ಭುತಗಳನ್ನು ಮಾಡುತ್ತದೆ.////

WebTitle : ಇದನ್ನು ಮಾಡಿ ಶನಿಯ ದೃಷ್ಟಿಗೆ ಬಲಿಯಾಗಬೇಡಿ, ಹುಷಾರ್-dont do these and do not fall to Shani’s vision

>>> ಕ್ಲಿಕ್ಕಿಸಿ ಕನ್ನಡ ನ್ಯೂಸ್  : Kannada CornerLatest Kannada News 

Follow us On

FaceBook Google News